ಕೊಳ್ಳೇಗಾಲ ಸುದ್ದಿ ,;ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಬಿರುಸಿನ ಮತ ಪ್ರಚಾರ ಕೈಗೊಂಡಿರುವ ಜೆಡಿಎಸ್ ಅಭ್ಯರ್ಥಿ ಆರ್.ಮಂಜುನಾಥ್ ಬೈಕ್ ಮೂಲಕ ಪ್ರಚಾರ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಹನೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಆರ್. ಮಂಜುನಾಥ್ 2023ರ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡು ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾವನ್ನು ನಡೆಸುತ್ತಿದ್ದಾರೆ,
ಈಗಾಗಲೇ ಪ್ರಚಾರ ಪ್ರಾರಂಭಿಸಿರುವ ಆರ್. ಮಂಜುನಾಥ್ ರವರು ಕ್ಷೇತ್ರದ ಪಾಳ್ಯ ಗ್ರಾಮದಲ್ಲಿ ಮತ ಪ್ರಚಾರ ಕಾರ್ಯವನ್ನು ಕೈಗೊಂಡುಗ್ರಾಮದ ಕಿರಿದಾದ ಓಣಿಗಳಲ್ಲಿನ ಮುಖಂಡರುಗಳ ಜೊತೆ ಹಲವಾರು ಮನೆಗಳಿಗೂ ಹೋಗಿ ಹನೂರು ಕ್ಷೇತ್ರದ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಿ ಪಕ್ಷವನ್ನು ಬೆಂಬಲಿಸಿ ಎಂದು ಮತಯಾಚಿಸಿದರು.
ಈ ವೇಳೆ ಅವರು ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸುದ್ಧಿಗಾರ ಜೊತೆ ಮಾತನಾಡಿ ಶಾಸಕ ಆರ್ ನರೇಂದ್ರ ಸತತವಾಗಿ 15 ವರ್ಷ ಅಧಿಕಾರ ಮಾಡಿದ್ದರು ಕ್ಷೇತ್ರದಲ್ಲಿ ಇನ್ನೂ ಕೂಡ ಅಭಿವೃದ್ಧಿ ಕಾಣದೆ ಕ್ಷೇತ್ರ ಹಿಂದುಳಿದಿದೆ ಇದಕ್ಕೆ ಕಾರಣ ಅವರ ನಿರ್ಲಕ್ಷ್ಯ ಹಾಗೂ ಕಾಮಗಾರಿ ಪ್ರಾರಂಭ ಮಾಡಬೇಕಾದರೆ ಮೊದಲೇ ಕಮಿಷನ್ ನೀಡಬೇಕು ಎಂದು ತಾಕೀತು ಮಾಡುವುದು ಅದು ಕ್ಷೇತ್ರದ ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ, ಇನ್ನೂ ಕ್ಷೇತ್ರ ಹೇಗೆ ಅಭಿವೃದ್ಧಿ ಆಗುತ್ತದೆ, ಇವರು ಜನರ ಮತ ಪಡೆದು ಗೆದ್ದು ಸುಖಸುಮ್ಮನೆ ಕಾಲಹರಣ ಮಾಡಿ ಕ್ಷೇತ್ರದಾ ಜನತೆ ವಂಚಿಸುವ ಬದಲು ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿ ಇರುವುದು ಒಳ್ಳೆಯದು,
ಹಾಗೆ ಕ್ಷೇತ್ರದ ಜನತೆ ಚುನಾವಣೆ ಸಂದರ್ಭದಲ್ಲಿ ಸರಿಯಾಗಿ ಯೋಚಿಸಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಟ್ಟುಕೊಂಡಿರುವವರಿಗೆ ಮತ ನೀಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅವಕಾಶ ಮಾಡಿ ಕೊಡಿ ಈಗಾಗಲೇ ನಾನು ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿಯೇ ಉಳಿದು ಹಲವಾರು ಕೆಲಸ ಕಾರ್ಯಗಳನ್ನ ಮಾಡುತ್ತಾ ಬರುತ್ತಿದ್ದೇನೆ,
ಜನ ಸಾಮಾನ್ಯರ ಜೊತೆ ನನ್ನ ಸಂಬಂಧ ದಿನ ದಿನೇ ಜಾಸ್ತಿ ಆಗುತ್ತಿರುವುದರಿಂದ . ಕ್ಷೇತ್ರದ ಇತರೆ ಪಕ್ಷದ ನಾಯಕರಿಗೆ ನಾನೇ ಟಾರ್ಗೆಟ್ ಆಗಿದ್ದೇನೆ, ಯಾಕೆಂದರೆ ಕಳೆದ ಆರು ಏಳು ವರ್ಷಗಳಿಂದ ಗ್ರಾಮಗಳಲ್ಲಿನ ಜನತೆಯ ಊರು ಕೇರಿಗಳಲ್ಲಿ ಸುತ್ತಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ಅವರಲ್ಲೂ ನಾನು ಒಬ್ಬ ಅನ್ನುವುದು ಅವರಿಗೆ ತಿಳಿದಿದೆ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಆಗದ ಕಾರಣ . ಕೆಲವು ಕಡೆ ನಾವು ಕಾರಲ್ಲಿ ಹೋಗುವುದಕ್ಕೆ ಆಗದ ಪರಿಸ್ಥಿತಿ ಇರುವುದರಿಂದ ಬೈಕು ಹಾಗು ಕಾಲ್ನಡಿಗೆಯಲ್ಲಿ ಹೋಗುವುದು ಹೊಸತೇನಲ್ಲ. ಜನತೆಯ ಮನೆ ಬಾಗಿಲಿಗೆ ಹೋದರೆ ನಿಜವಾದ ಕಷ್ಟ ಸುಖ ತಿಳಿಯಲಿದೆ. ಬಂಡವಾಳ ಶಾಹಿಗಳು, ಕುಟುಂಬ ರಾಜಕಾರಣಿಗಳಿಗೆ ನಾನೇ ಟಾರ್ಗೆಟ್ ಆಗಿದ್ದೇನೆ. ಶಾಸಕರು ಸೇರಿದಂತೆ 6 ಆರು ಮಂದಿ ನನ್ನ ಸೋಲಿಸಲು ಮುಂದಾಗಿದ್ದಾರೆ. ಜನತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭ ದಲ್ಲಿ ಜೆಡಿಎಸ್ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

0 Comments