Ticker

6/recent/ticker-posts

Ad Code

Responsive Advertisement

ದಲಿತರಿಗಾಗಿ 50 ವರ್ಷ ಹಿಂದೆಯೇ ಕ್ರಾಂತಿ ಮೂಡಿಸಿದ್ದ ಪೇಜಾವರ ಶ್ರೀಗಳು!

 ಬೆಂಗಳೂರು: ಮಾಧ್ವ ಪಂಥದ ಶ್ರೇಷ್ಠ ಯತಿಯಾಗಿ, ಸರ್ವ ಸಮಾಜದೊಂದಿಗೆ ಬೆರೆತು, ಧಾರ್ಮಿಕ ವಿವಾದ ಗಳಿಗೆ ಸ್ಪಷ್ಟೀಕರಣ ನೀಡುತ್ತಾ, ಸಾಮರಸ್ಯದ ಆದರ್ಶ ಜೀವನ ಸವೆಸಿದ ವಿಶ್ವೇಶತೀರ್ಥರು ತಮ್ಮ ಇಚ್ಛೆಯಂತೆ ಪೂರ್ಣಪ್ರಜ್ಞ ವಿದ್ಯಾಪೀಠದ ``ಗಂಧದ ಮರ' ವಿದ್ದ ಜಾಗದಲ್ಲೇ ವೃಂದಾವ ನೈಕ್ಯರಾದರು. 


ಮಾಧ್ವ ಸಂಪ್ರದಾಯ ದಂತೆ ಅಂತಿಮ ವಿಧಿವಿಧಾನ ನೆರವೇರುತ್ತಿದ್ದಂತೆ ಸುತ್ತಲೂ ನೆರೆ ದಿದ್ದ ಜನಸ್ತೋಮ, ಭಕ್ತವೃಂದ, ಶಿಷ್ಯಗಣ ನಿರಂತರ ಶ್ಲೋಕ ಪಠಣದಲ್ಲಿ ತೊಡಗಿತ್ತು.

ಮಧ್ವಪಂಥದ ಶ್ರೇಷ್ಠ ಯತಿ ಗಳಲ್ಲಿ ಓರ್ವರಾಗಿ, ಸಣ್ಣ ವಯಸ್ಸಿನಲ್ಲೇ ಸನ್ಯಾಸತ್ವ ಸ್ವೀಕರಿಸಿ, ಎಲ್ಲ ಸಮಾಜದವರೂ ಮೆಚ್ಚಿ, ಪೂಜಿಸುವಂತ ಉತ್ತಮೋತ್ತ ಮರಾಗಿ ಬೆಳೆದು, ತಾವು ಸೃಷ್ಟಿಸಿದ ಶಿಷ್ಯವರ್ಗ, ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಹೇಗಿತ್ತು ಎಂಬುದಕ್ಕೆ ಅಂತಿಮ ಯಾತ್ರೆ ಯ ಧಾರ್ಮಿಕ ಕ್ಷಣಗಳು ಸಾಕ್ಷಿ ಯಾಗಿದ್ದವು. ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತು ನಿರಂತರ ಶ್ಲೋಕಪಠಣ ಮಾಡು ತ್ತಿದ್ದ ಹಿರಿಯ ಕಿರಿಯ ವಿದ್ವಾಂ ಸರ ತಂಡ. ಇನ್ನೊಂದೆಡೆ, ಭಕ್ತಿನಿಭಾವದಿಂದ ಕೈಮುಗಿದು ನಿಂತಿದ್ದ ಭಕ್ತವೃಂದ.

ಹಿಂದೂ ಸಮಾಜದಲ್ಲಿ ಯಾವುದೇ ಧಾರ್ಮಿಕ ವಿವಾದ ಎದ್ದಾಗಲೂ ಅದಕ್ಕೆ ಮುಕ್ತ ಕಂಠದಿಂದ ಶ್ರೀಗಳು ಸ್ಪಷ್ಟೀಕರಣ ನೀಡುತ್ತಿದ್ದರು. ತಮ್ಮ ನಿಲುವನ್ನು ಕಡ್ಡಿಮುರಿದಷ್ಟೇ ಸ್ಪಷ್ಟವಾಗಿ ತೋರ್ಪಡಿಸುತ್ತಿದ್ದರು. ತಮ್ಮನ್ನು ವಿರೋಧಿಸುವವರನ್ನು ಎಂದೂ ವಿರೋಧಿಸಿದವರಲ್ಲ. ಮಾತುಕತೆ, ಸಂವಾದದ ಮೂಲಕ ಎಲ್ಲz Àಕ್ಕೂ ಮುಕ್ತ ವೇದಿಕೆ ಕಲ್ಪಿಸುತ್ತಿ ದ್ದವರು. ದಲಿತ ಕೇರಿಗೆ ಪ್ರವೇಶ, ರಾಮಮಂದಿರ ಹೋರಾಟದ ಮುಂದಾಳತ್ವ, ವಿದ್ವತ್ ಪೂರ್ಣ ಪ್ರವಚನ, ಶಿಷ್ಯರಿಗೆ ನಿತ್ಯಪಾಠ ಹೀಗೆ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡು, ಸಮಾಜಕ್ಕಾಗಿ ಸಮಷ್ಠಿ ದೃಷ್ಟಿಯಿಂದ ಯೋ ಚಿಸಿ, ಸರ್ವವನ್ನು ಸಮಾಜಕ್ಕಾ ಗಿಯೇ ತ್ಯಾಗ ಮಾಡಿದ ಯತಿ ಶ್ರೇಷ್ಠರ ಅಂತಿಮ ಯಾತ್ರೆಯೂ ಅಷ್ಠೆ ಶ್ರೇಷ್ಠವಾಗಿ ನಡೆಯಿತು.

