ಬಳ್ಳಾರಿ ಜೂನ್ 23.ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಸರ್ವಾದಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದ್ದಾರೆಯೆಂದು ಆರೋಪಿಸಿರುವ ಪಾಲಿಕೆಯ ಮೇಯರ್, ಉಪಮೇಯರ್ ಸಹಿತ ಸದಸ್ಯರು ದಿಢಿರ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಬೆಳಿಗ್ಗೆ ಪಾಲಿಕೆಯಲ್ಲಿ ನಡೆದಿದೆ.
ಮೇಯರ್ ರಾಜೇಶ್ವರಿ ಸುಬ್ಬರಾಯುಡು ಉಪಮೇಯರ್ ಮಾಲಾನಬಿ ಅವರ ನೇತ್ರುತ್ವದಲ್ಲಿ ಪಾಲಿಕೆಯ ಸದಸ್ಯರು ದಿಢಿರ್ ಪ್ರತಿಭಟನೆ ನಡೆಸಿದರು. ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ಲಾಸ್ಟಿಕ್ ನಿಷೇದ ಕುರಿತು ಹೋಟೆಲ್ ಮಾಲಿಕರು ಸಭೆ ಕರೆದಿದ್ದರು. ಸಬೆಗೆ ಮೇಯರ್ ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆಯಲಾಗಿತ್ತು. ಸಭೆಯ ಸಮಯಕ್ಕೆ ಬಂದ ಮೇಯರ್ ಆಯುಕ್ತರಾಗಿ ಕಾದಿದ್ದರು, ಆದರೆ ಆಯುಕ್ತೆ ಬರಲಿಲ್ಲವಾದ್ದರಿಂದ ಎಲ್ಲರೂ ಸ್ವಲ್ಪ ಹೊರಗಡೆ ಹೋಗಿದ್ದಾರೆ. ತಡವಾಗಿ ಬಂದ ಆಯುಕ್ತರು ಮೇಯರ್ ಉಪಮೇಯರ್ ಹಾಗೂ ಸದಸ್ಯರನ್ನು ಕರೆಯದೆಯೇ ಸಭೆಯನ್ನು ನಡೆಸಿದ್ದಾರೆನ್ನಲಾಗಿದೆ. ಈ ವಿಚಾರದಿಂದ ಕೋಪಿತಗೊಂಡ ಮೇಯರ್ ಉಪಮೇಯರ್ ಹಾಗೂ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

0 Comments