Ticker

6/recent/ticker-posts

Ad Code

Responsive Advertisement

BIG NEWS : ಸಚಿವರುಗಳನ್ನು ಪರಿಚಯಿಸಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ 24 (ಕರ್ನಾಟಕ ವಾರ್ತೆ): ಇಂದು ನಡೆದ ವಿಧಾನಸಭೆಯ 16ನೇ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರ ಅನುಮತಿ ಮೇರೆಗೆ ಸದನಕ್ಕೆ ಎಲ್ಲಾ ಸಚಿವರುಗಳ ಪರಿಚಯ ಮಾಡಿಕೊಟ್ಟರು.



ಮೇ 21ರಿಂದ ನೂತನ ಸರ್ಕಾರವು ಅಸ್ತಿತ್ವಕ್ಕೆ ಬಂದಿದ್ದು ಘನತೆವೆತ್ತ ರಾಜ್ಯಪಾಲರ ಸಮ್ಮುಖದಲ್ಲಿ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆದ ನಾನು, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಸಂಪುಟ ದರ್ಜೆಯ ಸಚಿವರಾಗಿ ಹಿರಿಯರಾದ ಡಾ. ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ ಖರ್ಗೆ, ರಾಮಲಿಂಗರೆಡ್ಡಿ ಹಾಗೂ ಸತೀಶ್ ಜಾರಕೀಹೋಳಿ ಅವರು ಪ್ರಮಾಣ ವಚನ ಸ್ವೀಕರಿಸಲಾಯಿತು.

ಕೊರಟಗೆರೆ ವಿಧಾನಸಭಾಕ್ಷೇತ್ರದಿಂದ ಆಯ್ಕೆಯಾದ ಡಾ. ಜಿ. ಪರಮೇಶ್ವರ್ ಅವರು ಹಿರಿಯರು ಹಾಗೂ ಈ ಹಿಂದೆ ಉಪ ಮುಖ್ಯಮಂತ್ರಿಗಳಾಗಿದ್ದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಕೆ. ಹೆಚ್. ಮುನಿಯಪ್ಪ ಅವರು 7 ಬಾರಿ ಲೋಕಸಭಾ ಸದಸ್ಯರಾಗಿದ್ದವರು ಹಾಗೂ ಕೇಂದ್ರ ಸಚಿವರಾಗಿದ್ದು. ಕೆ.ಜೆ. ಜಾರ್ಜ್ ಅವರು ಈ ಹಿಂದೆ ನನ್ನ ಸಂಪುಟದಲ್ಲಿ ಸಚಿವರಾಗಿದ್ದರವರು, ಎಂ.ಬಿ.ಪಾಟೀಲ್ ಅವರು ವಿಜಯಪುರ ಜಿಲ್ಲೆಯಿಂದ ಆಯ್ಕೆಯಾಗಿ ಹಿಂದೆಯೂ ಮಂತ್ರಿಯಾಗಿದ್ದು, ಮತ್ತೊಮ್ಮೆ ಮಂತ್ರಿಯಾಗಿದ್ದಾರೆ. ಪ್ರಿಯಾಂಕ ಖರ್ಗೆವರು ಸಹ ಈ ಹಿಂದೆ ನನ್ನ ಸಂಪುಟದಲ್ಲಿ ಮಂತ್ರಿಯಾಗಿದ್ದವರು ಮತ್ತೊಮ್ಮೆ ಮಂತ್ರಿಯಾಗಿದ್ದಾರೆ. ಜಮೀರ್ ಆಹಮ್ಮದ್ ಖಾನ್ ಸಹ ಮಂತ್ರಿಯಾಗಿದ್ದಾರೆ. ರಾಮಲಿಂಗಾರೆಡ್ಡಿ ಅವರು ಅನೇಕ ಬಾರಿ ಮಂತ್ರಿಯಾಗಿದ್ದವರು ಮತ್ತೊಮ್ಮೆ ಮಂತ್ರಿಯಾಗಿದ್ದಾರೆ ಅದೇ ರೀತಿ ಸತೀಶ್ ಜಾರಕೀಹೋಳಿ ಅವರು ಸಹ ನನ್ನ ಮಂತ್ರಿಮಂಡಳದಲ್ಲಿ ಮಂತ್ರಿಯಾಗಿದ್ದಾರೆ ಎಂದು ಸದನಕ್ಕೆ ಪರಿಚಯ ಮಾಡಿಕೊಟ್ಟರು.

Post a Comment

0 Comments

Ad Code

Responsive Advertisement