ಯಾವುದೇ ವಿಚಾರದಲ್ಲೂ ವೈಮನಸ್ಸು ಇಲ್ಲದೆ, ಮುಕ್ತವಾಗಿ ಚರ್ಚೆಗೆ ಮುನ್ನುಡಿಯಿಡುತ್ತಿದ ಪೇಜಾವರ ಶ್ರೀಗಳ ಅಂತಿಮ ಗಳಿಗೆಯೂ ಹಾಗೆಯೇ ಇತ್ತು. ಪೂರ್ಣಪ್ರಜ್ಞಾ ವಿದ್ಯಾಪೀಠದ ಸುತ್ತಲೂ ವೇದ, ಮಂತ್ರ ಘೋಷಗಳು, ವಿಷ್ಣುಸಹಸ್ರನಾಮ ಪಠಣ ನಿರಂತರವಾಗಿ ನಡೆ ಯುತ್ತಿರುವಾಗಲೇ ಶ್ರೀಕೃಷ್ಣದೇವ ಸ್ಥಾನ, ಪೂಜಾ ಮಂದಿರ ಹಾಗೂ ತಾವು ವಾಸವಾಗಿದ್ದ ಕೊಠಡಿಯ ಸಮೀಪವೇ ಇದ್ದ ಗಂಧದ ಮರದ ಕೆಳಗೆ ನಿರ್ಮಿಸಿದ ವೃಂದಾವನದಲ್ಲಿ ಶಾಶ್ವತವಾಗಿ ನೆಲೆ ನಿಂತರು.

1950ರ ದಶಕದಲ್ಲಿ ಅತ್ಯಂತ ಶ್ರಮವಹಿಸಿ, ಶ್ರದ್ಧೆ ಹಾಗೂ ಹಲವು ಕಷ್ಟಗಳನ್ನು ಎದುರಿಸಿ, ಹೆಗಲಿಗೆ ಜೋಳಿಗೆ ಕಟ್ಟಿಕೊಂಡು, ಮನೆ ಮನೆಯಲ್ಲಿ ಭಿಕ್ಷೆ ಎತ್ತಿ 1956ರಲ್ಲಿ ಕಟ್ಟಿದ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ತಾವೇ ಸ್ವತಃ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಜತೆಗೆ, ಪ್ರವಚನಗ ಳನ್ನು ಶ್ರೀಗಳು ನೀಡುತ್ತಿದ್ದರು. ಸದಾ ವಿದ್ಯಾರ್ಥಿಗಳೊಂದಿಗೆ ಇರುತ್ತಿದ್ದ ಪೇಜಾವರರು, ತಮ್ಮ ಕಾಲವಾದ ನಂತರವೂ ಇಲ್ಲೇ ಇರಬೇಕು ಎಂಬ ಇಚ್ಛೆಯನ್ನು ಬಹಳ ಸ್ಪಷ್ಟವಾಗಿ ಪೂರ್ಣಪ್ರಜ್ಞಾ ಪ್ರತಿಷ್ಠಾನಕ್ಕೆ ತಿಳಿಸಿದ್ದರು. ಅದರಂತೆ ಅವರ ಅಂತ್ಯಕ್ರಿಯೆ ಯನ್ನು ವಿದ್ಯಾಪೀಠದಲ್ಲೇ ವಿಧಿವತ್ತಾಗಿ ಮಾಡಲಾಯಿತು.

ಇಹ ಲೋಕ ತ್ಯಜಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ ವಿಶೇಷ ಹಾಲಿಕಾಪ್ಟರ್ ಮೂಲಕ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತರಲಾ ಯಿತು. ಅಲ್ಲಿಂದ ತೆರದ ವಾಹ ನದಲ್ಲಿ'' ಹರಿ ಸರ್ವೋತ್ತಮ, ವಾಯು ಜೀವೋತ್ತಮ' ಎಂಬ ಘೋಷಣೆಯೊಂದಿಗೆ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಕತ್ರಿಗುಪ್ಪೆಯಲ್ಲಿರುವ ಪೂರ್ಣ ಪ್ರಜ್ಞಾ ವಿದ್ಯಾಪೀಠಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಸರ್ಕಾರಿ ಗೌರವ, ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾತ್ರಿ ವೃಂದಾವನ ಪ್ರವೇಶ ಮಾಡಲಾಯಿತು.

 ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಮತ್ತು ಅಲ್ಲಿಂದ ವಿದ್ಯಾಪೀಠದ ವರೆಗೆ ಶ್ರೀಗಳ ಪಾರ್ಥಿವ ಶರೀರ ತರಲು ಹೂಗಳಿಂದ ಅಲಂಕರಿ ಸಿದ ತೆರೆದ ವಾಹನ ವ್ಯವಸ್ಥೆ ಮಾಡಲಾಗಿತ್ತು. ವಾಹನದಲ್ಲಿ ಪೀಠ ಅಳವಡಿಸಲಾಗಿತ್ತು. ಡಿಸಿಎಂ ಗೋವಿಂದ ಕಾರಜೋಳ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರ ಮಣ್ಯ, ಬೆಳಗ್ಗೆಯೇ ವಿದ್ಯಾಪೀಠಕ್ಕೆ ತೆರಳಿ ಭದ್ರತೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು. ಮಧ್ಯಾಹ್ನ ಊಟದ ವ್ಯವಸ್ಥೆ: ಪೂರ್ಣ ಪ್ರಜ್ಞಾ ವಿದ್ಯಾಪೀಠಕ್ಕೆ ಸಾವಿರಾರು ಭಕ್ತರು ಬಂದ ಹಿನ್ನೆಲೆಯಲ್ಲಿ, ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಆಯಂಬುಲೆನ್ಸ್ ಸ್ಥಳದಲ್ಲಿದ್ದವು. ಎಲ್ಲ ರಸ್ತೆಯಲ್ಲೂ ಬೆಳಕಿನ ವ್ಯವಸ್ಥೆ: ಶ್ರೀಗಳ ಪಾರ್ಥಿವ ಶರೀರ ಪೂರ್ಣಪ್ರಜ್ಞಾ ವಿದ್ಯಾ ಪೀಠದ ಆವರಣಕ್ಕೆ ಸಂಜೆ ವೇಳೆ ಬರಲಿದ್ದ ಕಾರಣ ಸುತ್ತಲ ರಸ್ತೆಗಳಲ್ಲಿ ಬಿಬಿಎಂಪಿ ವಿದ್ಯುತ್ ವಿಭಾಗದಿಂದ ಬೀದಿ ದೀಪ, ಹೈಮಸ್ಟ್ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ನಿರಂತರ ಮಂತ್ರ ಪಠಣ: ಪೇಜಾವರ ಶ್ರೀಗಳ ಪಾರ್ಥಿವ ಶರೀರ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾ ನದಲ್ಲಿ ಸಾರ್ವಜನಿಕ ಅಂತಿಮ ದರ್ಶನದ ಕಾರ್ಯ ಮುಗಿ ಯುತ್ತಿದ್ದಂತೆ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಸಕಲ ಸರ್ಕಾರಿ ಗೌರವಕ್ಕೆ ವ್ಯವಸ್ಥೆ ಮಾಡಲಾ ಗಿತ್ತು. ಪೀಠದ ಸಮೀಪದಲ್ಲಿ ಸುಮಾರು 50ಕ್ಕೂ ಅಧಿಕ ವೇದ ಪಂಡಿತರು ವಿಷ್ಣು ಸಹಸ್ರ ನಾಮ ಸಾಮೂಹಿಕ ಪಠಣ ನಿರಂತರವಾಗಿ ನಡೆಸಿದರು. ಜ್ವರದ ಬಾಧೆಯಲ್ಲೇ ಎಡಬಿಡದ ಚಟುವಟಿಕೆ: ಡಿ. 17ರಂದು ತಿರುಪತಿಯ ಶ್ರೀನಿವಾಸನ ದರ್ಶನ ಪಡೆದ ಪೇಜಾವರ ಶ್ರೀಗಳಿಗೆ ಜ್ವರಬಾಧೆ ಕಂಡುಬಂದಿತ್ತು. ಡಿ. 18, 2019 ರಂದು ಬೆಂಗಳೂರಿನಲ್ಲಿದ್ದು, ರಾತ್ರಿ ಹಾಸನಕ್ಕೆ ಬಂದು ತಂಗಿದ್ದರು. ಡಿ. 19ರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಮಕುಂಜ ಗ್ರಾಮದಲ್ಲಿರುವ ತಾವು ಹುಟ್ಟಿದ ಮನೆಯಲ್ಲಿ ಪೂಜೆ ಸಲ್ಲಿಸಿ ತಾವು ಕಲಿತ ಮತ್ತು ಉಸ್ತುವಾರಿ ವಹಿಸಿರುವ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಉಡುಪಿ ಜಿಲ್ಲೆಯ ಕಾಪು ತಾಲೂಕು ಪಾಜಕದಲಿ ್ಲರುವ ತಮ್ಮ ಕನಸಿನ ಕೂಸುಗಳಲ್ಲಿ ಒಂದಾದ ಆನಂದತೀರ್ಥ ವಿದ್ಯಾಲಯದ ವಾರ್ಷಿಕೋತ್ಸ ವದಲ್ಲೂ ಪಾಲ್ಗೊಂಡಿದ್ದರು. ಬಳಿಕ 2000-01ರ ತಮ್ಮ ಪರ್ಯಾಯ ಅವಧಿಯಲ್ಲಿ ನಿರ್ಮಿಸಿದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಒಂದು ಸಭೆಯಲ್ಲಿ ಪಾಲ್ಗೊಂಡು ಅರ್ಧಗಂಟೆ ಉಪನ್ಯಾಸವನ್ನೂ ನೀಡಿದ್ದರು. ಇಷ್ಟೆಲ್ಲ ಚಟುವಟಿಕೆ ಗಳನ್ನು ಜ್ವರದಲ್ಲೇ ನಡೆಸಿದ್ದರು. ರಾತ್ರಿ ಉಸಿರಾಟದ ಸಮಸ್ಯೆ ಉಂಟಾದಾಗ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾ ಯಿತು. ಅಲ್ಲಿ ದೊರಕಿದ ಚಿಕಿತ್ಸೆಯಿಂದ ಚೇತರಿಕೆಯಾದ ಕಾರಣ ಆಸ್ಪತ್ರೆಯಿಂದ ಮಠಕ್ಕೆ ಬಂದರು. ಡಿ. 20ರ ಬೆಳಗ್ಗೆ 3.30ರ ಹೊತ್ತಿಗೆ ಮತ್ತೆ ಉಸಿರಾಟದ ಸಮಸ್ಯೆ ತೀವ್ರವಾ ದಾಗ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಯಿತು.

