Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಡಿ.ಸುರೇಶ್ ಗೌಡರಿಂದ ಮತಪ್ರಚಾರ

ಬೆಂಗಳೂರು : ಮಲ್ಲೇಶ್ವರಂ  ವಿಧಾನಸಭಾ ಕ್ಷೇತ್ರದ ಸುಭೇದಾರ್ ಪಾಳ್ಯ ಭಾಗದಲ್ಲಿ ವಾರ್ಡ್ 61ರ ಮತದಾರರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಾಲಿ ಶಾಸಕರು ಹಾಗೂ ಸಚಿವರಾದ ಡಾ. ಸಿ. ಎನ್. ಅಶ್ವಥನಾರಾಯಣರವರ ಪರವಾಗಿ ಖ್ಯಾತ ಚಲನ  ಚಿತ್ರ ನಿರ್ಮಾಪಕರು, ಸಮಾಜ ಸೇವಕರು  ಹಾಗೂ ಬಿಜೆಪಿ ಮುಖಂಡರೂ ಆಗಿರುವ ಡಿ. ಸುರೇಶ್ ಗೌಡರವರು ಈ ಭಾಗದ ಎಲ್ಲಾ ರಸ್ತೆಗಳ, ಮನೆ ಮನೆಗೆ ಭೇಟಿ ನೀಡುತ್ತಾ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ  ಸಚಿವ ಡಾ. ಸಿ.ಎನ್. ಅಶ್ವಥನಾರಾಯಣರವರ ದಕ್ಷ ಆಡಳಿತ  ನಿರ್ವಹಣೆಯಲ್ಲಿ  ಆಗಿರುವಂತಹ  ಕ್ಷೇತ್ರದ  ಅಭಿವೃದ್ಧಿ, ಶಾಲೆ, ಆಸ್ಪತ್ರೆ, ರಸ್ತೆಗಳ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮುಂತಾದ ಜನಪರ ಕೆಲಸಗಳನ್ನು ಮಾಡಿ, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುವ ಅವರ ಪ್ರಯತ್ನಕ್ಕೆ ಮತ್ತೊಮ್ಮೆ ಅವರಿಗೆ ಅವಕಾಶವನ್ನು ಒದಗಿಸಿ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಹಬ್ಬದ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಾ    ಮತಪ್ರಚಾರದ ವೇಳೆ ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯ ಜಿ.ಎಸ್. ಚೌಧರಿ ಹಾಗೂ ಇನ್ನಿತರ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.




Post a Comment

0 Comments

Ad Code

Responsive Advertisement