Ticker

6/recent/ticker-posts

Ad Code

Responsive Advertisement

ಜೂನ್ 24 ರಿಂದ 3 ದಿನಗಳ ಕಾಲ ಸಾಂಕ್ರಾಮಿಕ ರೋಗಗಳ ಸಮ್ಮೇಳನ-ದಕ್ಷಿಣ ಭಾರತದ 450 ಪರಿಣಿತರ ಪಾಲ್ಗೊಳ್ಳುವಿಕೆ-ಡಾ.ರವಿಶಂಕರ್.ಎಸ್,ಡಾ.ಯೋಗಾನಂದರೆಡ್ಡಿ

ಬಳ್ಳಾರಿ,ಜೂ.23-ಕೋವಿಡ್ ಬಳಿಕ ಮಕ್ಕಳಲ್ಲಿ ಹೊಸ ರೋಗಗಳು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ 450 ಜನ ಪರಿಣಿತ ವೈದ್ಯರನ್ನು ಒಂದೆಡೆ ಸೇರಿಸಿ ಇದೇ ಜೂನ್ 24 ರಿಂದ 3 ದಿನಗಳ ಕಾಲ ಬೃಹತ್ ಸ್ಟೀಲ್ ಸಿಟಿ ಜಿಂದಾಲ್‍ನಲ್ಲಿ ಸಾಂಕ್ರಾಮಿಕ ರೋಗಗಳ ಸಮ್ಮೇಳನ ಆಯೋಜಿಸಲಾಗಿದೆ.


ಈ ಕುರಿತು ಸಂಘಟನಾ ಅಧ್ಯಕ್ಷರಾದ ಡಾ.ರವಿಶಂಕರ್ ಎಸ್ ಇವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ರಾಜ್ಯದ ಮಕ್ಕಳ ತಜ್ಞರ ಸಂಘದ ಸಾಂಕ್ರಾಮಿಕ ರೋಗಗಳ ಅಂಗವು ತೋರಣಗಲ್ ನ ಜಿಂದಾಲ್ ಸ್ಟೀಲ್ಸ್ ಸಭಾಂಗಣದಲ್ಲಿ ಈ ಸಮ್ಮೇಳನ ಆಯೋಜಿಸಿದೆ. ಕೊರೊನಾ ಬಳಿಕ ಶೇ 100ಕ್ಕೆ 90 ರಷ್ಟು ಮಕ್ಕಳು ವಿವಿಧ ರೀತಿಯ ಹೊಸ ರೋಗಗಳಿಗೆ ತುತ್ತಾಗಿ ನರಳುತ್ತಿದ್ದಾರೆ. ಈ ಹೊಸ ರೋಗಗಳಿಗೆ ಕಾರಣಗಳನ್ನು ಹುಡುಕುವುದು ಮತ್ತು ಅವುಗಳ ನಿಯಂತ್ರಣ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಮಟ್ಟದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ಗೋವಾ ಮತ್ತು ಮಹಾರಾಷ್ಟ್ರದಿಂದ 450 ಪರಿಣಿತ ವೈದ್ಯರು, 80 ಜನ ಪ್ರಮುಖ ಸಂಶೋಧಕರು ಆಗಮಿಸಿ ಆಡಿಯೋ ಮತ್ತಿ ವಿಡಿಯೋ ವಿಶ್ಯೂವಲ್ಸ್ ಮೂಲಕ ರೋಗಗಳ ಕಾರಣಗಳು ಮತ್ತು ನಿಯಂತ್ರಣ ವಿಧಾನಗಳನ್ನು ಪ್ರಸ್ತಾಪಿಸಲಿದ್ದಾರೆ. ಎಲ್ಲ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು. 

