ಮಲ್ಲೇಶ್ವರಂ:ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯನಾಯ್ಡುರವರು ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಆನಂದ್,ಎಂ.ನಾಗರಾಜ್,ಜಯಪ್ಪರೆಡ್ಡಿರವರು ಭಾಗವಹಿಸಿದ್ದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಉದ್ಯಾನವನಗಳು, ಉಚಿತ ಡಯಾಲಿಸಿಸ್ ಕೇಂದ್ರಗಳು, ಉತ್ತಮ ರಸ್ತೆ ಮೂಲಭೂತ ಸೌಲಭ್ಯಗಳು ಒದಗಿಸಲು ಬಿಜೆಪಿ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಹೆಬ್ಬಾಳ ಕ್ಷೇತ್ರದ ಶಾಸಕರು ಮತ್ತು ಬೆಂಬಲಿಗರು ಚುನಾವಣೆಯಲ್ಲಿ ಸೋಲಿನ ಭಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ದೂರು ದಾಖಲು ಮಾಡುವುದು ಹಾಗೂ ಹಲ್ಲೆ ಮಾಡುವುದು ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಅವಾಚ್ಯಶಬ್ಬ ಬಳಕೆ ಮಾಡಿ, ಬಿಜೆಪಿ ಕಾರ್ಯಕರ್ತರನ್ನ ಹೆದರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕೃತಿ ಹೆಬ್ಬಾಳದಲ್ಲಿ ಮುಂದುವರೆಯುತ್ತಿದೆ .
ವಿಕಲಚೇತನ ವ್ಯಕ್ತಿಯ ಮೇಲೆ ಏಳು ರೇಪ್ ಕೇಸ್ ಹಾಕುತ್ತೇವೆ ಎಂದು ಕಾಂಗ್ರೆಸ್ ಪಕ್ಷದವರು ಹೆದರಿಸುತ್ತಿದ್ದಾರೆ.


0 Comments