ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಡಾ.ವಿ.ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ವಿ.ನಾರಾಯಣಸ್ವಾಮಿರವರು ಇಂದು ಆರ್.ಆರ್.ನಗರ ಬಿಬಿಎಂಪಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಆರ್.ಆರ್.ನಗರ ಪ್ರವೇಶ ದ್ವಾರದಿಂದ ಬೈಕ್ ಜಾಥ, ಪಾದಯಾತ್ರೆ ಮೂಲಕ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಾಮಪತ್ರ ಸಲ್ಲಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ವಿ.ನಾರಾಯಣಸ್ವಾಮಿರವರು ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣರವರು ನಾಡಿನ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಜೆಡಿಎಸ್ ಪಕ್ಷ ಎಲ್ಲ ಧರ್ಮ, ಜಾತಿಯವರನ್ನು ಸರಿಸಮಾನವಾಗಿ ಕಾಣುವ ಪಕ್ಷ ಮತ್ತು ಬಡವರ, ರೈತರ, ಶ್ರಮಿಕ ವರ್ಗ ಶ್ರೇಯೋಭಿವೃದ್ದಿಗೆ ಚಿಂತನೆ ಪಕ್ಷ ಜೆಡಿಎಸ್ ಪಕ್ಷ. ಜೆಡಿಎಸ್ ಪಕ್ಷದ ಪಂಚರಥಯಾತ್ರೆ ರಾಜ್ಯದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ.
ಕುಮಾರಣ್ಣ ರವರು ನಾಡಿನ ಜನರ ಹಿತಕ್ಕಾಗಿ ರಾಜ್ಯದಲ್ಲಿ 5000ಕಿಲೋ ಮೀಟರ್ ಯಾತ್ರೆ ಮಾಡಿದ್ದಾರೆ.
ರಾಜ್ಯದ ಅಭಿವೃದ್ದಿಯಾಗಬೇಕಾದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ನಿಂದ ಮಾತ್ರ. ಜೆಡಿಎಸ್ ಪಕ್ಷ ಬಹುಮತದಿಂದ ರಾಜ್ಯದ ಮತದಾರರು ಆಯ್ಕೆ ಮಾಡಲಿದ್ದಾರೆ , ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿರವರು ಖಚಿತ ಎಂದು ಹೇಳಿದರು.ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.

.jpeg)

0 Comments