Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರ: ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ BPKP ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಸಂತೋಷ್ ನಾಮಪತ್ರ

 ಮಲ್ಲೇಶ್ವರಂ 18 ಕ್ರಾಸ್ ಬಿಡಬ್ಲ್ಯೂಎಸ್ಎಸ್ಬಿ ಬಿಲ್ಡಿಂಗ್  ಚುನಾವಣಾ ಆಯೋಗದಲ್ಲಿ ಬೂತ್ ನಂಬರ್ 157, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ BPKP ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಸಂತೋಷ್ ಅವರು ನಾಮಪತ್ರ ಸಲ್ಲಿಸಿದರು .ಇದೇ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ  ರಾಮಚಂದ್ರ ಕುಲಕರ್ಣಿ ,ರಾಜ್ಯದ ಉಸ್ತುವಾರಿ ಲಿಂಗಾಯ ,ನಾಗರಾಜ್,ಶರತ್ ಮತ್ತಿತರರು ಉಪಸ್ಥಿತರಿದ್ದರು. 


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸಂತೋಷ್ ಅವರು ಮಾತನಾಡಿ  ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ವಾರ್ಡ್ ಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಸ್ಥಾಪಿಸಲಾಗುವುದು ಹಾಗೂ ಬಡವರಿಗೆ ,ಆಟೋ ಚಾಲಕರಿಗೆ ಕೂಲಿಕಾರ್ಮಿಕರಿಗೆ ,ಸ್ತ್ರೀಯರಿಗೆ ಬೀದಿ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು .ಜನರಿಂದ, ಜನರಿಗಾಗಿ ,ಜನರಿಗೋಸ್ಕರ ಇರುವಂತಹ BPKP ಪಾರ್ಟಿಯು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ,ಹಲವಾರು ತತ್ವಸಿದ್ಧಾಂತಗಳನ್ನು ಇರುವಂತ ಒಂದು ಪಕ್ಷವಾಗಿದೆ.

 ಪಕ್ಷದ ಸಂಘಟನೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು .ತಮ್ಮ ರಾಜಕೀಯ ಜೀವನದ ಮೊದಲನೇ ಅಧ್ಯಯನವನ್ನು ಮಲ್ಲೇಶ್ವರಂ ಕ್ಷೇತ್ರದಿಂದ  ಶುರುಮಾಡಿದ್ದು ತಮ್ಮೆಲ್ಲರ ಪ್ರೀತಿ ವಿಶ್ವಾಸ ಆಶೀರ್ವಾದವನ್ನು ಬಯಸುತ್ತಿರುವ ಸಂತೋಷ್ ಅವರಿಗೆ ಶುಭವಾಗಲಿ, ಮಂಗಳವಾಗಲಿ ,ಜಯವಾಗಲಿ  ಎಂದು ಆಶಿಸುತ್ತೇವೆ.


Post a Comment

0 Comments

Ad Code

Responsive Advertisement