ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ರ್ತಾಜಾಲ,ಶಿಡ್ಲಘಟ್ಟ : ಕಮಲ ಕೆರೆಯಲ್ಲಿದ್ದರೆ ಚಂದ,
ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಜನರಲ್ಲಿದ್ದರೆ ಚೆಂದ ಎಂದು ವಿರೋಧ ಪಕ್ಷಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊಂಡಾಡಿದರು.
ಕಾಂಗ್ರಸ್ ಅಭ್ಯರ್ಥಿ ಬಿವಿ ರಾಜೀವ್ ಗೌಡ ಪರ ಮಾತಯಾಚಿಸಲು ಬಂದಾಗ ನಗರದ ಕೋಟೆ ವೃತ್ತದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದಲ್ಲಿ ದಾನ ಧರ್ಮ ಮಾಡುವಂತಹ ಯುವ ನಾಯಕನನ್ನು ನಾನು ,ವಿ ಮುನಿಯಪ್ಪ ಹಾಗೂ ಕೆ ಹೆಚ್ ಮುನಿಯಪ್ಪ ಆಯ್ಕೆ ಮಾಡಿದ್ದೇವೆ. ನಮ್ಮ ಪಕ್ಷ ಹೆಸರು ಹೇಳಿಕೊಂಡು ಬೇರೆಯವರಿಗೆ ಬೆಂಬಲ ಕೊಡ್ತಿದ್ದಾರೆ ಅಂದ್ರೆ ಅದು ಸುಳ್ಳು. ನಾನು ಪಕ್ಷದಿಂದ ಆಯ್ಕೆ ಮಾಡಿರುವಂತಹ ಅಭ್ಯರ್ಥಿ ವಿರುದ್ಧ, ನಮ್ಮ ಪಕ್ಷದ ವಿರುದ್ಧ ಯಾರುನಿಂತಿದ್ದಾರೋ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದೀನಿ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತ ಅಭ್ಯರ್ಥಿ ಆಂಜಿನಪ್ಪ ಪುಟ್ಟು ವಿರುದ್ಧ ಹರಿಹಾಯ್ದರು.
ಜೆಡಿಎಸ್ ಕಾರ್ಯಕರ್ತರು ನಿಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ ದಯವಿಟ್ಟು ಕಾಂಗ್ರೆಸ್ ಗೆ ಬೆಂಬಲ ನೀಡಿ, ಇನ್ನು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಪಕ್ಷ ಕೇವಲ 60-70 ಸೀಟು ಪಡೆದುಕೊಂಡು ಅಧಿಕಾರ ಕಳೆದುಕೊಳ್ಳುತ್ತದೆ. ಈಗಾಗಲೇ ಯುವಕರಿಗೆ ಏನೇನು ಮಾಡಿಲ್ಲ, ಬೆಲೆ ಗಗನಕ್ಕೇರಿದೆ,ಆದಾಯ ಪಾತಾಳಕ್ಕೆ ಹೋಗಿದೆ, ರೈತರಿಗೆ ಗೋಬ್ಬರಗಳ ಧರ ಏರಿಕೆ,ಗ್ಯಾಸ್, ಪೆಟ್ರೋಲ್ ,ಡೀಸೆಲ್ ಇತರೆ ಎಲ್ಲಾ ಏರಿಕೆಯಾಗಿದೆ. ಸಂಸಾರ ಉಳಿಯಬೇಕಾದರೆ 200 ಯುನಿಟ್ ಉಚಿತ ವಿದ್ಯುತ್,ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1,500,ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ. ಸಹಾಯ ಧನ,ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ,ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತದೆ ಎಂದು ರಾಜೀವ್ ಗೌಡ ಅವರ ಕೈ ಮೇಲೆತ್ತಿ ಜನರಿಗೆ ಮತಯಾಚಿಸಲು ಸೂಚಿಸಿದರು.ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬೃಹದಾಕಾರದ ಸೇಬಿನ ಹಾರ ಹಾಕಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಬಿ ವಿ ರಾಜೀವ್ ಗೌಡ ಅವರು ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲಿಂದ ಪ್ರಜಾಧ್ವನಿ ತೆರದ ವಾಹನದಲ್ಲಿ ರೋಡ್ ಶೋ ಮೂಲಕ ಟಿಬಿ ರಸ್ತೆಯಿಂದ ನಗರದ ಕೋಟೆ ವೃತ್ತದವರೆಗೂ ಅದ್ದೂರಿಯಾಗಿ ಮೆರವಣಿಗೆ ಬಂದರು. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿವಿ ರಾಜೀವ್ ಗೌಡ ಪರ ಮಾತಯಾಚಿಸಲು ಆಗಮಿಸಿದ್ದ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಹಾಗೂ ರಾಜೀವ್ ಗೌಡ ಅವರ ಶಕ್ತಿ ಪ್ರದರ್ಶಿಸಲು ಕಾಂಗ್ರೆಸ್ ಕಾರ್ಯಕರ್ತರು ಎತ್ತ ನೋಡಿದರು ಕಾಂಗ್ರೆಸ್ ಬಾವುಟಗಳು, ಈ ಕಣ್ಣು ಹಾಯಿಸಿದಷ್ಟು ಕಾರ್ಯಕರ್ತರು ಆಗಮಿಸಿದ್ದರು.ಈ ಸಂದರ್ಭದಲ್ಲಿ ಶಾಸಕ ವಿ ಮುನಿಯಪ್ಪ,ಕೆಹೆಚ್ ಮುನಿಯಪ್ಪ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಸಹನಾ ರಾಜೀವ್ ಗೌಡ,ಕಾರ್ಯಕರ್ತರ,ಮತ್ತಿತರರು ಇದ್ದರು.


0 Comments