ಪ್ರೀತಿಯ ಓದುಗರೇ ನಿಮಗೆಲ್ಲ ತಿಳಿದಿರುವ ಹಾಗೆ ನಾನು B.Safe ನ ಬ್ರಾಂಡ್ ಅಂಬಾಸಿಡರ್ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದೇನೆ. ಈ ಟ್ರೈನಿಂಗ್ ಮಲ್ಲೇಶ್ವರ ದ ಶ್ರೀ ಕೃಷ್ಣ ಯೋಗ & ವೆಲ್ನೆಸ್ ಸೆಂಟರ್ ನಲ್ಲಿ ನಡೆಯುತ್ತಿದೆ.ನಾನು ೧೮ ನೇ ದಿನಾಂಕ ಅಲ್ಲಿಗೆ ಟ್ರೈನಿಂಗ್ ಗಾಗಿ ಹೋದಾಗ ಅಲ್ಲಿ ಆ ಕಟ್ಟಡದ ಮಾಲಕಿಯವರಾದ ವೇದವಲ್ಲಿ ಮೇಡಂರವರನ್ನು ನೋಡಿದೆ.೮೮ ರ ಆ ಮಹಿಳೆ ವೀಲ್ಚೇರ್ ನಲ್ಲಿ ಕಟ್ಟಡ ದಲ್ಲಿರುವ ಗುಡಿಗೆ ಬಂದಿದ್ದರು.ಜೊತೆಯಲ್ಲಿ ಶುಶ್ರೂಷಕಿ ಇದ್ದರು.
ನಾವೆಲ್ಲ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದೆವು. ಆಕೆಯೊಂದಿಗೆ ಗ್ರೂಪ್ ಫೋಟೋ ತೆಗೆದುಕೊಂಡೆವು.ಅಮ್ಮ ನಮಗೆ ಏನಾದರು ಸಂದೇಶ ನೀಡಿ ಎಂದಾಗ, ಆ ಹಿರಿಯ ಮಹಿಳೆ ಉದ್ಯೋಗಸ್ಥರಾಗಿರಿ.ಹಣದ ವಿಷಯದಲ್ಲಿ ಯಾರನ್ನು ನಂಬ ಬೇಡಿ ಎಂದರು.ಮಹಿಳಾ ದಿನಾಚರಣೆಯ ತಿಂಗಳಲ್ಲಿ ಇದು ಅತ್ಯುತ್ತಮ ಸಲಹೆ ( ಮಹಿಳೆಯರಿಗೆ )ಹಾಗೂ ಆಕೆ ಒಬ್ಬ ಸಾಧಕಿ ಮಹಿಳೆ.ಅವರ ಮಗಳು ಮಿಮಿ ಪಾರ್ಥಸಾರಥಿ ಮುಂದೆ ನಮಗೆ ಹಣಕಾಸು ವಿಷಯದ ಬಗ್ಗೆ ಸೆಷನ್ ತೆಗೆದುಕೊಂಡರು.ವೇದವಲ್ಲಿ ಅವರ ಸಾಧನೆ Mimi ಮೇಡಂ ರವರಲ್ಲಿ ಕಾಣಬಹುದು.ಇಂತಹ ಸಾಧಕ ಮಹಿಳೆಯರು ನಮ್ಮ ಮಲ್ಲೇಶ್ವರಂಗೆ ಅತ್ಯಮೂಲ್ಯ ಆಸ್ತಿ.
ರಾಧಿಕಾ ಜಿ. ಎನ್.
7019990492
0 Comments