ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ: ನರೇಂದ್ರ ಮೋದಿ 9 ವರ್ಷ ಪ್ರಧಾನಿಯಾಗಿ,14 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಒಂದೇ ಒಂದು ಸಣ್ಣ ಭ್ರಷ್ಟಾಚಾರದ ಆರೋಪ ಇಲ್ಲ. ಇದಕ್ಕೆ ಅವರ ಜೀವನವೇ ಉದಾಹರಣೆ. 23 ವರ್ಷದಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಬಹುಮತ ಬಂದ್ರೆ ಮಾತ್ರ ಏನಾದ್ರು ಮಾಡೋಕೆ ಸಾಧ್ಯ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಮತ್ತು ಬಿಜೆಪಿ ತಮಿಳುನಾಡಿನ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ನಗರದ ಮಯೂರ ಸರ್ಕಲ್ ಬಳಿಯಿರುವ ಸೇವಾಸೌಧ ದಲ್ಲಿ ಆಯೋಜಿಸಿದ ಬೆಂಗಳೂರು ಗ್ರಾಮಾಂತರ ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟದಲ್ಲಿ ಬಿಜೆಪಿ,ರಾಜ್ಯದಲ್ಲಿ ಬಿಜೆಪಿ,ಕೇಂದ್ರದಲ್ಲೂ ಬಿಜೆಪಿ ಬಂದ್ರೆನೇ ಈ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಎಲ್ಲ ಕಡೆ ಒಂದೇ ಪಕ್ಷ ಅಧಿಕಾರಕ್ಕೆ ಬಂದ್ರೆ ಮಾತ್ರ ಅಭಿವೃದ್ಧಿ ಆಗುತ್ತೆ. ಉತ್ತರ ಪ್ರದೇಶದಲ್ಲಿ ಯೋಗಿಜಿ ಅವರಿಗೆ ಅಷ್ಟು ತಾಕತ್ತು ಯಾಕೆ ಅಂದ್ರೆ ಅವರಿಗೆ ಅಲ್ಲಿ ಸೂಪರ್ ಮೆಜಾರಿಟಿ ಬಂದಿದೆ. ಅವರದೇ ಪಕ್ಷ ಅವರದೇ ನಿರ್ಧಾರ. ಆ ರೀತಿ ನಮ್ಮಲ್ಲೂ ಆಗಬೇಕು ಆಗ ಅಭಿವೃದ್ಧಿ ಸಾದ್ಯ ಎಂದರು.
ಈಗ ಕರ್ನಾಟಕಕ್ಕೇ ಬೇಕಿರುವುದು ಕೂಡ ಅದೇ ಬಹುಮತ 130 ಸೀಟು. ಶಿಡ್ಲಘಟ್ಟದಲ್ಲಿ ಬಿಜೆಪಿ ಬರಬೇಕು. ಅದೇ ರೀತಿ
ಜಿಲ್ಲೆ, ತಾಲೂಕು, ಎಲ್ಲಾಕಡೆ ನಮ್ಮ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದನ್ನ ಫೇಸಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಎಲ್ಲ ಕಡೆ ಬಿಜೆಪಿ ಪರವಾಗಿ ಪ್ರಚಾರ ಮಾಡಬೇಕು. ಇಡೀ ಭಾರತದಲ್ಲಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಯಾಕೆ ಪ್ರಬಲವಾಗಿದೆ ಅಂದ್ರೆ ನಮ್ಮ ಬಳಿ ಮೆಟಿರಿಯಲ್ ಇದೆ, ನಾಯಕರು ಇದ್ದಾರೆ, ತಾಕತ್ತು ಇದೆ, ನಾವು ಮಾಡಿರುವ ಕೆಲಸ ಇದೆ. ನಾವು ಹೇಳಿದಾಗ ಜನ ನಂಬುತ್ತಾರೆ. ನಾವು ಏನು ಮಾಡಿದ್ದೀವಿ ಅದನ್ನ ಮಾತ್ರ ನಾವು ಹೇಳ್ತಿವಿ.
ಹೈಟೆಕ್ ಸಿಲ್ಕ್ ಮಾರ್ಕೆಟ್ ಮಾಡೋಕೆ ಬೊಮ್ಮಾಯಿ ಅವರು ಬಜೆಟ್ ಅಲ್ಲಿ ದುಡ್ಡು 75 ಕೋಟಿ ಮೀಸಲಿಟ್ಟಿದ್ದಾರೆ. ಈ ಹಿಂದೆ ಯಾವ ಸರ್ಕಾರಗಳು ಮಾಡದೇ ಇರುವ ಕೆಲಸ ನಮ್ಮ ಬೊಮ್ಮಾಯಿ ಅವರು ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಒಬ್ಬ ರೈತನಿಗೆ 3 ಬಾರಿ 2000 ರೂ ಖಾತೆಗೆ ಹಾಕುತ್ತಾರೆ. ಒಟ್ಟು 6000 ನೀಡುತ್ತಾರೆ. ಯಡಿಯೂರಪ್ಪ ಅವರ ಸರ್ಕಾರ ಇನ್ನು 4000 ಸಾವಿರ ಒಟ್ಟು ಹತ್ತು ಸಾವಿರ ಕೊಟ್ಟಿದ್ದಾರೆ. ಇದು ಯಾವ ರಾಜ್ಯದಲ್ಲಿ ಕೂಡ ಇಲ್ಲ ಎಂದು ಕಾಂಗ್ರಸ್ ವಿರುದ್ಧ ಗುಡುಗಿದರು.
ರೈತರ ಮಕ್ಕಳು, ಆಟೋ ಡ್ರೈವರ್ ಮಕ್ಕಳು, ಕೂಲಿ ಮಾಡುವವರ ಮಕ್ಕಳು ಯಾರ ಮಕ್ಕಳು ಕೂಡ ವಿದ್ಯೆಯಿಂದ ವಂಚಿತರಾಗ ಬಾರದು ಅಂತ ವಿದಾರ್ಥಿ ವೇತನ ಕೊಡ್ತಾ ಇದ್ದಾರೆ. ಇದು ಬಿಜೆಪಿ ಮಾಡಿರೋ ಕೆಲಸ. ಈ ಬಾರಿ ಶಿಡ್ಲಘಟ್ಟದಲ್ಲಿ ಬಿಜೆಪಿ ಪಕ್ಷ ಗೆದ್ದೇ ಗೆಲ್ಲುತ್ತೆ ಅಂತ ಭರವಸೆ ನೀಡುತ್ತೆನೆ ಎಂದರು.
ಈ ಸಂದರ್ಭದಲ್ಲಿಎಂಎಲ್ ಸಿ ಕೇಶವಪ್ರಸಾದ್,ಮಾಜಿ ಶಾಸಕ ಎಂ ರಾಜಣ್ಣ ,ರಾಜ್ಯ ಸಹ ಸಂಚಾಲಕ, ಸಾಮಾಜಿಕ ಮಾಧ್ಯಮ ನರೇಂದ್ರ ಸಿಂಹ ಮೂರ್ತಿ, ಡಾ. ಜಿ ಮಂಜುನಾಥ್,ಆನಂದ ಗೌಡ,ತಾಲೂಕು ಮಂಡಲ ಅಧ್ಯಕ್ಷ ಸುರೇಂದ್ರಗೌಡ,ಡಾ ಸತ್ಯನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.






0 Comments