ಬಳ್ಳಾರಿ ಮೇ 27. 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನ ಸಿಹಿಮುತ್ತು ಸನ್ಮಾನ ಕಾರ್ಯಕ್ರವನನ್ನು ಇಂದು ಬಳ್ಳಾರಿಯ ಕೌಲ್ ಬಜಾರಿನ ಸಂತ ಜೋಸೆಫರ ಬಾಲಕರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ಪೂಜ್ಯ. ಡಾ. ಹೆನ್ರಿ ಡಿ’ ಸೋಜಾ ಅವರು ಮಕ್ಕಳನ್ನುದ್ದೇಶಿಸಿ ಸಾಧನೆ ಮಾಡಿ ಸಾಧಕರಾಗಬೇಕು, ಸಮಾಜದ ಉದ್ದಾರಕರಾಗಬೇಕೇಂದು ಕರೆಕೊಟ್ಟರು. ಮುಖ್ಯಅಥಿತಿಗಳಾಗಿ ಶ್ರೀ. ವೆಂಕಟೇಶ ರಾಮಚಂದ್ರಪ್ಪ , ಕ್ಷೇತ್ರ ಶಿಕ್ಷಣಧಿಕಾರಿಗಳು, ಕುರುಗೋಡು, ಅವರು ಸಾಧನೆಯೆಂಬುವುದು ಸಾಧಕನ ಸೊತ್ತು, ಸೋಮಾರಿಯ ಸೊತ್ತಲ್ಲ ಎಂದು ಹಿತನುಡಿದರು. ಶಾಲೆಯ ವ್ಯವಸ್ಥಾಪಕರಾದ ವಂ. ಫಾದರ್. ದಾನಪ್ಪ ಮೂಲಿಮನಿಯವರು ಮಾತನಾಡುತ್ತಾ ಈ ಸಾಧನೆ ಒಂದು ಮೈಲುಗಲ್ಲು ಹೀಗೆ ಮುನ್ನಡೆಯಿರೆಂದು ಹಾರೈಸಿದರು. ಬಳ್ಳಾರಿ ಧರ್ಮಪ್ರಾಂತ್ಯದ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳಾದ ವಂ. ಫಾದರ್. ಜಾನ್ ಪೀಟರ್, ಶ್ರೀ. ರ್ರಿಸಾಮ್ವಿ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕರು, ಶಾಲೆಯ ಉಪವ್ಯವಸ್ಥಾಪಕರಾದ ವಂ. ಫಾದರ್. ಸುನೀಲ್ ಅನ್ಸೆಲೆಮ್, ಶಾಲೆಯ ಮುಖ್ಯ ಶಿಕ್ಷಕಿಯರು, ಶಿಕ್ಷಕ ವೃಂದದವರು, ಮಕ್ಕಳು ಮತ್ತು ಪಾಲಕ ಪೆÇೀಷಕರು ಉಪಸ್ಧಿತರಿದ್ದರು.
ಟಿ.ಶಿವಕುಮಾರ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿ 623/625 ಅಂಕಗಳಿಂದ ರಾಜ್ಯ ಮಟ್ಟದಲ್ಲ್ಕಿ 3ನೇ ಸ್ಧಾನ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಧಾನ ಪಡೆದಿರುತ್ತಾನೆ. ಹಾಗೂ ಶಾಲಾ ಮಟ್ಟದಲ್ಲಿ ಅತಿಹಚ್ಚು ಅಂಕಪಡೆದ ಆಂಗ್ಲ ಮಾಧ್ಯಮದ ವಿದ್ಯಾರ್ಥಿ ಉರುಕುಂದಪ್ಪ 612/625 , ಶೇಕ್ ಮೊಹಮ್ಮದ್ ಹಮೀದ್ 587/625, ಬಿ. ಲೋಕೇಶ್ 587/625, ಕನ್ನಡ ಮಾಧ್ಯಮದ ವಿದ್ಯಾರ್ಥಿ ಬಿ. ಹೇಮಂತ್ 554/625, ಮೊಹಮ್ಮದ್ ಆಸಿಫ್ 548/625, ಗಾದಿಲಿಂಗ 535/625, ಹಾಗೂ ಇನ್ನು 23 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿ, ಸನ್ಮಾನಿಸಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.

0 Comments