ಕೊಪ್ಪಳ: . ಸೀನಿಯರ್ ಲೀಡರ್ಗಳನ್ನು ಮನೆಗೆ ಕಳುಹಿಸಿ ತಾವು ಹೇಳಿದವರನ್ನು ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಮಾತನಾಡಿದ ಶೆಟ್ಟರ್, ಈ ಹಿಂದೆ ಬಿಜೆಪಿಯಿಂದ ಬರುತ್ತಿದ್ದ ನಾನು ಇಂದು ಕಾಂಗ್ರೆಸ್ ಪರವಾಗಿ ಮತ ಕೇಳಲು ಬಂದಿದ್ದೇನೆ. ರಾಜ್ಯ ಬಿಜೆಪಿ ಕೆಲವೇ ಕೆಲವರ ಕಪಿ ಮುಷ್ಠಿಯಲ್ಲಿ ಸಿಕ್ಕಿದೆ ನಾನು ಜನಸಂಘದಿಂದ ನಮ್ಮ ಕುಟುಂಬ ಬೆಳಿಸಿದೆ. ಬಿಜೆಪಿಯವರು ಶೆಟ್ಟರಿಗೆ ಎಲ್ಲಾ ನೀಡಿದೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಪ್ರತಿಯಾಗಿ ನಾನು ಶ್ರಮದಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳೆಸಿದ್ದೇನೆ ಎಂದು ತಿರುಗೇಟು ನೀಡಿದರು.
ಅಧಿಕಾರ ಹಾಗೂ ಸ್ಥಾನಮಾನಕ್ಕೆ ನಾನು ಕೆಲಸ ಮಾಡಿಲ್ಲ. ಪತ್ರಕ್ಕೆ ಸಹಿ ಮಾಡಿ ರಾಜಕೀಯ ನಿವೃತ್ತಿ ಘೋಷಿಸಿ ಎಂದರು. ಪಕ್ಷದ ಹಿರಿಯ ನಾಯಕರಿಗೆ ಹೇಳುವ ಮಾತಾ ಇದು ಎಂದು ಪ್ರಶ್ನೆ ಮಾಡಿದರು.
0 Comments