ಬೆಂಗಳೂರು: ಔಷಧ ವ್ಯಾಪಾರಿಗಳು ಯಾರೂ ಯಾರ ಗುಲಾಮರು ಅಲ್ಲ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ ಮತ್ತು ಬೆಂಗಳೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅದ್ಯಕ್ಷ ವಿ.ಹರಿಕೃಷ್ಣನ್ ಹೇಳಿದರು.
ಅವರು ಬೆಂಗಳೂರು ನಗರದ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರಕಾರದ ಅಯ-ವ್ಯಯ ಮುಂಗಡ ಪತ್ರದ ಫ಼ೂರ್ವಬಾವಿಯಲ್ಲಿ ಮಾತನಾಡಿದ ವಿಷಯಗಳನ್ನು ಪುನರ್ ಉಚ್ಚರಿಸಿದರು.
ಔಷಧಗಳು ಜನರ ಜೀವ ರಕ್ಷಕಗಳಾಗಿರುವುದರಿಂದ ತೆರಿಗೆ ಕಡಿಮೆ ಮಾಡಬೇಕು,ರಾಜ್ಯದ ಔಷಧ ನಿಯಂತ್ರಣ ಇಲಾಖೆಯನ್ನು ಅಹಾರ ಇಲಾಖೆಯಲ್ಲಿ ವಿಲೀನಗೊಳಿಸಬೇಕೆಂದು ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಬರೆದ ಪತ್ರದ ಪ್ರತಿಗಳನ್ನು ಉಲ್ಲೇಖಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಔಷಧ ಹಾಗೂ ಉದ್ಯಮಗಳಿಂದ ತೆರಿಗೆ ಸಂಗ್ರಹಿಸಲು ಉತ್ಸಾಹ ತೋರುತ್ತಿವೆಯೋ ಹೊರತು, ಔಷಧ ವ್ಯಾಪಾರಿಗಳ ತೊಂದರೆಗಳನ್ನು ನಿವಾರಿಸುತ್ತಿಲ್ಲ ಎಂದು ಅಪಾದಿಸಿದರು.
ಸಾವಿರಾರು ಕೋಟಿ ಬಂಡವಾಳ ಹೊಂದಿದವರು ಔಷಧ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದ್ದು, ಜನ ಸಾಮಾನ್ಯರು ನಡೆಸುವ ಔಷಧ ಅಂಗಡಿಗಳಿಗೆ ಸಂಕಷ್ಟ ಎದುರಾಗಿದೆ.ಮುಂದಿನ ದಿನಗಳಲ್ಲಿ ಚೈನ್ ಸ್ಟೋರ್ಸ್ ಹಾಗೂ ಆನ್ ಲೈನ್ ಔಷಧ ವ್ಯಾಪಾರದೊಂದಿಗೆ ಫ಼ೈಪೋಟಿ ನಡೆಸಲು ಸಾಮಾನ್ಯ ವ್ಯಾಪಾರಿಗಳಿಗೆ ಸಾದ್ಯಯಾಗದೆ, ಖಾಸಗಿ ಔಷಧ ಅಂಗಡಿಗಳನ್ನು ಮುಚ್ಚಿ ಹಾಕಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಸಲೀಮ್ ಮರು ನವೀಕರಣಗೊಂಡ ಕಚೇರಿ ಕಟ್ಟಡವನ್ನು ಉದ್ಘಾಟಿಸಿದರು.
ರಾಜ್ಯ ರಿಜಿಸ್ಟರ್ಡ ಫ಼ಾರ್ಮಾಸಿಸ್ಟ ಅಸೋಸಿಯೇಷನ್ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ, ನಿವೃತ್ತ ಉಪ ಔಷಧ ನಿಯಂತಕ ಎಚ್.ಶ್ರೀನಿವಾಸ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಔಷಧ ವ್ಯಾಪಾರಿಗಳು ಭಾಗವಹಿಸಿದ್ದರು.
CLICK HERE FOR - VARTHAJALA - YOUTUBE

0 Comments