Ticker

6/recent/ticker-posts

Ad Code

Responsive Advertisement

ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಳಿಸಿದ 135 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ

ವರದಿ ಮಧು ದೇವನಹಳ್ಳಿ...


ವಾರ್ತಾ ಜಾಲ  ದೇವನಹಳ್ಳಿ: ನಿಮ್ಮ 5 ವರ್ಷಗಳ ಪರಿಶ್ರಮ ಮುಂದಿನ ಭವಿಷ್ಯದ ದಿಕ್ಸೂಚಿಯಾಗಿದೆ ಯುವ ವೈದ್ಯರಾದ ನಿಮ್ಮಿಂದ ಆರೋಗ್ಯವಂತ ಸಮಾಜ ನಿರ್ಮಾಣ ನಿರೀಕ್ಷಿಸಲಾಗಿದೆ ನೀವು ಇಲ್ಲಿ ಇಂದು ಪದವಿ ಪ್ರಮಾಣ ಪತ್ರ ಪಡೆಯುದುವು ಮುಖ್ಯವಲ್ಲ ಇನ್ನು ಮುಂದೆ ನಿಮ್ಮ ವೈದ್ಯಕೀಯ ಸೇವಾ ವೃತ್ತಿಯಲ್ಲಿ ಪರೀಕ್ಷೆಗಳು ಎದುರಾಗಲಿವೆ ನಿಮ್ಮಲ್ಲಿ ಸೇವಾಮನೋಭಾವದ ಹಸಿವು ಹೆಚ್ಚಾಗಬೇಕು ಎಂದು ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ. ಮಂಜುನಾಥ್  ಹೇಳಿದರು.
ಅವರು ದೇವನಹಳ್ಳಿ ಪಟ್ಟಣದ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ನಡೆದ  ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ     2017-18 ನೇ ಬ್ಯಾಚ್ ವೈದ್ಯಕೀಯ ವಿದ್ಯಾರ್ಥಿಗಳ ಅಂತಿಮ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂ¨ದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ನಿಮ್ಮಲ್ಲಿ ಇನ್ನೂ ಮುಂದೆ ಜ್ಞಾನದ ಹಸಿವು ಹೆಚ್ಚಿಸಿಕೊಳ್ಳುವುದರ ಜೊತೆಗೆ ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು ವ್ಯಾಪಾರೀಕರಣ ಮನೋಭಾವದಲ್ಲಿ  ಈ ನಿಮ್ಮ ವಿದ್ಯೆ ಬಳಸದೇ ಜನರ ಜೀವರಕ್ಷಣೆಯೇ ಮುಖ್ಯ ಗುರಿಯಾಗಿಸಬೇಕು ವೈದ್ಯಕೀಯ ವಿಜ್ಞಾನ ಪಯಣ ಸುಲಭದ ಮಾತಲ್ಲ ಕೊವಿಡ್ ಸಂದರ್ಭದಲ್ಲಿ ವಿಶ್ವವೇ ದಿಟ್ಟಿಸಿ ನೋಡುವಂತೆ 200 ಕೋಟಿಗೂ ಅಧಿಕ ವ್ಯಾಕ್ಸಿನೇಷನ್ ಮಾಡಿ ಕರೋನ ತಡೆಯಾಗಿದೆ ಇದು ವಿಶ್ವಕ್ಕೆ ಮಾದರಿಯಾದ ವಿಚಾರವಾಗಿದೆ  ಆಕಾಶ್ ಮೆಡಿಕಲ್ ಕಾಲೇಜಿನ ಸಂಸ್ಫಾಪಕ ಮುನಿರಾಜುರವರು ಕರೋನ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ತಮ್ಮ ಮೆಡಿಕಲ್ ಕಾಲೇಜು ಮತ್ತು ವಿದ್ಯಾರ್ಥಿಗಳನ್ನು ಸಂಪೂರ್ಣ ಕರೋನ ರೋಗ ವಾಸಿ ಮಾಡಲು ಸರ್ಕಾರಕ್ಕೆ ಸಹಕರಿಸಿದರು ಅದೇ ಇತರೆ ಮೆಡಿಕಲ್ ಕಾಲೇಜುಗಳು 25-30 ಶೇಕಡವಾರು ಕರೋನ ರೋಗಿಗಳಿಗೆ ಮೀಸಲಿಟ್ಟಿದ್ದರು ಇಂತಹ ಸೇವಾಮನೋಭಾವದಿಂದ ಇವರ ಕಾಲೇಜಿನಿಂದ 135 ಮಂದಿ  ಎಂಬಿಬಿಸಿ ಹಾಗೂ 6 ಮಂದಿ ಫಿಜಿಯೋಥೆರಪಿ ಮುಗಿಸಿ ಯುವ ವೈದ್ಯರಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಈ ವೈದ್ಯಕೀಯ ಕಾಲೇಜು ಸಾಮಾಜಿಕ ಕಳಕಳಿ ಹೊಂದಿದೆ ಈ ಸಂಸ್ಥೆಯನ್ನು ಮುನಿರಾಜು ಅತ್ಯಂತ ಶ್ರಮ ನಿಷ್ಟೇ ಪ್ರಾಮಾಣಿಕತೆಯಿಂದ ಕಟ್ಟಿದ್ದಾರೆ ಇಂತಹ ಸಂಸ್ಥೆಯಲ್ಲಿ ಕಲಿತವರು ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಒದಗಿಸಬಲ್ಲರು ಇಲ್ಲಿಯೇ ಹುಟ್ಟಬೇಕು ಇಲ್ಲಿಯೇ ಸಾಯಬೇಕು ಎಂದು ಯಾರೂ ಅರ್ಜಿ ಹಾಕಿಕೊಂಡಿರುವುದಿಲ್ಲ ಪ್ರತೀ ನಿಮಿಷ ಆನಂದವಾಗಿ ಜೀವಿಸಿ ಇತರರನ್ನು ಬದುಕಲು ಬಿಡಿ ಆತ್ಮ ಸ್ಥೆöÊರ್ಯ ವಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ದೇಶದ ಬಗ್ಗೆ ಕಾಳಜಿ ಇರಲಿ ಎಂದರು.
ಬೆಂಗಳೂರು ವಿವಿಯ ಉಪಕುಲಪತಿ ಡಾ. ಎಸ್.ಎಂ. ಜೈಕರ್  ಮಾತನಾಡಿ, ವೈದ್ಯಕೀಯ ಶಿಕ್ಷಣ ಅತ್ಯಂತ ಕಠಿಣ ಇಲ್ಲಿ ಪಠ್ಯಕ್ರಮಕ್ಕಿಂತ ಪ್ರಾಯೋಗಿಕವಾಗಿ ಕಲಿಯುವು ಬಹಳಷ್ಠಿರುತ್ತದೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಶೇಕಡ 20 ರಷ್ಟು ಜನರಿಗೆ ಮಾತ್ರ ದೊರೆಯುತ್ತಿದೆ ಇದು ಎಲ್ಲರಿಗೂ ಲಭ್ಯವಾಗುವಂತಾಗಬೇಕು ಈ ಶಿಕ್ಷಣ ಸಂಸ್ಥೆಯ ಮುನಿರಾಜುರವರ ಪರಿಶ್ರಮವೇ ಪದವಿ ಪ್ರಧಾನ ಸಮಾರಂಭವಾಗಿದ್ದು  ಈ ಹಂತ ವೈದ್ಯಕೀಯ ಪಧವೀಧರರ ಜೀವನದ ಮಹತ್ತರ ತಿರುವಿನ ಘಟ್ಟವಾಗಿದೆ ಜೀವನದಲ್ಲಿ ಸಿದ್ದಾಂತವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ ಅಂಕಗಳಿಗೆ ಪದವಿ ಪ್ರಮಾಣ ಪತ್ರಕ್ಕೆ ನಿಮ್ಮ ವಿದ್ಯೆ ಸೀಮಿತವಾಗಬಾರದು ನಿಮ್ಮಿಂದ ಹೊಸಹೊಸ ಸಂಶೋಧನೆಗಳಾಗಬೇಕು ನೈಪುಣ್ಯತೆ ಕಲಿಯಬೇಕು ಸಮಾಜಕ್ಕೆ ವೈದ್ಯಕೀಯ ಕ್ಷೇತ್ರಕ್ಕೆ  ನಿಮ್ಮದೇ ಆದ ಕೊಡುಗೆ ನೀಡಬೇಕೆಂದರು.

