ಬಳ್ಳಾರಿ ಜೂ.29 : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿಯೂ ದಿನಾಲೂ ಕೋವಿಡ್‍ಗೆ ಸಂಬಂಧಿಸಿದ ಒಂದೆರಡು ಪ್ರಕರಣಗಳು ಪತ್ತೆಯಾಗುತ್ತಿವೆ. ನಿನ್ನೆಯವರಿಗೆ ಜಿಲ್ಲೆಯಲ್ಲಿ 13 ಪಕ್ರರಣಗಳು ಸಕ್ರೀಯವಾಗಿವೆ. ಜಿಲ್ಲೆಯ ಸಂಡೂರು ಮತ್ತು ಬಳ್ಳಾರಿ ತಾಲೂಕಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು. ಸದ್ಯ ಸಂಡೂರು ತಾಲೂಕಿನಲ್ಲಿ 10ಪ್ರಕರಣಗಳು ಮತ್ತು ಬಳ್ಳಾರಿ ನಗರದಲ್ಲಿ 3 ಸಕ್ರೀಯ ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 12ನೇ ವಯಸ್ಸಿನಿಂದ ವೃದ್ಧರವಗೆ 12 ಲಕ್ಷದ 50 ಸಾವಿರ 90 ಜನರು ಮೊದಲು ಮತ್ತು 12 ಲಕ್ಷದ 8ಸಾವಿರದ 776 ಜನರು ಎರಡನೇ ಡೋಜ್ ಲಸಿಕೆ ಪಡೆದಿದ್ದಾರೆ.

0 Comments