ಬೆಂಗಳೂರು, ಮಾರ್ಚ್ 20, (ಕರ್ನಾಟಕ ವಾರ್ತೆ): ವಿಧಾನಸಭೆ ಸಾರ್ವತ್ರಿಕ ಚುನಾವಣೆ - 2023 ಏಪ್ರಿಲ್- ಮೇ ಮಾಹೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಕ್ತ, ನಿಶ್ಪಕ್ಷಪಾತವಾಗಿ ನಡೆಸುವ ಹಾಗೂ ಮತದಾರರು ನಿರ್ಭೀತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆ -4ರ ವ್ಯಾಪ್ತಿಗೆ ಒಳಪಡುವ ಶ್ರೀರಾಮಪುರ, ರಾಜಾಜಿನಗರ, ಸಂಪಂಗಿರಾಮನಗರ, ಜಯನಗರ, ಅಶೋಕನಗರ ಮತ್ತು ಶಾಂತಿನಗರ ಅಬಕಾರಿ ವಲಯ ಪ್ರದೇಶಗಳಲ್ಲಿ, ಎನ್.ಡಿ.ಪಿ.ಎಸ್. ಪದಾರ್ಥಗಳು/ ಅನಧಿಕೃತ/ ನಕಲಿ ಡಿಫೆನ್ಸ್ ಇತ್ಯಾದಿ ಮಧ್ಯ ತಯಾರಿಕೆ, ದಾಸ್ತಾನು ಮಾರಾಟ ಮತ್ತು ಸಾಗಾಣಿಕೆ ಅಥವಾ ಅಬಕಾರಿ ಸಂಬಂಧಿತ ಯಾವುದೇ ಪದಾರ್ಥಗಳು ಕಂಡುಬಂದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ ( ಶುಲ್ಕ ರಹಿತ) 1800-425-1245 ಗೆ ಮಾಹಿತಿ ಅಥವಾ ದೂರು ಸಲ್ಲಿಸಬಹುದಾಗಿದೆ. ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು.
ಇ-ಮೇಲ್ - dcebud4@gmail.com, ಹಾಗೂ ಕಛೇರಿ ವಿಳಾಸ ಅಬಕಾರಿ ಉಪ ಆಯುಕ್ತರ ಕಛೇರಿ, ಬೆಂಗಳೂರು ನಗರ ಜಿಲ್ಲೆ-4, ನಂ.334/6 ಮೊದಲನೇ ಮಹಡಿ, ಅಬಕಾರಿ ಭವನ, ಕೆ.ಎಸ್.ಬಿ.ಸಿ.ಎಲ್ ಕಾಂಪ್ಲೆಕ್ಸ್, ಬಾಟರಾಯನಪುರ ಠಾಣೆ ಎದುರು, ಮೈಸೂರು ರಸ್ತೆ, ಬೆಂಗಳೂರು-560026, ದೂರವಾಣಿ ಸಂಖ್ಯೆ: 080-29915540 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments