ಬಳ್ಳಾರಿ ಮೇ.27. 2020-21ನೇ ಸಾಲಿನ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ನಗರದ 15ನೇ ವಾರ್ಡಿನ ಬೋಯಗೇರಿ ರಸ್ತೆಯಿಂದ ರೂಪನಗುಡಿ ರಸ್ತೆಯವರೆಗೆ ಹಾಗೂ ವಡ್ಡರಬಂಡ ಸೇತುವೆಯಿಂದ ಬೋಯಗೇರಿ ವೃತ್ತದವರೆಗೆ ಮಳೆನೀರಿನ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಗೆ ಇಂದು ಬೆಳಿಗ್ಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹಾಗೂ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರುಗಳು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭಧಲ್ಲಿ ಬರಾಕೊ ನಿರ್ದೇಶಕರ ವೀರಶೇಖರರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಾಲಣ್ಣ, ಮಹಾನರ ಪಾಲಿಕೆ ಮಹಾಪೌರರಾದ ರಾಜೇಶ್ವರಿ ಸುಬ್ಬರಾಯುಡು, ಉಪ ಮಹಾಪೌರರಾದ ಮಾಲನ್‍ಬೀ, ಪಾಲಿಕೆ ಸದಸ್ಯರಾದ ಇಬ್ರಾಹಿಂಬಾಬು, ನೂರ್ ಮಹಮ್ಮದ್, ಸುರೇಂದ್ರ, ಹನುಮಂತ, ಹನುಮಂತ ಗುಡಗಂಟಿ, ವೆಮಣ್ಣ, ವೆಂಕಟರಮಣ ರೆಡ್ಡಿ. ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ರಾಜೀವ್ ತೊಗರಿ, ಬಿಜೆಪಿ ಮುಖಂಡರಾದ 15ನೆ ವಾರ್ಡಿನ ತಮ್ಮಣ್ಣ, ಶೇಖರ್, ಬಾಲು, ಬದ್ರಿ, ಗೋಪಾಲ, ರವೀಂದ್ರ, ಕಾಂತ, ಗೋಪಿ, ಉಲ್ಲಾಸ್, ದೇವಣ್ಣ, ವಿನೋದ್, ಪ್ರಕಾಶ್, ರಮೇಶ, ಶಿವಪ್ರಸಾದ್, ಅಂಜಿ , ಬಸವರಾಜ್. ಮಹಿಳಾ ಮುಖಂಡರಾದ ಪುಷ್ಪಲತಾ, ಸುಗುಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

0 Comments