Ticker

6/recent/ticker-posts

Ad Code

Responsive Advertisement

Lಕರ್ನಾಟಕದ ಯುವಕರು ಒಲಿಂಪಿಕ್ ನಲ್ಲಿ ಪದಕ ಜಯಿಸಬೇಕು: ಬೊಮ್ಮಾಯಿ‌

ಹಾವೇರಿ: ಕರ್ನಾಟಕದ ಯುವಕರು ಒಲಿಂಪಿಕ್ ನಲ್ಲಿ ಪದಕ ಗಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.





ಇಂದು ಹಾವೇರಿ ಜಿಲ್ಲೆಯ ಸವಣೂರಿ‌ಲ್ಲಿ ನಡೆದ ರಾಷ್ಟ್ರಮಟ್ಟದ ಕಬ್ಬಡ್ಡಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಕಬ್ಬಡ್ಡಿ ಆಟದಲ್ಲಿ ವಿವಿಧ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಇದ್ದಾರೆ. ಮಹಿಳೆಯರ 18 ಟೀಂ, 30 ಪುರುಷ ಟೀಂಗಳಿವೆ. ಇಂತಹ ಕಬ್ಬಡಿ ಪಂದ್ಯ ಆಯೋಜಿಸಿದ್ದು ಇದು ದಾಖಲೆ. ಕಬ್ಬಡಿ ನಮ್ಮ ದೇಶಿ ಆಟವಾಗಿದೆ. ಕ್ರಿಕೆಟ್, ಹಾಕಿ ಆಡುವುದಕ್ಕೆ  ದುಡ್ಡು ಬೇಕು. ಕಬ್ಬಡಿಗೆ ಒಂದು ಗೆರೆ ಸಾಕು ಎಂದರು.

ನಾನು ಸಿಎಂ ಆದಮೇಲೆ ಗ್ರಾ.ಪಂ, ತಾ.ಪಂ, ಜಿ.ಪಂ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿದ್ದೇನೆ. ಈ ವರ್ಷ ಖೇಲೋ ಇಂಡಿಯಾ, ಯುವ ಜನತ್ಸೋವ ಕರ್ನಾಟಕದಲ್ಲಿ ಆಯೋಜನೆ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ರಾಷ್ಟ ಮಟ್ಟದ ಕುಸ್ತಿ ಹಾಗೂ ಕಬ್ಬಡಿ ಆಟ ಆಯೋಜನೆ ಮಾಡಿದ್ದೇವೆ. ಮುಂದೆ ಬಂಕಾಪುರದಲ್ಲಿ ವಾಲಿಬಾಲ್ ಆಯೋಜನೆ ಮಾಡಲಿದ್ದೇನೆ ಎಂದು ತಿಳಿಸಿದರು.

ಬಳಿಕ ಖೇಲೋ ಇಂಡಿಯಾ, ನಂತರ ಜೀತೋ ಇಂಡಿಯಾ ಎಂದು ಮೋದಿಯವರು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅತೀ ಹೆಚ್ಚು ಒಲಿಂಪಿಕ್ ಪದಕ ಬಂದಿದೆ. ಕ್ರೀಡೆಯಿಂದ ಉತ್ತಮ ಯುವಕ- ಯುವತಿಯರನ್ನು ಕ್ರೀಡಾ ಕ್ಷೇತ್ರದಲ್ಲಿ ತಯಾರು ಮಾಡಬಹುದು. 75  ಕ್ರೀಡಾಪಟುಗಳನ್ನು ನಾವು ದತ್ತು ಪಡೆದು ಪ್ರತಿ ಒಬ್ಬರಿಗೆ ಎಂಟು ಲಕ್ಷ ವೆಚ್ಚ ಒಲಂಪಿಕ್ ಗೆ ತರಬೇತಿ ನೀಡುತ್ತಿದ್ದೇವೆ ಎಂದರು.

Post a Comment

0 Comments

Ad Code

Responsive Advertisement