ಆರಂಭದ ದಿನಗಳಲ್ಲಿ ತುಸು ಚೇತರಿಕೆ ಕಂಡುಬಂದರೂ ಡಿ. 26ರ ಬಳಿಕ ಅವರ ಆರೋಗ್ಯ ಮತ್ತೆ ಕ್ಷೀಣಿಸತೊಡಗಿತು. ಕೂಲಂಕಷ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಡಿ.28ರಂದು ವೈದ್ಯರು ಪ್ರಕಟಿಸಿದರು. ಡಿ.29ರ ಬೆಳಗ್ಗೆ ವೆಂಟಿಲೇಟರ್ ಸಹಿತವಾಗಿ ಪೇಜಾವರ ಮಠಕ್ಕೆ ಕರೆತಂದ ಬಳಿಕ ಮಠದಲ್ಲಿ ಅವರು ಇಹ ಲೋಕ ತ್ಯಜಿಸಿದರು. ಇಂಥ ಒಬ್ಬ ಮಹಾಯತಿಗಳನ್ನು ನೋಡುವ, ಅವರ ಮಾತನ್ನು ಕೇಳುವ, ಅವರೊಂದಿಗೆ ಮಾತಾಡುವ ಮಹಾಭಾಗ್ಯ ನನಗೆ ಸಿಕ್ಕಿದ್ದೇ ನನ್ನ ಜೀವನಕ್ಕೆ ಧನ್ಯತೆ ನೀಡಿದೆ. ಪೂಜ್ಯ ವಿಶ್ವೇಶ ತೀರ್ಥರು ಒಬ್ಬ ಯುಗಪುರುಷ. ಆಧ್ಯಾತ್ಮಿಕ ಮೇರುಗಿರಿ. ಸಾಮಾಜಿಕ ಕ್ರಾಂತಿ ಯ ಹರಿಕಾರ. ರಾಷ್ಟ್ರೀಯತೆಯ ಪರಮ ಆರಾಧಕ. ಮಾನ ವೀಯತೆಯ ಮಮತಾ ಮೂರ್ತಿ. ಪರಂಪರೆ-ಆಧುನಿ ಕತೆಗಳ ಸಮನ್ವಯಕ. ಧರ್ಮದ ಯುಗಾನುಕೂಲ ವ್ಯಾಖ್ಯಾ ನಕಾರ. ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಪೇಜಾ ವರ ಶ್ರೀಗಳದ್ದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಷ್ಟ್ರಾ ಭಿಮಾನ ಸಂಸ್ಕೃತಿ ಸಂವರ್ಧಿಸುವ ನಿಟ್ಟಿನಲ್ಲಿ ಶ್ರೀಗಳು ಮಾಡಿದ ಸೇವೆ ಅವಿಸ್ಮರಣೀಯ. ಹಿಂದೂ ಸಂಸ್ಕೃತಿಯ ಪುನರುತ್ಥಾನ ಮತ್ತು ಧರ್ಮ ಪರಂಪರೆ ಸಂರಕ್ಷಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿ ಕೊಂಡಿದ್ದರು. ಅವರ ಆದರ್ಶ ಮೌಲ್ಯಗಳು ಉಳಿಯಲಿ, ಬೆಳೆಯಲಿ.

ಪೇಜಾವರ ಸ್ವಾಮೀಜಿಗಳ ಅಗಲುವಿಕೆಯಿಂದ ಬಹಳ ದುಃಖವಾಗಿದೆ. ವಾಮ  ನಮೂರ್ತಿ ಯಾಗಿದ್ದುಕೊಂಡು ತ್ರಿವಿಕ್ರಮನಾಗಿ ದೇಶವ್ಯಾಪಿ ಬೆಳೆದದ್ದು ಅಚ್ಚರಿ. ಈ ಭಾಗದಲ್ಲಿಯ ಯಾವುದೇ ಸಮಸ್ಯೆಗಳನ್ನೂ ಸಮರ್ಪಕವಾಗಿ ಬಗೆಹರಿಸುತ್ತಿದ್ದರು. ಶ್ರೀಮಠ ಮತ್ತು ತಮ್ಮ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇತ್ತು. ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೇವೆ. ಅವರ ಸೇವೆ ಮರೆಯುವಂತಿಲ್ಲ. ಸತತ ಐವತ್ತು ವರ್ಷಗಳಿಂದ ಪೇಜಾವರ ಶ್ರೀಗಳು ಜನಸೇವೆ, ರಾಷ್ಟ್ರಸೇವೆ ಮಾಡಿಕೊಂಡು ಬಂದಿದ್ದಾರೆ. ಉಮಾಭಾರತಿ ಅವರಿಗೆ ದಿಧೀಕ್ಷೆ ನೀಡುವ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದರು. ಹರಿಜನ ಕೇರಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ಸಾಮಾಜಿಕ ಸಾಮರಸ್ಯ ಬೆಸೆಯುವ ಅವರಲ್ಲಿನ ಆದರ್ಶ ಗುಣ ಸದಾ ಸ್ಮರಣೀಯ.

