Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ: ಸಚಿವ ಅಶ್ವತ್ ನಾರಾಯಣ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಪ್ರತಿಭಟನೆ

ಸಚಿವ ಅಶ್ವತ್ ನಾರಾಯಣ್ ರವರ ವಿವಾದಾತ್ಮಕ  ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳಿಂದ  ಕೊಳ್ಳೇಗಾಲದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು,

ಬಿಜೆಪಿಯ ಜನ ಸಂಪರ್ಕ ಯಾತ್ರೆ ಕಾರ್ಯಕ್ರಮ ಒಂದರಲ್ಲಿ ಸಚಿವ ಅಶ್ವತ್ ನಾರಾಯಣ್ ರವರು ಮಾತನಾಡುತ್ತ ಟಿಪ್ಪು ಸುಲ್ತಾನ್ ನನ್ನು ಕೊಂದು ಹಾಕಿದ ಹಾಗೆ ಸಿದ್ದರಾಮಯ್ಯನನ್ನ ಕೊಂದು ಹಾಕಬೇಕು ಎಂದು ಮಾತನಾಡಿರುವ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಆಕ್ರೋಶವನ್ನು ಉಂಟು ಮಾಡಿದ್ದು, ಕೊಳ್ಳೇಗಾಲ  ಮಾಜಿ ಶಾಸಕ ಎ. ಆರ್. ಕೃಷ್ಣಮೂರ್ತಿಯವರು ಹಾಗೂ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅತಿಥಿ ಗೃಹದಿಂದ ಹೊರಟ ಪ್ರತಿಭಟನಕಾರರು ಇಂದಿರಾ ಕ್ಯಾಂಟೀನ್ ಸರ್ಕಲ್ ಬಳಿ ಕೆಲಕಾಲ ರಸ್ತೆ ತಡೆ ನಡೆಸಿ ಸಚಿವ ಅಶ್ವತ್ ನಾರಾಯಣ್ ರ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು  ಅವರ ಹೇಳಿಕೆಗೆ ದಿಕ್ಕಾರ ಕೂಗಿ ಭಾವಚಿತ್ರಕ್ಕೆ ಬೆಂಕಿ ಅಚ್ಚಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ನಂತರ ಮಾಜಿ ಶಾಸಕ ಎ. ಆರ್. ಕೃಷ್ಣ ಮೂರ್ತಿಯವರು ಮಾತನಾಡಿ ಅಶ್ವತ್ ನಾರಾಯಣ್ ರವರು ಒಬ್ಬ ಜವಾಬ್ದಾರಿಯುತ ಸಚಿವನಾಗಿದ್ದು  ಜನರ ವಿಶ್ವಾಸ ಗಳಿಸುವ ಬರದಲ್ಲಿ ಮಾಜಿ ಮುಖ್ಯಮಂತ್ರಿಗಳ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ವಿರುದ್ಧವಾಗಿ ವಿವಾದಾತ್ಮಕವಾಗಿ ಮಾತನಾಡಿರುವುದು ತಪ್ಪು ರಾಜ್ಯ ಸರ್ಕಾರ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಅಶ್ವತ್ ನಾರಾಯಣ್ ರನ್ನು ಸಚಿವ ಸ್ಥಾನಸಿಂದ ಇಳಿಸಿ ಅವರ ಸದಸ್ಯತ್ವವನ್ನು ರದ್ದೂಗೊಳಿಸಿ ಶಿಕ್ಷೆಗೆ ಗುರಿ ಪಡಿಸಬೇಕು,

ಒಬ್ಬ ಸಾಮಾನ್ಯ ವ್ಯಕ್ತಿ ಏನಾದರು ವಿವಾದಾತ್ಮಕ ಹೇಳಿಕೆ ನೀಡಿದರೆ ಪೊಲೀಸ್ ರು ಅ ವ್ಯಕ್ತಿಯ ಬಗ್ಗೆ ಕೂಡಲೇ ದೂರು ದಾಖಲಿಸಿ ಶಿಕ್ಷೆಗೆ ಗುರಿ ಪಡಿಸುತ್ತಾರೆ, ಅದೇ ಒಬ್ಬ ಸಚಿವ ಬಹಿರಂಗವಾಗಿ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ನೋಡಿಯೂ ಕೂಡ ಕ್ರಮ ವಹಿಸದೆ ಇರುವುದು ಖಂಡನಿಯ,ಯಾರೇ ಆದರೂ ಸರಿ ಮತ್ತೊಬ್ಬ ನಾಯಕನ ಬಗ್ಗೆ ಹಗುರವಾಗಿ ಮರನಾಡುವುದು ತಪ್ಪು.

ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆದಷ್ಟು ಬೇಗ್ ಅಶ್ವತ್ ನಾರಾಯಣ್ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರುಗಳು ಜಿಲ್ಲಾದ್ಯಾಂತ  ಉಘ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು,

ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಜಯಣ್ಣ, ಬಾಲರಾಜ್, ಜಿಲ್ಲಾಧ್ಯಕ್ಷರಾದ ಮರಿಸ್ವಾಮಿ, ತಾಲ್ಲೂಕು ಬ್ಲಾಕ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲ ಶಾಂತರಾಜು,  ಮುಖಂಡರಾದ ರಮೇಶ್, ಶಾಂತರಾಜು, ಬಸವರಾಜು ಹಾಗೂ ಇನ್ನಿತರರು ಇದ್ದರು.

Post a Comment

0 Comments

Ad Code

Responsive Advertisement