ಸ್ಟೀಲ್ ಸಿಟಿ ಐಡಿ ಅಧ್ಯಾಯ-2022 ಮಾರ್ಗದರ್ಶಕರಾದ ಡಾ.ಯೋಗಾನಂದರೆಡ್ಡಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ನಾನಾ ರೀತಿಯ ರೋಗಗಳು ಆವರಿಸಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಕೋವಿಡ್ ಬಳಿಕ ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಈ ಸಮ್ಮೇಳನ ಆಯೋಜಿಸಿದ್ದು ಪರಿಣಿತ ವೈದ್ಯರಿಂದ ಸಲಹೆ, ಮಾರ್ಗದರ್ಶನ ಹಾಗೂ ಪರಿಹಾರ ಲಭಿಸಲಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಮಕ್ಕಳ ತಜ್ಞರ ಸಂಘ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಸಂಸ್ಥೆ ಹಾಗೂ ಮಕ್ಕಳ ವಿಭಾಗ ಜೊತೆಗೂಡಿ 11ನೇ ವಾರ್ಷಿಕ ರಾಜ್ಯ ಸಾಂಕ್ರಾಮಿಕ ರೋಗಗಳ ಸಮ್ಮೇಳನ ನಡೆಯಲಿದೆ ಎಂದರು. ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಭಾರತದಲ್ಲಿ ಶಿಶುವೈದ್ಯರ ಅತಿದೊಡ್ಡ ಮತ್ತು ಅತ್ಯಂತ ಪ್ರತಿನಿಧಿ ಸಂಸ್ಥೆಯಾಗಿದ್ದು ದೇಶಾದ್ಯಂತ 30 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿದೆ. ಈಗಾಗಲೇ ರಾಷ್ಟ್ರದ್ಯಂತ ಸಮ್ಮೇಳನಗಳು, ವಿಚಾರ ಸಂಕಿರಣಗಳು, ಉಪನ್ಯಾಸಗಳು ಮತ್ತು ಇತರ ಸಭೆಗಳನ್ನು ನಡೆಸುವ ಮೂಲಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ಸಾಂಕ್ರಾಮಿಕ ರೋಗಗಳ ಅಂಗವು ಮಕ್ಕಳಲ್ಲಿನ ಸಾಂಕ್ರಾಮಿಕ ರೋಗಗಳ ಅಧ್ಯಯನವನ್ನು ಉತ್ತೇಜಿಸುವ ಉಪ ಸಮಿತಿಯಾಗಿದೆ. ಕಳೆದ ಒಂದು ದಶಕದಲ್ಲಿ ರೋಗಗಳ ಚಿಕಿತ್ಸಾ ಕ್ರಮ ವೇಗವಾಗಿ ಬೆಳೆಯುತ್ತಿದೆ. ಮರುಕಳಿಸುವ ಸೋಂಕುಗಳು ಮತ್ತೆ ಪುನಃ ನೋಡಿ ಕಲಿಯುವುದು ಸಮ್ಮೇಳನದ ಉದ್ದೇಶವಾಗಿದೆ. ಜನಸಂಖ್ಯೆ ಬೆಳವಣಿಗೆ, ವಲಸೆ ಮತ್ತು ಇತರೆ ಕಾರಣಗಳಿಂದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಸವಾಲಾಗಿದೆ. ಈ ರೋಗಗಳ ನಿಯಂತ್ರಣ ಮತ್ತು ಪರಿಣಿತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಸವಾಲಾಗಿದೆ. ಡಿಫ್ತಿರಿಯಾ, ಮಲೇರಿಯಾ, ಔಷಧ ಪ್ರತಿರೋಧಕ ಟಿಬಿ., ಲೆಪ್ರೋಸ್ಪೈರೋಸಿಸ್, ರಿಕೆಟ್ವಿಯಲ್ ಜ್ವರ ಮರು ಉದ್ಭವಕ್ಕೆ ಕಾರಣವಾಗಿದೆ. ಈ ಎಲ್ಲ ರೋಗಗಳ ಕಾರಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಸಮ್ಮೇಳನದಲ್ಲಿ ಸುದೀರ್ಘವಾಗಿ ಚರ್ಚಿಸಲಾಗುತ್ತದೆ. ಸಾಧ್ಯವಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.  ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ವಿಜಯನಗರ ಮತ್ತು ಸೇಲಂ ವಕ್ರ್ಸ್ ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಅಧ್ಯಕ್ಷ ಪಿಕೆ ಮುರುಗನ್ ಉದ್ಘಾಟಿಸಲಿದ್ದಾರೆ. ಯೋಜನಾಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ಪ್ರಾಚಾರ್ಯ ಡಾ.ಕೃಷ್ಣಸ್ವಾಮಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕೇಂದ್ರ ಐಡಿ ಅಧ್ಯಾಯ ಅಧ್ಯಕ್ಷ ಡಾ.ಎಸ್.ಬಾಲಸುಬ್ರಹ್ಮಣ್ಯಂ, ಕಾರ್ಯದರ್ಶಿ ಡಾ.ಭಾಸ್ಕರ್ ಶೆಣೈ, ಕರ್ನಾಟಕ ಮಕ್ಕಳ ತಜ್ಞರ ಸಂಘದ ಅಧ್ಯಕ್ಷೆ ಡಾ.ರೂಪಾ ಬೆಲ್ಲದ್, ಕಾರ್ಯದರ್ಶಿ ಡಾ. ಮನೀಶಾ ಬಂಡಂಕರ್, ಕರ್ನಾಟಕ ಐಡಿ ಅಧ್ಯಾಯದ ಅಧ್ಯಕ್ಷ ಡಾ.ದುರ್ಗಪ್ಪ ಹೆಚ್., ಕಾರ್ಯದರ್ಶಿ ಡಾ.ಶ್ರೀಕಾಂತ್ ಬಿ.ಕೆ., ಐಎಪಿ ಕಾರ್ಯದರ್ಶಿ ಡಾ.ಸಂಜಯ್ ಸಜ್ಜನ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ.ಅಜಯ್ ಎಸ್‍ಕೆ., ಸಂಘಟನಾ ಕಾರ್ಯದರ್ಶಿಗಳಾದ ಡಾ.ಸುನೀಲ್ ಕುಮಾರ್ ಪಿ., ಡಾ.ರಾಘವೇಂದ್ರ ಭೂಪಾಲ್ ವೈಜೆ., ಐಡಿ ಅಧ್ಯಾಯದ ಅಧ್ಯಕ್ಷ ಡಾ.ದುರ್ಗಪ್ಪ ಹೆಚ್., ಡಾ.ಶ್ರೀಕಾಂತ್ ಬಿಕೆ., ಡಾ.ಸಂಜಯ್ ಸಜ್ಜನ್, ಡಾ.ಭಾವನಾ, ವಿಮ್ಸ್ ಪ್ರಾಧ್ಯಾಪಕ ಡಾ.ವಿಶ್ವನಾಥ್ ಇನ್ನಿತರರು ಇದ್ದರು. 



 


Post a Comment

0 Comments

Ad Code

Responsive Advertisement