ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ “ಮತದಾನ ಮುಕ್ತವಾಗಿ ನಡೆದು, ಸಮರ್ಥ ಸರ್ಕಾರ ಅಧಿಕಾರಕ್ಕೆ ಬರಲಿ” ಎನ್ನುವ ಸದಾಶಯದ ಹಿನ್ನೆಲೆಯಲ್ಲಿ ಸ್ವತಂತ್ರ ಅಧ್ಯಯನ ತಂಡ ರಾಜ್ಯದಾದ್ಯಂತ ಮತದಾರರ ಸಮೀಕ್ಷೆ ನೆಡೆಸಿ ವರದಿ ಒಂದನ್ನು ತಯಾರಿಸಿರುತ್ತದೆ.
ಈ ವರದಿಯನ್ನು ಫೆಬ್ರುವರಿ 14ರಂದು ಮೈಸೂರಿನಲ್ಲಿ ಸಮಾಜವಾದಿ ನೇತಾರ ಪ್ರೊ. ಮಧು ದಂಡವತೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಬಿಡುಗಡೆ ಮಾಡಿರುತ್ತಾರೆ. ವಿವಿಧ ