Ticker

6/recent/ticker-posts

Ad Code

Responsive Advertisement

ನೆಲ್ಲುಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಮಿತಿಮೀರಿದ ಕೋತಿಗಳ ಹಾವಳಿ- ವಿದ್ಯಾರ್ಥಿನಿ ಮೇಲೆ ದಾಳಿ.

ಬಳ್ಳಾರಿ(ಕಂಪಿ)್ಲ ಜೂ.29: ತಾಲ್ಲೂಕಿನ ನೆಲ್ಲುಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೋತಿಗಳ ಹಾವಳಿ ಮಿತಿಮೀರಿದ್ದು, ಕಳೆದ ಸಂಜೆ ನೆಲ್ಲುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ವಿದ್ಯಾರ್ಥಿನಿಯ ಮೇಲೆ ಕೋತಿಗಳು ದಾಳಿ ಮಾಡಿದ್ದು, ವಿದ್ಯಾರ್ಥಿನಿಗೆ ಗಾಯಗೊಳಿಸಿದೆ. ಕೋತಿಗಳು ನಿತ್ಯ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿಪರೀತವಾಗಿ ತೊಂದರೆಗಳನ್ನು ಕೊಡುತ್ತಿದ್ದು, ಮನೆಗಳ ಮೇಲೆ ಹಿಂಡು ಹಿಂಡಾಗಿ ದಾಳಿ ಇಡುವ ಕೋತಿಗಳು ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿವೆ. ಮನೆಗಳ ಬಾಗಿಲುಗಳನ್ನು ತೆಗೆದಿದ್ದರೆ ಸಾಕು ಮನೆಯೊಳಗೆ ದಾಳಿ ಇಡುವ ಕೋತಿಗಳು ಮನೆಯಲ್ಲಿ ಇರುವ ವಸ್ತುಗಳನ್ನು ಸಹಿತ ತೆಗೆದಕೊಂಡು ಹೋಗುತ್ತಿವೆ.


ಮೊಬೈಲ್, ಕನ್ನಡಿ ಸೇರಿದಂತೆ ಧವಸ ಧಾನ್ಯಗಳನ್ನು ಕೊಂಡುಯ್ಯುತ್ತಿವೆ. ಮನೆಯ ಮೇಲೆ ದಾಳಿ ಇಡುವ ಕೋತಿಗಳ ಹಿಂಡು ಮನೆಮೇಲೆ ಒಣಹಾಕಿರುವ ಬಟ್ಟೆಗಳನ್ನು ಹೊತ್ತುಯ್ಯುತ್ತಿವೆ. ಜೊತೆಗೆ ತಗಡಿನ ಸೀಟುಗಳ ಮೇಲೆ ಕುಣಿದಾಡಿ ಎಲ್ಲವನ್ನು ಹಾಳುಮಾಡುತ್ತಿವೆ. ಹಾಗೂ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರ,ಮೇಲೆ ಟ್ರ್ಯಾಕ್ಟರ್ ಚಾಲಕರ ಮೇಲೆ ದಾಳಿ ಮಾಡುತ್ತಿದ್ದು, ಭಯದ ನೆರಳಿನಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಬಂದೋದಗಿದೆ. ಗ್ರಾಮದಲ್ಲಿ ಕೋತಿಗಳ ಹಾವಳಿ ಅಧಿಕವಾಗಿದ್ದು, ಈ ಬಗ್ಗೆ ಕ್ರಮಗೈಗೊಳ್ಳಲು ಜನಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಹಾಗೂ ಗ್ರಾ.ಪಂ.ನವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹಾಗೂ ಕೋತಿಗಳ ಹಾವಳಿಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು, ಮನೆಯಿಂದ ಹೊರ ಬರಲು ಎದರುತ್ತಿದ್ದು, ಅಧಿಕಾರಿಗಳು ಈಗಲಾದರೂ ಹೆಚ್ಚೆತ್ತುಕೊಂಡು ಕೋತಿಗಳ ಹಾವಳಿಗೆ ಕಡಿವಾಣ ಹಾಕಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 


Post a Comment

0 Comments

Ad Code

Responsive Advertisement