Ticker

6/recent/ticker-posts

Ad Code

Responsive Advertisement

ಯಾತ್ರಿ ಆಟೋ ರಿಕ್ಷಾ ಆಫ್ ಗೆ ಉತ್ತಮ ಸ್ಪಂದನೆ : ನಂದನ್ ನೀಲೇಕಣಿ

ಬೆಂಗಳೂರು, ಮಾ, 20; “ಕಳೆದ ಎರಡೂವರೆ ದಶಕಗಳಲ್ಲಿ ದೇಶದಲ್ಲಿ ಡಿಜಿಟಲ್ ಮೂಲ ಸೌಕರ್ಯ ಅಗಾಧವಾಗಿ ಬೆಳವಣಿಗೆ ಕಂಡಿದ್ದು, ಇದೀಗ ಅಂತರ್ ಸಾಗಾಣೆ ವ್ಯವಸ್ಥೆಯಲ್ಲಿ ಹೆಚ್ಚು ಜನರ ಸಹಭಾಗಿತ್ವದಡಿ ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ಮೂಲಕ ಸುಗಮ ಜೀವನಕ್ಕೆ ನಾಂದಿ ಹಾಡಬೇಕು” ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಸಂಸ್ಥಾಪಕ ಅಧ್ಯಕ್ಷ ನಂದನ್ ನೀಲೇಕಣಿ ಕರೆ ನೀಡಿದ್ದಾರೆ. 




ಸುಗಮ ಸಂಚಾರದ ಉದ್ದೇಶದಿಂದ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಟೋ ರಿಕ್ಷಾ ಆಪ್ ಮೂಲಕ ಆಟೋಗಳ ಚಲನವಲನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ, ಗ್ರಾಹಕರು, ಆಹಾರ ಪೂರೈಕೆದಾರರು ಹೀಗೆ ಪ್ರತಿಯೊಬ್ಬರ ಸುಗಮ ಜೀವನಕ್ಕೆ ಇದು ಪೂರಕವಾಗಿದೆ. ಸಾಗಾಣೆ ವ್ಯವಸ್ಥೆಯಲ್ಲಿನ ಹೊಸ ಬೆಳವಣಿಗೆಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ನಗರದ ಕಾನ್ರಾಡ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಈ ವರ್ಷದ ಭವಿಷ್ಯದ ಸುಸ್ಥಿರ ನಗರಗಳಿಗಾಗಿ “ಐಸಿಟಿ ವೇದಿಕೆ” ಕುರಿತ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ ನಂದನ್ ನೀಲೇಕಣಿ, ಡಿಜಿಟಲ್ ವ್ಯವಸ್ಥೆ ನಮಗೆ ಪ್ರಮುಖವಾಗಿದ್ದು, ಈ ವಲಯ ವೇಗವಾಗಿ ಬೆಳವಣಿಯಾಗುತ್ತಿದೆ. ಇದೀಗ ಡಿಜಿಟಲ್ ಮೂಲ ಸೌಕರ್ಯ ವಾಸ್ತುಶಿಲ್ಪದ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎಂದರು.

ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಉತ್ತಮವಾಗಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡ ಎಲ್ಲರ ವಿವರಗಳು ಇದೀಗ ಲಭ್ಯವಿದೆ. ಫಾಸ್ಟ್ ಟ್ಯಾಗ್ ಕೂಡ ಮತ್ತೊಂದು ಮಹತ್ವದ ಉಪಕ್ರಮವಾಗಿದೆ. ವಿಮಾನಗಳಲ್ಲಿ ಪ್ರಯಾಣಿಸಲು ಪ್ರಯಾಣದ ಟಿಕೆಟ್ ಗಳನ್ನು ಅಪ್ ಲೊಡ್ ಮಾಡಿದರೆ ಹೆಚ್ಚಿನ ತಪಾಸಣೆ ಕಡಿಮೆಯಾಗಿ ಸುಗಮ ಪ್ರಯಾಣಕ್ಕೆ ರಹದಾರಿಯಾಗಲಿದೆ. ನಮ್ಮ ಯಾತ್ರಿ ಆಟೋ ರಿಕ್ಷಾ ಆಫ್ ಅನ್ನು ಹೆಚ್ಚಿನ ಪ್ರಯಾಣಿಕರು ಬಳಸುತ್ತಿದ್ದು, ಸುಲಲಿತವಾಗಿ ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿದೆ. ಈ ಆಪ್ ನಲ್ಲಿ ಬೆಂಗಳೂರಿನಲ್ಲಿ ಎಷ್ಟು ಆಟೋಗಳಿವೆ, ಎಲ್ಲಿ ಕಡಿಮೆ ಆಟೋಗಳಿವೆ. ಎಲ್ಲಿ ಸಂಚರಿಸಿದರೆ ಪ್ರಯಾಣಿಕರು ದೊರೆಯಬಹುದು ಎನ್ನುವ ಮಾಹಿತಿಯನ್ನು ಆಟೋ ಚಾಲಕರು ನೋಡಬಹುದಾಗಿದೆ.  ಮೆಟ್ರೋ ರೈಲು ಸಹ ಉತ್ತಮವಾಗಿದ್ದು, ಹೀಗೆ ಒಂದೊಕ್ಕೊಂದು ಸಂಬಂಧ ಹೊಂದಿರುವ ಸಾಗಣೆ ವಲಯ ವ್ಯವಸ್ಥೆಯಿಂದ ಶತಕೋಟಿ ಜನರ ಬದುಕಿಗೆ ನೆರವಾಗಲಿದೆ ಎಂದರು.

ಬೆಂಗಳೂರಿನಲ್ಲಿನ ಫ್ರಾನ್ಸ್ ರಾಯಭಾರಿ ಥಿಯೆರ್ರಿ ಬೆರ್ಥೆಲೋಟ್ ಭಾರತ – ಫ್ರಾನ್ಸ್ ಸಹಭಾಗಿತ್ವ ಕುರಿತು ಮಾತನಾಡಿ, “ಉಭಯ ದೇಶಗಳ ನಡುವೆ ಡಿಟಿಟಲ್ ವಲಯದಲ್ಲಿ ಬಲಿಷ್ಠ ದ್ವಿಪಕ್ಷೀಯ ಬಾಂಧವ್ಯವಿದೆ” ಎಂದರು.

Post a Comment

0 Comments

Ad Code

Responsive Advertisement