ಕೆಲವರ ಜತೆ ವಿಶ್ವಾಸ ಮಾಡಿದರೆ ಜಗಳ ಆಡು ವಂತಿಲ್ಲ, ಜಗಳ ಮಾಡಿದರೆ ವಿಶ್ವಾಸದಲ್ಲಿ ಇರುವಂತೆ ಇಲ್ಲ. ಆದರೆ ಪೇಜಾವರ ಶ್ರೀಗಳೊಡನೆ ವಿಶ್ವಾಸ ಮತ್ತು ಜಗಳ ಎರಡೂ ಸಾಧ್ಯವಿತ್ತು. ಅವರ ಜತೆ ಮುಕ್ತ ಸಂವಾದ-ಚರ್ಚೆಗೆ ಅವಕಾಶವಿತ್ತು. ಶ್ರೀಗಳ ಜನಪರ ಕಾಳಜಿಯನ್ನು ವಿಚಾರಭೇದ ಹೊಂದಿದ್ದವರೂ ಒಪ್ಪುತ್ತಿದ್ದರು. ನಮ್ಮ ಹಾಗೂ ಪೂಜ್ಯರ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಗಳಿದ್ದವೇ ಹೊರತು ಮಾನ ವೀಯ ಪ್ರೀತಿ-ವಿಶ್ವಾಸಗಳಿಗೆ ಎಂದೂ ಕೊರತೆಯಾಗಿರಲಿಲ್ಲ.

ಬೆಂಗಳೂರಲ್ಲಿ ವೃಂದಾವನ 

ಶ್ರೀ ವಿಶ್ವೇಶತೀರ್ಥ ಸ್ವಾಮೀ ಜಿಗಳ ವೃಂದಾವನ ಉಡುಪಿ ಯಿಂದ ಸುಮಾರು 350 ಕಿ.ಮೀ ದೂರದ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದೇಕೆ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ತಮ್ಮ ವೃಂದಾವನ ಇಲ್ಲೇ ಆಗಬೇಕು ಎಂದು ನಾಲ್ಕು ವರ್ಷ ಹಿಂದೆಯೇ ಶ್ರೀಗಳು ಬರೆದಿಟ್ಟಿದ್ದರು.

``ನಾನು ಮಕ್ಕಳೊಂದಿಗೇ ಇರಬೇಕು. ನಾನಿಲ್ಲ ಎಂಬ ಕೊರಗು ಮಕ್ಕಳನ್ನು ಎಂದಿಗೂ ಕಾಡಬಾರದು' ಎಂಬ ಉದ್ದೇಶ ದಿಂದ ಶ್ರೀಗಳು ಕೃಷ್ಣೆ„ಕ್ಯರಾಗುವ ಮುನ್ನವೇ ಪೂರ್ಣಪ್ರಜ್ಞಾ ವಿದ್ಯಾಪೀಠದ ಆವರಣದಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಅವರು ವಾಸವಿದ್ದ ಕೊಠಡಿ ಹಾಗೂ ಧ್ಯಾನ ಮಂದಿರದ ಮಧ್ಯದಲ್ಲಿ ರುವ ಜಾಗದಲ್ಲಿ ವೃಂದಾವನ ನಿರ್ಮಿಸಬೇಕು ಎಂದು ಮಠದ ಪುಸ್ತಕದಲ್ಲಿ ದಾಖಲಿಸಿದ್ದರು.

ಪೇಜಾವರ ಶ್ರೀಗಳ ಬೃಂದಾವನ ನಿರ್ಮಿಸುವ ಜಾಗ ದಲ್ಲಿದ್ದ ಶ್ರೀಗಂಧದ ಮರವನ್ನು ಬೃಂದಾವನ ನಿರ್ಮಾಣಕ್ಕಾಗಿ ಸಭಾಗೃಹದ ಹಿಂಭಾಗದಲ್ಲಿರುವ ತುಳಸಿ ವನಕ್ಕೆ ಸ್ಥಳಾಂತರ ಮಾಡಲಾಯಿತು.

