ಬೆಂಗಳೂರು, ಜೂನ್, 24- ಸ್ಥಳೀಯ ನಾಗರಬಾವಿಯ ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಘವು 6ನೇ ವಾರ್ಷಿಕೋತ್ಸವದಂಗವಾಗಿ ಜ್ಯೋತಿಷ್ಯದ ಕುರಿತು ಮಾಹಿತಿ ನೀಡುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜೂನ್ 25 ರಿಂದ ಜೂನ್ 30 ರವರೆಗೆ ಈ ಸೇವೆಯು ಉಚಿತವಾಗಿ ನೀಡಲಾಗುತ್ತದೆ.
ಶನಿಸಾಡೇಸಾಥ್, ಮಂಗಳದೋಷ ಹಾಗೂ ಅಪೂರ್ಣ ಹಾಗೂ ಪೂರ್ಣ ಕಾಳಸರ್ಪದೋಷವಿದ್ದರೆ ಕುಂಡಲಿಯನ್ನು ಪರಿಶೀಲಿಸಿ ಉಚಿತವಾಗಿ ಮೂಲಕ ಮಾಹಿತಿ ನೀಡಲಾಗುವುದು.
ಈ ಮಾಹಿತಿಯನ್ನು ಎಲ್ಲ ವಯೋಮಿತಿಯ ಸ್ತ್ರೀ- ಪುರುಷರು ಪಡೆದುಕೊಳ್ಳಬಹುದು. ಆಸಕ್ತರು ತಮ್ಮ ಹುಟ್ಟಿದ ಸ್ಥಳ, ವೇಳೆ, ದಿನಾಂಕವನ್ನು ಪಂ.ಈಶ್ವರ ಭಟ್ ಅವರ ಮೊಬೈಲ್ ಸಂಖ್ಯೆ (9916202624) ಮೂಲಕ ಕರೆ ಮಾಡಿ ತಿಳಿಸಬಹುದು.
ಜನರಿಗೆ ಇಂದು ತಮ್ಮ ಕುಂಡಲಿಯಲ್ಲಿರುವ ಅನೇಕ ದೋಷಗಳು ಗೊತ್ತಿರುವುದಿಲ್ಲ. ಅದಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡಿಕೊಂಡು ಏನೇನೋ ದೋಷ ಪರಿಹಾರವೆಂದು ಹಣ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಆದ್ದರಿಂದ ಹಲವಾರು ಸಮಾಜಸೇವಾ ಕೆಲಸಗಳನ್ನು ಮಾಡುತ್ತಿರುವ ಸಾತ್ವಿಕ ಸಂಘವು ಈ ವಿಶಿಷ್ಟ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿನೋದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments