ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಯೇ ಮುಂದುವರೆಸುವ ಕುರಿತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದಾರೆ.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಮುಖ್ಯ ಆಯುಕ್ತರಾದ, ಶ್ರೀ ತುಷಾರ್ ಗಿರಿ ನಾಥ್ ರವರು 1 ವರ್ಷಗಳಿಗೂ ಮೇಲ್ಪಟ್ಟು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹಿಸಿ ಕೋವಿಡ್ ತಡೆಗಟ್ಟುವಲ್ಲಿ ಹಗಲು ರಾತ್ರಿ ಶ್ರಮಿಸಿದ್ದು ಹಾಗೂ 2023ರ ಕರ್ನಾಟಕ ವಿಧಾನ ಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಪ್ರಸ್ತುತ ಮಾನ್ಯ ಮುಖ್ಯ ಆಯುಕ್ತರು ರವರ ವರ್ಗಾವಣೆ ಮಾಡುವ ನಿರೀಕ್ಷೆ ಇರುವುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ -198 ವಾರ್ಡ್‌ಗಳಿಂದ ಮಾನ್ಯ ಮುಖ್ಯ ಆಯುಕ್ತರು ಮಾರ್ಗದರ್ಶನದಲ್ಲಿ 243 ಮರು ವಿಂಗಡಣೆಯ ಪ್ರಕ್ರಿಯು ಅಂತಿಮ ಘಟದಲ್ಲಿದ್ದು ಹಾಗೂ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ ವೃಂದವಾರು ಹುದ್ದೆಗಳನ್ನು ಸೃಜಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿರುವುದರಿಂದ ಇದರಿಂದ ಅಧಿಕಾರಿ / ನೌಕರರುಗಳು ಮುಂಬಡ್ತಿ ಪಡೆಯಲು ವಂಚಿತರಾಗುತ್ತಿರುವುದರಿಂದ ಮಾನ್ಯ ಮುಖ್ಯ ಆಯುಕ್ತರು ರವರ ಸೇವೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅವಶ್ಯಕತೆ ಇರುತ್ತದೆ ಹಾಗೂ ಕೆಲವು ವ್ಯಕ್ತಿಗಳು ವೈಯಕ್ತಿಕ ದ್ವೇಷದಿಂದ ಆಧಾರ ರಹಿತವಾಗಿ ಮಾನ್ಯ ಮುಖ್ಯ ಆಯುಕ್ತರು ರವರನ್ನು ವರ್ಗಾವಣೆ ಮಾಡುತ್ತಿರುವುದು ಖಂಡನೀಯ ಆದ್ದರಿಂದ, ಮೇಲ್ಕಂಡ ಅಂಶದ ಆಧಾರದ ಮೇಲೆ ಮಾನ್ಯ ಮುಖ್ಯ ಆಯುಕ್ತರು ರವರನ್ನು ಮೇಲ್ಕಂಡ ಎಲ್ಲಾ ಪ್ರಕ್ರಿಯೆಯು ಮುಗಿಯುವರೆವಿಗೂ ವರ್ಗಾವಣೆ ಮಾಡದಂತೆ ಕೋರುತ್ತೇವೆ ಎಂದು ಹೇಳಿದರು.


0 Comments