ಮೈಸೂರೆಂದರೆ ಅಚ್ಚು ಮೆಚ್ಚು: ಕೃಷ್ಣೆ„ಕ್ಯರಾದ ಉಡುಪಿಯ ಅಷ್ಟಮಠಗಳ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ಉಡು ಪಿಯ ನಂತರ ಅರಮನೆಗಳ ನಗರಿ ಮೈಸೂರು ಎಂದರೆ ಹೆಚ್ಚು ಅಚ್ಚು ಮೆಚ್ಚು. ಕ್ರಾಂತಿಕಾರಿ ಸ್ವಾಮೀಜಿಗಳೆಂದೇ ಹೆಸರಾಗಿದ್ದ ವಿಶ್ವೇಶತೀರ್ಥರು ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತರಾಗಿ ರಲಿಲ್ಲ. ಧಾರ್ಮಿಕ ಕಾರ್ಯಗಳ ಜತೆ ಜತೆಗೆ ಸಮಾಜದ ಚಿಕಿತ್ಸಕರಾಗಿ ಅಸ್ಪೃಶ್ಯತೆ ನಿವಾರಣೆಗಾಗಿ ದಲಿತ ಕೇರಿಗಳಿಗೆ ಭೇಟಿ ನೀಡಿ ಸಮಾಜದಲ್ಲಿ ಸಾಮರಸ್ಯ ಉಂಟುಮಾಡಲು ಸದಾ ಶ್ರಮಿಸುತ್ತಿದ್ದರು.

ಗೌರವ ಪುರಸ್ಕಾರ ದರ್ಶನ: ಪೇಜಾವರ ಶ್ರೀಗಳು ಡಿ.16 ಮತ್ತು 17ರಂದು ತಮ್ಮ 600 ಮಂದಿ ಶಿಷ್ಯರೊಂದಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಪೇಜಾವರ ಶ್ರೀಗಳಿಗೆ ಹೊರ ರಾಜ್ಯದಲ್ಲಿ ನಡೆದ ಅಂತಿಮ ವಿಶೇಷ ಪುರಸ್ಕಾರ ಇದಾಗಿದೆ. ಶ್ರೀಗಳು ತಮ್ಮ ಶಿಷ್ಯರೊಂದಿಗೆ ತಿರುಪತಿ ತಿಮ್ಮಪ್ಪ ಸ್ವಾಮಿಯ ದರ್ಶನ ವ್ಯವಸ್ಥೆಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯು ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ದರ್ಶನದ ನಂತರ ಗೌರವ ಪುರಸ್ಕಾರವನ್ನು ನೀಡಲಾಗಿತ್ತು.

ದಲಿತರಿಗಾಗಿ  50 ವರ್ಷಗಳ ಹಿಂದೆಯೇ ಕ್ರಾಂತಿ ಮೂಡಿಸಿದ್ದ ಪೇಜಾವರ ಶ್ರೀಗಳು!

ಮೈಸೂರು: ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಮುಂದೆಯಿದ್ದ ಪೇಜಾವರ ಶ್ರೀಗಳು ದಲಿತರಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದ್ದರು. 50 ವರ್ಷಗಲ ಹಿಂದೆಯೇ ದಲಿತರ ಕೇರಿಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ ಸಮಾನತೆ ಸಾರಿದ್ದರು. 

ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು. ಈ ವೇಳೆ ಪೇಜಾರ ಶ್ರೀಗಳು ನಗರಕ್ಕೆ ಆಗಮಿಸಿದ್ದರು. ದಲಿತರ ಕೇರಿಗೆ 1969ರಲ್ಲಿ ಶ್ರೀಗಳು ಭೇಟಿ ನೀಡಿದಾಗ ಎಲ್ಲೆಡೆ ಕೊಳಚೆ ತುಂಬಿತ್ತು. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗಿರಲಿಲ್ಲ. ಈ ವೇಳೆ ಸ್ಥಳೀಯ ದಲಿತ ಮುಖಂಡರ ಸೇರಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದರು. ಸ್ಥಳದಲ್ಲಿ ಟೆಂಟ್ ಹಾಕಿದ್ದ ಶ್ರೀಗಳು, ಸತ್ಯನಾರಾಯಣ ಪೂಜೆ ನೆರವೇರಿಸಿ ಎಲ್ಲರಿಗೂ ಪ್ರಸಾದ ವಿತರಿಸಿದ್ದರು. 

ದಲಿತರ ಪರವಾಗಿ ಹೋರಾಟ ನಡೆಸಿದ್ದ ಶ್ರೀಗಳ ವಿರುದ್ದ ಕೆಲ ಟೀಕೆಗಳು ವ್ಯಕ್ತವಾಗಿದ್ದವು. ದಲಿತ ಪರವಾಗಿದ್ದ ಬರಹಗಾರರು ಹಾಗೂ ವಿಚಾರವಾದಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಪಂಕ್ತಿ ಭೇದದ ವಿರುದ್ದ ದಲಿತರು ಪ್ರತಿಭಟನೆ ನಡೆಸಿದ್ದರು. 

ಕೃಷ್ಣಮಠದಲ್ಲಿ ಊಟ ಬಡಿಸುವುದರಲ್ಲಿ ಮೇಲ್ಜಾತಿ ಹಾಗೂ ಕೆಳೆಜಾತಿ ಎಂಬ ಪಂಕ್ತಿಭೇಧದ ನಡೆಸಲಾಗುತ್ತಿದೆ ಎಂದು ದಲಿತರು ಹೋರಾಟ ನಡೆಸಿದ್ದರು. ಇದನ್ನು ಗಮನಿಸಿದ ಶ್ರೀಗಳು ಬಳಿಕ ದಲಿತರ ಕಾಲೋನಿಗೇ ತೆರಳಿ ಅಲ್ಲಿ ದಲಿತರ ಮನೆಗಳಲ್ಲಿ ಪೂಜೆಗಳನ್ನು ನೆರವೇರಿಸಿದ್ದರು. 

