ಬಳ್ಳಾರಿ ಜೂನ್ 23. ಬಳ್ಳಾರಿ ನಗರದ ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ದಿನಾಂಕ : 18-06-2022 ಶನಿವಾರ ಬೆಳಗ್ಗೆ 10:00 ಗಂಟೆಗೆ ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಬಳ್ಳಾರಿ ವತಿಯಿಂದ ಘಟಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಪೋಷಕರಾಗಿ ಡಾ.ಟಿ. ಗಂಗಾಧರ ಗೌಡ ನಿರ್ದೇಶಕರು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಳ್ಳಾರಿ ಇವರು ಭಾಗವಹಿಸಿ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮೆಡಲ್‍ಗಳನ್ನು ಮತ್ತು ಪದವಿ ಪ್ರಧಾನ ಮಾಡಲಾಯಿತು. ತದನಂತರ ಗಂಗಾಧರ್ ಗೌಡನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಭೇದಬಾವಗಳನ್ನು ದೂರವಿಟ್ಟು, ಅವರನ್ನು ಸಿಟ್ಟು ಮಾಡಿಕೊಳ್ಳದೇ ರೋಗಿಗಳನ್ನು ಪ್ರೀತಿಯಿಂದ ಕಾಣಬೆಕು, ನಾವು ತೋರಿಸುವ ಪ್ರೀತಿಯಿಂದಲೇ ಅವರ ಅರ್ದದಷ್ಟು ರೋಗ ಗುಣವಾಗುತ್ತದೆ ಎಂದರು. ನೀವು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂದು ವಿದ್ಯಾರ್ಥಿಗಳನ್ನು ಶುಭ ಹಾರೈಸಿದರು.
ಮುಖ್ಯ ಅತಿಥಿಗಳು ಡಾ.ಸುರೇಶ ಬಿ.ಎಸ್. ಸದಸ್ಯರು ಭಾರತೀಯ ದಂತ ವೈದ್ಯಕೀಯ ಪರಿಷತ್ತು, ನವದೆಹಲಿ ಪ್ರಾಂಶುಪಾಲರು, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು, ಶಿವಮೊಗ್ಗ, ಗೌರವ ಅತಿಥಿಗಳು ಡಾ. ಪ್ರಶಾಂತ ಸಿ.ಎಸ್. ಸಿಂಡಿಕೇಟ್ ಸದಸ್ಯರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ವಕ್ರದಂತ ಚಿಕಿತ್ಸಾ ವಿಭಾಗ ಆರ್.ವಿ. ದಂತ ಮಹಾವಿದ್ಯಾಲಯ, ಬೆಂಗಳೂರು, ವಿಶೇಷ ಆಹ್ವಾನಿತರಾಗಿ ಮೋಹನ್ ರೆಡ್ಡಿ ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು, ಬಳ್ಳಾರಿ, ಡಾ.ಭಾರತಿ ಎಸ್,ಹೆಚ್ ಅಧ್ಯಕ್ಷರು ಪ್ರಾಂಶುಪಾಲರು, ಸರ್ಕಾರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಡಾ.ಮಂಜುನಾಥರೆಡ್ಡಿ ಉಪನಿರ್ದೇಶಕರು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಡಾ.ಶ್ರೀನಿವಾಸ್ ಮೂರ್ತಿ ಉಪನಿರ್ದೇಶಕರು ವೈದ್ಯಕೀಯ ಶಿಕ್ಷಣ ಬೆಂಗಳೂರು, ಡಾ.ಮಂಜುನಾಥ್ ಆರ್.ಕೆ, ವಿಭಾಗ ಮುಖ್ಯಸ್ಥರು, ಸಿಬ್ಬಂದಿ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
.jpg)
0 Comments