Ticker

6/recent/ticker-posts

Ad Code

Responsive Advertisement

ಡಾ. ಸಿ.ಬಸವರಾಜುರವರಿಗೆ ಕರ್ನಾಟಕ ಸರ್ವೋದಯ ಮಂಡಲದ ಗೌರವಾಭಿನಂದನೆ

 ಕರ್ನಾಟಕ ಸರ್ವೋದಯ ಮಂಡಲ ಮತ್ತು ಶ್ರೀ ಬಾಲಾಜಿ ವಿದ್ಯಾನಿಕೇತನ,ಶ್ರೀ ಬಾಲಾಜಿ ಪದವಿ ಕಾಲೇಜು ಹನುಮಂತನಗರ, ಬೆಂಗಳೂರು ರವರ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ''ಸರ್ವೋದಯ ಪರಿಕಲ್ಪನೆಯ ಪ್ರಸ್ತುತತೆ ಮತ್ತು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ -ತುಮಕೂರು ಜಿಲ್ಲೆಯ ಒಂದು ಅಧ್ಯಯನ" ಕುರಿತು ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿರುವ ಬೆಂಗಳೂರು ನಗರ  ಸಶಸ್ತ್ರ ಮೀಸಲು ಪಡೆ ಉಲ್ಲಾಳ ವಿಭಾಗದ ಎಸಿಪಿ  ಡಾ. ಸಿ.ಬಸವರಾಜುರವರಿಗೆ ಕರ್ನಾಟಕ ಸರ್ವೋದಯ ಮಂಡಲದ ವತಿಯಿಂದ ಗೌರವಾಭಿನಂದನೆ ಏರ್ಪಡಿಸಲಾಗಿತ್ತು.


 ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಸಿ ಬಸವರಾಜುರವರು ಮಹಾತ್ಮ ಗಾಂಧೀಜಿಯವರ ಸಾರ್ವಕಾಲಿಕ ಚಿಂತನೆ- ಸರ್ವೋದಯ ಸಮಾಜ ನಿರ್ಮಾಣವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ತತ್ವ ಆಶಯ ಸಿಗುವಂತಾಗಲು ವ್ಯವಸ್ಥೆಯಲ್ಲಿ ಅನುವು ಮಾಡಿಕೊಡಬೇಕು.ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ವಿದ್ಯಾಭ್ಯಾಸದ ಸೌಕರ್ಯ ನೀಡಿ ಅವರು ಮುಖ್ಯ ವಾಹಿನಿಗೆ ಬಂದಾಗಲೇ ಗಾಂಧೀಜಿ ರವರು ಕಂಡ ಕನಸು ನನಸಾಗುವುದು ಈ ನಿಟ್ಟಿನಲ್ಲಿ ಸರ್ವೋದಯ ಮಂಡಲ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್. ಎಸ್.ಸುರೇಶ್ ಮಾತನಾಡಿ ಗಾಂಧಿ ತತ್ವ ಚಿಂತನೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವರಿಷ್ಠ ಅಧಿಕಾರಿಗಳು ಇದನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದು ತಿಳಿಸಿದರು.

 ಪ್ರಾಧ್ಯಾಪಕ ಡಾ.ಆರ್. ವಾದಿರಾಜು  ಪ್ರಾಸ್ತಾವಿಕ ನುಡಿಗಳನ್ನಡಿದರು. ಡಾ.ಯ.ಚಿ. ದೊಡ್ಡಯ್ಯ
ಗೌರವ ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು,ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಅಧ್ಯಕ್ಷರು, ಬೆಂ.ನ.ಜಿ. ಕರ್ನಾಟಕ ಸರ್ವೋದಯ ಮಂಡಲ,ಪ್ರೊ. ಉಮೇಶ್ ದಕ್ಷಿಣ ಮೂರ್ತಿ
ಪ್ರಾಂಶುಪಾಲರು, ಶ್ರೀ ಬಾಲಾಜಿ ಪದವಿ ಕಾಲೇಜು ಹಾಗೂ ಗಾಂಧಿ ಸ್ಮೃತಿ ಭವನದ ಕರ್ನಾಟಕ ಪ್ರತಿನಿಧಿ ಸುರೇಶ್ ಕಲಘಟಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement