Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷದಿಂದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಡಾ|| ಅಶ್ವತ್ಥನಾರಾಯಣ್ ವಿರುದ್ಧ ಪ್ರತಿಭಟನೆ

ದಿನಾಂಕ : 04-05-2022ರಂದು ಭಾರತೀಯ ಜನತಾಪಕ್ಷದ 40% ಪರ್ಸೆಂಟೇಜ್ ಭ್ರಷ್ಟಾಚಾರದ ಸರ್ಕಾರದ ವಿರುದ್ಧ ಮತ್ತು ಪಿಎಸ್‍ಐ ನೇಮಕಾತಿಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥನಾರಾಯಣ್ ರವರ ಪಾತ್ರವಿದೆಯೆಂದು ರಾಜ್ಯದ ಮುಖ್ಯಮಂತ್ರಿಗಳು ಅಶ್ವತ್ಥನಾರಾಯಣ್‍ರವರ ರಾಜೀನಾಮೆ ಕೇಳಿ ಪಡೆಯಬೇಕು. ಅಥವಾ ರಾಜ್ಯಪಾಲರು ಇವರನ್ನು ಸಚಿವ ಸ್ಥಾನದಿಂದ ‘ಡಿಸ್‍ಮಿಸ್’ ಮಾಡಬೇಕು ಎಂದು ಪ್ರತಿಭಟನಾ ರ್ಯಾಲಿಯನ್ನು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‍ಪಕ್ಷದ ಅಭಿಮಾನಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅವರ ಕೈಯಲ್ಲಿ ‘ಭ್ರಷ್ಟಾಚಾರಿ ಅಶ್ವತ್ಥನಾರಾಯಣ್‍ಗೆ ಧಿಕ್ಕಾರ’ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. 40% ಭ್ರಷ್ಟಾಚಾರ ಸರ್ಕಾರಕ್ಕೆ ‘ಧಿಕ್ಕಾರ’, ಗುಳಂ 6ನಾರಾಯಣ್‍ಗೆ ಧಿಕ್ಕಾರ ಎಂಬ ಹ್ಯಾಂಡ್‍ಪೋಸ್ಟರ್‍ಗಳು ರಾರಾಜಿಸುತ್ತಿದ್ದವು.



ಕಾಂಗ್ರೆಸ್ ಹಿರಿಯ ನಾಯಕ ಶ್ರೀಹರಿ ಪ್ರಸಾದ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಏನನ್ನೂ ಸಾಧಿಸಿಲ್ಲ. ಕೇವಲ 40% ಪರ್ಸೆಂಟೇಜ್ ವಸೂಲಾತಿಯಲ್ಲಿ ನಿರತವಾಗಿದೆ. ಡಾ|| ಅಶ್ವತ್ಥನಾರಾಯಣ್ ರವರ ಪಾತ್ರ ಪಿಎಸ್‍ಐ ನೇಮಕಾತಿಯಲ್ಲಿ ಕಂಡುಬರುತ್ತಿದ್ದು, ಸರ್ಕಾರ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚುಹಾಕಲು ಪ್ರಯತ್ನಿಸುತ್ತಿದೆ. ಈ ಕೂಡಲೇ ಡಾ|| ಅಶ್ವತ್ಥನಾರಾಯಣ್‍ರವರ  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೆ ರಾಜಪಾಲರು ಅವರನ್ನು ವಜಾಗೊಳಿಸಬೇಕು. ಈ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿಯವರು ಸಹ ಪಾಲ್ಗೊಂಡಿದ್ದರು. ಅವರು ಸಹ ಭಾರತೀಯ ಜನತಾಪಕ್ಷದ ಸರ್ಕಾರದ ಆಡಳಿತದ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜನಸಾಮಾನ್ಯರಲ್ಲಿ ಭಾರತೀಯ ಜನತಾ ಪಕ್ಷದ ಬಗ್ಗೆ ವಿರೋಧಿ ಅಲೆ ಹೆಚ್ಚಾಗುತ್ತಿದೆ. ಇದಕ್ಕೆ ಸರಿಯಾಗಿ ಸಚಿವರು ಜನಸಾಮಾನ್ಯರೊಂದಿಗೆ ಸರಳ, ಸಜ್ಜನಿಕೆಯ ನಡವಳಿಕೆಯಿಂದ ನಡೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ. ಈಗಲಾದರೂ ಪಕ್ಷದ ಹಿರಿಯ ನಾಯಕ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ 2023ರಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಮತದಾನದಲ್ಲಿ ವ್ಯಕ್ತಪಡಿಸುತ್ತಾರೆ.

Post a Comment

0 Comments

Ad Code

Responsive Advertisement