ಬೆಂಗಳೂರು : ರಾಜ್ಯಮಟ್ಟದಲ್ಲಿ ವಿಪ್ರ ವಕೀಲರನ್ನು ಸಂಘಟಿಸುವ ಉದ್ದೇಶದಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರಮುಖ ಮತ್ತು ಹಿರಿಯ ವಕೀಲರ ಸಭೆ ಕರೆಯಲಾಗಿದೆ. ಜೂನ್ ಎರಡರಂದು ಗಾಯತ್ರಿ ಭವನದಲ್ಲಿ ಸಂಜೆ 5: 30 ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ವಿಪ್ರ ವಕೀಲ ಬಾಂಧವರು ಭಾಗವಹಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಸಭೆಯಲ್ಲಿ ವಿಪ್ರ ಸಮುದಾಯದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುವವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳುವ ಬಗ್ಗೆ, ವಿಪ್ರರಿಗೆ ಉಚಿತ ಕಾನೂನು ಸಲಹೆ ನೀಡುವ ಬಗ್ಗೆ ಮತ್ತು ವಿಪ್ರ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಸಮಾಲೋಚನೆ ಮಾಡುವುದು ಇತ್ಯಾದಿ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
0 Comments