ವರದಿ - ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ನಿರುದ್ಯೋಗ ಸಮಸ್ಯೆ ಬಗೆಹರಿಸಲು ಚುನಾವಣೆ ಕಳೆದ ಎರಡು ತಿಂಗಳಲ್ಲಿ ಕೈಗಾರಿಕಾ ಸ್ಥಾಪನೆ ಮಾಡಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿನ ವಿದ್ಯಾವಂತ ಯುವಕರಿಗೆ ಉದ್ಯೋಗಗಳನ್ನು ನೀಡುವ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ತಿಳಿಸಿದರು.
ಬಶೆಟ್ಟಹಳ್ಳಿ ಹೋಬಳಿಯ ಗಂಜಿಗುಂಟೆ ಗ್ರಾಮದಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮಗೆ ನೀವು ಹೆಚ್ಚು ಶಕ್ತಿ ನೀಡಿದರೆ ಐದು ವರ್ಷದಲ್ಲಿ ಹೆಚ್ಚು ಅಭಿವೃದ್ಧಿ ಮಾಡುವ ಕೆಲಸಕ್ಕೆ ನಾನು ಒತ್ತು ನೀಡುತ್ತೇನೆ. ಈ ಕ್ಷೇತ್ರದಲ್ಲಿ ನಾನು ಉಚಿತವಾಗಿ ಹತ್ತು ಆ್ಯಂಬುಲೆನ್ಸ್ ನೀಡಿದ್ದೇನೆ. ಅದರ ಸದುಪಯೋಗ ಪಡೆದಿದ್ದೀರಿ ನಮ್ಮ ಸೇವೆ ಏನು ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇನ್ನು ಕೊರೋನ ಕಷ್ಟ ಕಾಲದಲ್ಲಿ ಬಡಜನರ ನೆರವಿಗಾಗಿ ದಾವಿಸಿದ್ದು, ಅಂದು ಜನರ ಕಷ್ಟಕ್ಕೆ ನಿಂತಿದ್ದು ಯಾರು ಎಂಬುದು ನಿಮೆಗೆಲ್ಲಾ ಗೊತ್ತಿದೆ. ದಯವಿಟ್ಟು ಈ ಬಾರಿ ನಿಮ್ಮ ರಾಜೀವ್ ಗೌಡನನ್ನು ಗೆಲ್ಲಿಸಬೇಕೆಂದು ಮತಯಾಚಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ನಾಯಕರು ನೀಡಿರುವ ಯೋಜನೆಗಳಾದ ಅಕ್ಕಿ, ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಹಣ, ನಿರುದ್ಯೋಗಸ್ಥರಿಗೆ ಗೌರವಧನವನ್ನು ಪ್ರತಿ ಮನೆ ಭಾಗಲಿಗೆ ತಲುಪಿಸುವ ಕೆಲಸ ನಮ್ಮದಾಗಿರುತ್ತದೆ ಎಂದರು.
ರಾಜೀವ್ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಮಾರು 20ಕ್ಕೂ ಹೆಚ್ಚಿನ ಕಾರ್ಯಕರ್ತರು ಸೇರ್ಪಡೆ.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಸಹನಾಗೌಡ, ಕೆ ಎಂ ಎಪ್ ನಿರ್ದೇಶಕ ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಗಂಜಿಗುಂಟೆ ಮೌಲಾ, ಗುಡಿಯಪ್ಪ, ದಿಬ್ಬೂರಹಳ್ಳಿ ರಾಜಣ್ಣ, ಡಿ.ಪಿ.ನಾಗರಾಜು, ಗೋವಿಂದರಾಜು, ವೆಂಕಟೇಶ್, ದ್ಯಾವಪ್ಪ, ನಗರಸಭೆ ಸದಸ್ಯ ಮಂಜುನಾಥ್, ಎಪಿಎಂಸಿ ನಿರ್ದೇಶಕ ವೆಂಕಟೇಶ್, ಸಯ್ಯದ್ ಸಾಬ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.




0 Comments