ಆಕಾಶ್ ಸಂಸ್ಥಾಪಕ ಕೆ. ಮುನಿರಾಜು ಮಾತನಾಡಿ, ಇಂದು ನಮ್ಮ ಮೆಡಿಕಲ್ ಕಾಲೇಜಿನಿಂದ 141 ಜನ ವೈದ್ಯಕೀಯ ಪದವಿ ಪಡೆದು ಹೊರಹೊಮ್ಮುತ್ತಿರುವುದು ಸಂತಸ ತಂದಿದೆ ಇದರ ಹಿಂದೆ ನಾವು 10 ವರ್ಷಗಳ ಶ್ರಮ ಹಾಕಿದ್ದೆವು ಇದಕ್ಕೆ ನಮ್ಮ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಭೋಧಕ ಸಿಬ್ಬಂದಿಯ ಪರಿಶ್ರಮ ಹೆಚ್ಚಿನದಾಗಿದೆ ಇದು ನಮ್ಮ ಕಾಲೇಜಿನ ಇತಿಹಾಸದ ಮತ್ತೊಂದು ಮೈಲಿಗಲ್ಲಿನ ದಿನವಾಗಿದೆ ಎಂದರು.
ಈ ಸಮಾರಂಭದಲ್ಲಿ ಆಕಾಶ್ ಸಮೋಹ ಶಿಕ್ಷಣ ಸಂಸ್ಥೆಗಳ ಚೇರಮನ್ ಪುಷ್ಪ ಮುನಿರಾಜು, ಪ್ರಾಂಶುಪಾಲ ಡಾ. ಶಿವಪ್ರಕಾಶ್ ಎನ್.ಸಿ,  ಸಿಇಓ ಡಾ. ನರೇಶಶೆಟ್ಟಿ, ಮೆಡಿಕಲ್ ಸೂಪರಿಂಡೆಟ್ ಡಾ. ಬ್ರಿಜೇಶ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ. ಅಮರಗೌಡ, ನಿರ್ದೇಶಕ ಆಕಾಶ್ ಗೌಡ, ಮುಂತಾದವರಿದ್ದರು.

Post a Comment

0 Comments

Ad Code

Responsive Advertisement