ಅಟಲ್ ಸೇವಾ ಕೇಂದ್ರದ ವತಿಯಿಂದ ಯಶವಂತಪುರದಲ್ಲಿ ಕಾರ್ಮಿಕ ದಿನಾಚರಣೆಯನ್ನು ಬುಧವಾರ ಸಂಜೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುಜರಾತ್ ರಾಜ್ಯದ ಸವರ್ಕುಂಡ್ಲ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕಸ್ವಾಲ ರವರು ಆಗಮಿಸಿದ್ದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಮಂಡಲ ಅಧ್ಯಕ್ಷ ಎಂ. ಗೋವಿಂದರಾಜು, ಮಾಜಿ ಬಿಬಿಎಂಪಿ ಸದಸ್ಯ ಜಿ.ಕೆ. ವೆಂಕಟೇಶ್, ಅಟಲ್ ಸೇವಾ ಕೇಂದ್ರದ ಮುಖ್ಯಸ್ಥ ವಿ. ಶ್ರೀನಿವಾಸ್ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೇವರಾಜ್, ಚಂದ್ರಶೇಖರ್ ವಿನೋದ್ ಮೊದಲಾದ ಸ್ಥಳೀಯ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಬಂಧುಗಳು ಭಾಗವಹಿಸಿದ್ದರು.
.jpeg)
0 Comments