Ticker

6/recent/ticker-posts

Ad Code

Responsive Advertisement

ಸಚಿವ ಎಸ್. ಟಿ. ಸೋಮಶೇಖರ್ ಸಾಧನೆ ಪ್ರಶಂಸನಿಯ : ಅಮಿತ್ ಶಾ

ಬೆಂಗಳೂರು : ಸಹಕಾರ ಇಲಾಖೆ ಹಾಗೂ ಇತರೆ ಇಲಾಖೆಗಳ  ಸಂಯುಕ್ತ ಆಶ್ರಯದಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ರವರ ಅಧ್ಯಕ್ಷತೆಯಲ್ಲಿ ನಗರದ ಕೆಂಗೇರಿ ಉಪನಗರದ ಬಳಿ ಇರುವ ಕೊಮ್ಮಘಟ್ಟ ಮೈದಾನದಲ್ಲಿ ಆಯೋಜಿಸಲಾಗಿತ್ತು. 

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್. ಟಿ. ಸೋಮಶೇಖರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕಾರ್ಯಕ್ರಮಗಳ ಉದ್ಘಾಟನೆ ನಂತರ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ರವರು ಸ್ಥಳೀಯ  ಶಾಸಕರಾಗಿ ರಾಜ್ಯ ಸಚಿವರಾಗಿ ಎಸ್. ಟಿ. ಸೋಮಶೇಖರ್ ರವರು ಕ್ಷೇತ್ರದ ಹಾಗೂ ತಮ್ಮ ಇಲಾಖೆಯ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುತ್ತಾ ಜನರ ಆಶೋತ್ತರಗಳನ್ನು ನೆರೆವೇರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವುದನ್ನು ಶ್ಲಾಘಿಸಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರಗತಿಪರ ಚಿಂತನೆ ಹಾಗೂ ಜನಪರ ಆಡಳಿತಕ್ಕೆ ಹೆಗಲುಕೊಟ್ಟು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಜವಾಬ್ದಾರರಾಗಿ ಜನಾನುರಾಗಿಗಳಾಗಿ, ಕ್ಷೇತ್ರದ ಅಭಿವೃದ್ಧಿಯ ಕಡೆ ವಿಶೇಷ ಗಮನಕೊಟ್ಟ ಸೋಮಶೇಖರ್ ರವರ ಕಾರ್ಯವೈಖರಿಯನ್ನು ಕ್ಷೇತ್ರದ ಮತದಾರರು ಅರಿತಿದ್ದಾರೆ ಎಂದ ಅವರು, ಸರ್ಕಾರದ ಯಶಸ್ಸಿಗೆ ಸಮಸ್ತರ ಯೋಗದಾನ  ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ರಾಜ್ಯದಲ್ಲಿ ಜನ ಬಹುಮತವನ್ನು ನೀಡಿ ಸರ್ಕಾರವನ್ನು ರಚಿಸಲು ಅನುವು ಮಾಡಿ ಕೊಟ್ಟು ಪ್ರಧಾನಿ ನರೇಂದ್ರ ಮೋದಿರವರ ಸಶಕ್ತ ಭಾರತ ದೇಶ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು   ಕರೆಕೊಟ್ಟರು. 


ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡುತ್ತಾ ಸೋಮಶೇಖರ್ ಅವರ ದಕ್ಷ ನಿಷ್ಠ ಆಡಳಿತ ಇಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದ್ದು, ಕ್ಷೇತ್ರದ ಜನ ತಮ್ಮ ಸಚಿವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿರುವುದಕ್ಕೆ ಈ ಸಭೆಯಲ್ಲಿ ನೆರೆದಿರುವ ಜನ ಸಮೂಹವೆ  ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ ಜಿಲ್ಲಾಧಿಕಾರಿಗಳಾದ ದಯಾನಂದ್ ರವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಷೇತ್ರದ ಮೂಲೆ ಮೂಲೆಗಳಿಂದಲೂ ಆಗಮಿಸಿದ್ದ ಸಾರ್ವಜನಿಕರಿಗೆ  ಸಾರಿಗೆ ಇಲಾಖೆ ವತಿಯಿಂದ ಸಾರಿಗೆ  ಸೌಕರ್ಯ  ಕಲ್ಪಿಸುವುದರೊಂದಿಗೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆಲ್ಲ   ಊಟೋಪಚಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.

Post a Comment

0 Comments

Ad Code

Responsive Advertisement