Ticker

6/recent/ticker-posts

Ad Code

Responsive Advertisement

#ಚಿಗುರು

ನಾನು ಚಿಗುರುವ ಎಲೆ

ನೀನೇಕೆ ನನ್ನ ನೋಡಿ ನಗುವೆ

ನನಗೂ ನಿನ್ನoತೆ ದೊರಕಬೇಕಿದೆ ಸೆಲೆ

ಅಷ್ಟರೊಳಗೆ ಮಾಡಬೇಡಿ ನನ್ನ ಕೊಲೆ


ನಿನ್ನಂತೆ ನಾನು ಬೆಳೆದು 

ತೋರಬೇಕಿದೆ  ಸೊಗಸು

ಕಾಂಡ ಕೊನರಿ ಆಗಬೇಕಿದೆ ಹಿರಿದು


ಅಣಕಿಸಬೇಡ  ಹುಂಕರಿಸಬೇಡ

ನನ್ನನ್ನು ಹೀಯಾಳಿಸಿ ಜರಿದು

ನಿನ್ನ ನಂತರ ನನ್ನದೇ ಸೊಗಡು


ಹಿರಿಸಿರಿಯಾಗಿ ಬೆಳೆದಿರುವೆ ಹಬ್ಬಿರುವೆ 

ಎಂದು ಕೊಬ್ಬಿ ಕೂಗಾಡದಿರು

 ಇನ್ನು ಸ್ವಲ್ಪ ಸಮಯದಲ್ಲೇ ಹಣ್ಣಾಗಿ

ಉದುರುವೆ ನೋಡುತ್ತ್ತಿರು



ವಸುಧಾ ಮಂಜುನಾಥ್

ಬೆಂಗಳೂರು

Post a Comment

0 Comments

Ad Code

Responsive Advertisement