2012ರ ಜೂನ್ ತಿಂಗಳಿ ನಲ್ಲಿ ಜಿಲ್ಲೆಯ ರೋಣ ತಾಲೂ ಕಿನ ಕರಮುಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆದಿತ್ತು. 

ಈ ವಿಚಾರ ತಿಳಿದ ಪೇಜಾವರ ಶ್ರೀಗಳು, ಆಸ್ಪತ್ರೆಗೆ ಭೇಟಿ ನೀಡಿ ದಲಿತರ ಆರೋಗ್ಯ ವಿಚಾರಿಸಿದ್ದರು.  ಶ್ರೀಗಳು ದಲಿತರ ಮನೆಗಳಲ್ಲಿ ಆಹಾರ ಸೇವನೆ ಮಾಡಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು. 

ಮುಸ್ಲಿಂ ಅಧಿಕಾರಿಯ ಭಕ್ತಿಯ ಹಠಕ್ಕೆ ಸೋತು ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ್ದ ಪೇಜಾವರ ಶ್ರೀ

ನಗರದ ಸದರ್ ಬಜಾರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಎಂ. ಪಾಷಾ ತಮ್ಮ ಸ್ವಗ್ರಾಮ ತುಮ ಕೂರು ಜಿಲ್ಲೆಯ ನೆರಳಕೇರೆ ಎಂಬಲ್ಲಿ ಪ್ರಾಣ ದೇವರ ದೇವಾ ಲಯ ಕಟ್ಟಿಸಿದ್ದರು. ಆಂಜ ನೇಯ ಮೂರ್ತಿ ಪ್ರತಿಷ್ಠಾಪನೆ ಯನ್ನು ಪೇಜಾವರ ಶ್ರೀಗಳ ಅಮೃತಹಸ್ತದಿಂದ ನೆರವೇರಿ ಸಬೇಕು ಅನ್ನೋ ಅಪೇಕ್ಷೆಯನ್ನು ಹೊಂದಿದ್ದರು. ರಾಯಚೂರು ನಗರಕ್ಕೆ ಪೇಜಾ ವರ ಶ್ರೀಗಳು ಆಗಮಿಸಿದಾಗ ಪೊಲೀಸ್ ಅಧಿಕಾರಿ ಎಂ. ಪಾಷಾ ಶ್ರೀಗಳಲ್ಲಿ ಮನವಿ ಮಾಡಿದ್ದರು. ಆದರೆ ಆಗ ಮುಂದಿನ ಎರಡು ವರ್ಷ ಗಳ ವರೆಗೆ ಕಾರ್ಯಕ್ರಮಗಳು ನಿಗದಿಯಾಗಿವೆ, ಬೇರೆಯ ವರಿಂದ ಪ್ರತಿಷ್ಠಾಪನೆ ಮಾಡಿ ಸಿಕೊಳ್ಳಿ ಅಂತ ಸಲಹೆಯನ್ನು ನೀಡಿದ್ದರು. ಅಧಿಕಾರಿ ಸುಮ್ಮನಿ ರಲ್ಲ ಅವಕಾಶ ಸಿಕ್ಕಾಗಲೆಲ್ಲಾ ಶ್ರೀಗಳಲ್ಲಿ ಮನವಿ ಮಾಡುತ್ತಿ ದ್ದರು. ಕೆಲ ದಿನಗಳ ನಂತರ ಪೇಜಾವರ ಶ್ರೀಗಳವರೇ ಸ್ವತಃ ಆಪ್ತ ಶಿಷ್ಯರಾದ ನರಸಿಂಗರಾವ್ ಅವರಿಗೆ ದೂರವಾಣಿ ಕರೆ ಮಾಡಿ ಪಾಷಾ ನಂಬರ್ ನೀಡಿ ಅವರ ಗ್ರಾಮಕ್ಕೆ ಹೋಗಬೇಕು ಅಂತ ತಿಳಿಸಿದ್ದರು. ಕೊನೆಗೆ ಶ್ರೀಗಳೆ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.  ಶ್ರೀಗಳ ಆಪ್ತ ಶಿಷ್ಯರಾದ ನರಸಿಂಗರಾವ್ ದೇಶಪಾಂಡೆ ಮನೆ ಶ್ರೀಗಳಿಗಾಗಿಯೇ ಮೀಸಲಾಗಿತ್ತು. ಶ್ರೀಗಳ ಪೂಜೆ, ಉಳಿದುಕೊಳ್ಳಲು ಅನು ಕೂಲಕರವಾದ ರೀತಿಯಲ್ಲಿಯೇ ಮನೆಯನ್ನ ಕಟ್ಟಿಸಲಾಗಿತ್ತು. ರಾಯಚೂರಿಗೆ ಬಂದಾಗಲೆಲ್ಲಾ ಶಿಷ್ಯ ನರಸಿಂಗರಾವ್ ಮನೆಯಲ್ಲೇ ಉಳಿದು ಕೊಳ್ಳುತ್ತಿದ್ದರು. ಉಡುಪಿಯ ಕೃಷ್ಣಮಠದ ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಪೇಜಾವರ ಶ್ರೀಗಳು ಕೈಗೊಳ್ಳುವ ಸಂಚಾರದ ಸಂದರ್ಭದಲ್ಲಿ ಭಕ್ತರಿಂದ ಪ್ರತಿ ವರ್ಷ 200 ಕ್ವಿಂಟಾಲ್ ದವಸ ಧಾನ್ಯವನ್ನು ಸಂಗ್ರಹಿಸಿ ನೀಡಲಾಗುತ್ತಿತ್ತು. ಮಂತ್ರಾಲಯದ ಶ್ರೀರಾಘ ವೇಂದ್ರಸ್ವಾಮಿಗಳ ಮಠದಿಂದ ಡಿಸೆಂಬರ್ 14, 15 ಮತ್ತು 16 ರಂದು ನಡೆದ ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು. ಪೇಜಾವರ ಶ್ರೀವಿಶ್ವೇಶ ತೀರ್ಥರು ಜಿಲ್ಲೆಗೆ ಆಗಮಿಸಿ ರುವುದು ಕೊನೆ ಭೇಟಿಯಾಗಿದೆ. ನಂತರ ತಿರುಪತಿಗೆ ತೆರಳಿದರು ಅದಾದ ಬಳಿಕ ಅನಾರೋಗ್ಯ ಕ್ಕೀಡಾದರು. ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೇ ಶ್ರೀ ಕೊನೆಯ ಬಹಿರಂಗ ಕಾರ್ಯಕ್ರಮವೂ ಆಗಿದೆ.

