Ticker

6/recent/ticker-posts

Ad Code

Responsive Advertisement

ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಾರ್ಡಿನಲ್ಲಿ ಅಗ್ನಿ ಆವಘಡ: 14 ಮಕ್ಕಳ ರಕ್ಷಣೆ

ಬಳ್ಳಾರಿ ಜೂ.29: ನಗರದ ಜಿಲ್ಲಾ ಆಸ್ಪತ್ರೆಯ ಎನ್.ಏ.ಸಿ. ವಾರ್ಡಿನಲ್ಲಿ ಮಂಗಳವಾರದಂದು ಕಾಣಿಸಿಕೊಂಡ ಬೆಂಕಿಯಿಂದ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಮಕ್ಕಳನ್ನು ರಕ್ಷಣೆ ಮಾಡಿದ್ದು ಅಗ್ನಿ ದುರಂತದಿಂದ ಆಗಿರುವುದನ್ನು ಸರಿಪಡಿಸುವ ಕಾರ್ಯ ನಡೆದಿದೆ. ವಾರ್ಡಿನಲ್ಲಿ ವಿದ್ಯುತ್ ಸರಬರಾಜು ಮಾಡುವ ಬೋರ್ಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ಇತರೆಡೆ ವ್ಯಾಪಿಸಲು ಮುಂದಾಗಿದೆ. ಆದರೆ ತಕ್ಷಣ ಅಲ್ಲಿಯೇ ಇದ್ದ ಹೋಂಗಾರ್ಡ್ ಮತ್ತು ವೈದ್ಯ ಸಿಬ್ಬಂಧಿ ಅಗ್ನಿ ನಿವಾರಕ ಸಾಧನಗಳನ್ನು ತೆಗೆದುಕೊಂಡು ತಕ್ಷಣ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.


ವಾರ್ಡಿನಲ್ಲಿ ನವಜಾತ ಶಿಶುಗಳು, ನ್ಯುಮೋನೀಯಾ, ಶ್ವಾಸಕೋಶ, ಅವಧಿಪೂರ್ವ ಜನಿಸಿದ ತೂಕ ಕಡಿಮೆ ಇರುವ ಮಕ್ಕಳ ಚಿಕಿತ್ಸೆ ಮತ್ತು ಹಾರೈಕೆ ನಡೆಯುತ್ತದೆ. ಬೆಂಕಿ ದುರಂತದಿಂದ ಮಕ್ಕಳನ್ನು ಮತ್ತೊಂದು ವಾರ್ಡಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುತ್ತಿದ್ದರೆ, ವೆಂಟಿಲೇಟರ್ ಅವಶ್ಯಕತೆ ಇದ್ದ ಮಗುವನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದೆ. ದುರಂತದಿಂದ ಹಾಳಾಗಿರುವ ವಾರ್ಡನ್ನು ಬರುವ ಒಂದು ವಾರದಲ್ಲಿ ಸರಿಪಡಿಸಲಿದೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥ ಡಾ.ಎನ್.ಬಸಾರೆಡ್ಡಿ ಅವರು ಹೇಳಿದರು. ಈ ಬೆಂಕಿ ದುರಂತಕ್ಕೆ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿನ  ತಾಂತ್ರಿಕ ದೋಷವೇ ಇಲ್ಲ, ಕಾಮಗಾರಿಯಲ್ಲಿನ ಗುಣಮಟ್ಟ ಸರಿ ಇಲ್ಲದ ಕಾರಣವಾಗಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕಾಗಿದೆ.

 

Post a Comment

0 Comments

Ad Code

Responsive Advertisement