"ಬ್ರಹ್ಮೋತ್ಸವಂ ವೈರಮುಡಿ ಬ್ರಹ್ಮೋತ್ಸವಂ" ದಿನಾಂಕ 01-04-2023 ರಂದು ಮೇಲುಕೋಟೆ ಯಲ್ಲಿ ವಿಶ್ವ ವಿಖ್ಯಾತ ವೈರಮುಡಿ ಬ್ರಹ್ಮೋತ್ಸವ .. ಭೂಲೋಕದ ಮೊಟ್ಟ ಮೊದಲ ವಿಷ್ಣುವಿನ ದೇವಸ್ಥಾನವಾದ ಮೇಲುಕೋಟೆಯ ಶ್ರೀ ಚೆಲುವನಾರಯಣ ಸ್ವಾಮಿಯ ದೇವಾಲಯ.. ಶ್ರೀರಾಮ, ಶ್ರೀ ಕೃಷ್ಣನ ಮನೆ ದೇವರಾದ ಹಾಗೂ ಬ್ರಹ್ಮನಿಂದ ಪ್ರತಿಷ್ಟಾಪನೆ ಗೊಂಡು ಪೂಜಿಸಲ್ಪಟ್ಟ ಚೆಲುವನಾರಯಣ ಸ್ವಾಮಿಯು ಸುಮಾರು 35 ಲಕ್ಷ ವರ್ಷಗಳಿಂದ ಜ್ನಾನಮಂಟಪ ಎಂದು ಕರೆಯಲ್ಪಡುವ ಮೇಲುಕೋಟೆಯಲ್ಲಿ ನೆಲೆಸಿದ್ದಾನೆ..
ರಾಮಾನುಜಚಾರ್ಯರ ಆರಾಧದೈವನಾದ ಚೆಲುವನಿಗೆ ಈಗ ವೈರಮುಡಿಬ್ರಹ್ಮೋತ್ಸವ ಜರುಗಲಿದೆ... ನಾಗ ಮಾಣಿಕ್ಯ, ವಜ್ರ, ಮಾಣಿಕ್ಯ, ನಾಗಮಣಿ ಗಳಿಂದ ಕೂಡಿರುವ ವೈರಮುಡಿ ಕೀರೀಟವು ವರ್ಷಕ್ಕೊಮ್ಮೆ ರಾತ್ರಿವೇಳೆ ಮಾತ್ರ ಚೆಲುವನಾರಯಣನಿಗೆ ಧರಿಸಲಾಗುತ್ತದೆ..
ಆ ಕೀರೀಟದ ಬಿಸಿಯನ್ನು ತಾಳಲಾಗದೆ ಶ್ರೀ ಚೆಲುವನಾರಯಣಸ್ವಾಮಿಯೇ ಬೆವರುತ್ತಾರೆ.. ಮುಕ್ಕೋಟಿ ದೇವರು ಗಳೇ ಶ್ರೀಮನ್ ಮಹಾ ವಿಷ್ಣುವಿನ ದರ್ಶನ ಪಡೆದು ಲೋಕ ಕಲ್ಯಾಣಕ್ಕಾಗಿ ನೆಡೆಸುವ ಉತ್ಸವವೇ ಈ ವೈರಮುಡಿ ಬ್ರಹ್ಮೋತ್ಸವ.. ಭೂಲೋಕದ ವೈಕುಂಠ , ವೈಕುಂಠ ವರ್ಧನ ಶ್ರೀ ಕ್ಷೇತ್ರ, ದಕ್ಷಿಣ ಬದ್ರಿಕಾಶ್ರಮ ಯಧುಶೈಲ, ಯಾದವಗಿರಿ, ಯಾದವಾದ್ರಿ, ಶ್ರೀ ತಿರುನಾರಾಯಣ ಪುರಂ, ಜ್ಞಾನ ಮಂಟಪಂ, ಮೇಲುಕೋಟೆ ಯಲ್ಲಿ 01-04-2023ರ ರಾತ್ರಿ8.30ರ ಪುಷ್ಯ ನಕ್ಷತ್ರ ದ ಶುಭ ಲಗ್ನ ದಲ್ಲಿ ಶ್ರೀ ರಾಮನ ಮನೆದೇವರಾದ, ಬ್ರಹ್ಮ ಮತ್ತು ಸನತ್ಕುಮಾರನಿಂದ ಪ್ರತಿಷ್ಟಾಪಿಸಲ್ಪಟ್ಟ , ಶ್ರೀ ಕೃಷ್ಣಬಲರಾಮ ರಿಂದ ಪೂಜಿಸಲ್ಪಟ್ಟ, ರಾಮಾನುಜ ಚಾರ್ಯರಿಂದ ಆರಾಧಿಸಲ್ಪಟ್ಟ ಶ್ರೀ ಚೆಲುವನಾರಯಣ ಸ್ವಾಮಿ ಗೆ ಗರುಡದೇವ ನಿಂದ ಶ್ರೀ ವೈರಮುಡಿ ಕೀರೀಟ ಧಾರಣ ಮಹೋತ್ಸವ.. ರಾತ್ರಿ8.30..
0 Comments