ವಿದ್ಯಾರ್ಥಿ ವಸತಿ ನಿಲಯ ಆರಂಭ: ರಾಯಚೂರಿನಲ್ಲಿ ಅಖಿಲ ಭಾರತ ವಿಶ್ವಮಧ್ವ ಮಹಾಮಂಡಳಿಯಿಂದ 1962ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಡಿಗೆ ಕಟ್ಟಡದಲ್ಲಿ ರಾಘವೇಂದ್ರ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದರು. 

1950ರ ನಂತರ ಪ್ರಥಮ ಬಾರಿಗೆ ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ಪೇಜಾವರ ಶ್ರೀಗಳವರು ಭೇಟಿ ನೀಡಿದ್ದರು. ಅವರ ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರು ಚಾತರ್ಮಾಸ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮುದಗಲ್ ಗ್ರಾಮಕ್ಕೆ ನೋಡ ಬೇಕು ಎಂಬ ಆಪೇಕ್ಷೆಯಿಂದ ಬಂದಿದ್ದರಂತೆ. 

ಕಾರು ಪಲ್ಟಿಯಾಗಿ ಗಾಯ ಗೊಂಡಿದ್ದ ಶ್ರೀಗಳು: 1997 ರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅದರಲ್ಲಿ ಪವಾಡ ರೀತಿಯಲ್ಲಿ ಪ್ರಾಣಾಪಾಯ ದಿಂದ ಶ್ರೀಗಳು ಪಾರಾಗಿದ್ದರು. ನಗರದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳನ್ನ ಮುಗಿಸಿ ಕಾರಿನಲ್ಲಿ ಪೇಜಾವರ ಶ್ರೀಗಳು ತೆರಳುತ್ತಿದ್ದಾಗ ನಗರದ ಹೊರವಲಯದ ತುಂಟಾಪುರ ಗ್ರಾಮದ ಹತ್ತಿರ ಕಾರು ಪಲ್ಟಿಯಾಗಿ ಗಾಯಗೊಂಡಿ ದ್ದರು. ನಗರದ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ಹಾಗೂ ಡಾ.ವಿ.ಜಿ ಕುಲಕರ್ಣಿ ಸ್ಥಳೀಯವಾಗಿ ಚಿಕಿತ್ಸೆ ನೀಡಿ ದ್ದರು.  ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆದು ಕೊಂಡು ಹೋಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಮುಖ ರಾಗಿದ್ದರು.

ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾಮಾನ್ಯರೊಂದಿಗೆ ಪೇಜಾವರ ಶ್ರೀಗಳು ಉತ್ತಮ ಬಾಂಧವ್ಯ ಹೊಂದಿದ್ದರು. ಉಡುಪಿಯ ಪೇಜಾವರ ಮಠದಿಂದ 2013 ರಲ್ಲಿ ತತ್ವಜ್ಞಾನ ಸಮ್ಮೇಳನ ಹಾಗೂ ವಿದ್ಯಾರ್ಥಿ ಗಳ ಸುಧಾಮಂಗಳ ಕಾರ್ಯ ಕ್ರಮವನ್ನು ರಾಯಚೂರು ನಗರದ ಯಾದವ್ ಸಮಾಜದ ಕೃಷ್ಣ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದರು. ಈ ಕಾರ್ಯ ಕ್ರಮಗಳು ಪೇಜಾವರಮಠದ ಶ್ರೀವಿಶ್ವೇಶತೀರ್ಥರ ಸಾನಿಧ್ಯದಲ್ಲಿ ನಡೆದವು. 


Post a Comment

0 Comments

Ad Code

Responsive Advertisement