ಬಳ್ಳಾರಿ ಜೂನ್ 29. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ,ಹುಬ್ಬಳ್ಳಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಅರಣ್ಯ ಇಲಾಖೆ ಅಂಚಟಗೇರಿ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ “ಲಕ್ಷವೃಕ್ಷ ಯಜ್ಞ” ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಿನಾಂಕ 29.06.2022ರಂದು ಅಂಚಟಗೇರಿ ವ್ಯಾಪ್ತಿಯಲ್ಲಿ ಬರುವ ಸುಮಾರು 65 ಹೆಕ್ಟೇರು ಅರಣ್ಯ ಪ್ರದೇಶದಲ್ಲಿ 3000ಕ್ಕೂ ಅಧಿಕ ಸಸಿಗಳನ್ನು ನೆಡುವದರೊಂದಿಗೆ ಮೊದಲನೆಯ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಈ ಯೋಜನೆಯು ತಿಂಗಳೂದ್ದಕ್ಕೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರೊ.ಮ್ಯಾಗ್ಲಿನ್ ಕ್ರೂಜ್ ರವರು , “ಅದುನೀಕರಣ,ಕೈಗಾರೀಕರಣ ಎಂಬ ನೆಪದಿಂದ ಕಾಡುಗಳು ವಿನಾಶದ ಅಂಚಿನಲ್ಲಿದ್ದುದು ಅತ್ಯಂತ ಕಳವಳಕಾರಿಯಾದ ಸಂಗತಿ. ಯುವ ಸಮುದಾಯವು ಇನ್ನಾದರೂ ಎಚ್ಚೆತ್ತು ಕಾಡುಗಳನ್ನು ಬೆಳೆಸುವ ಇಂತ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಎಚ್ಚರಿಸಿದರು”. ಮಹಾವಿದ್ಯಾಲಯದ 500ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಮಸ್ತ ಪ್ರಾಧ್ಯಾಪಕರು ಭಾಗವಹಿಸಿದ್ದರು.ಪ್ರಾಚಾರ್ಯರಾದ ಪ್ರೊ.ಸುಜಾತಾ ಪಾಟೀಲ ಅವರು ಕಾರ್ಯಕ್ರಮ ಆಯೋಜಿಸಿದ್ದರು.ಅರಣ್ಯ ಇಲಾಖೆಯ ಸಿಬ್ಬಂದಿವರ್ಗದವರು ಸಹಕರಿಸಿದರು.
.jpg)
0 Comments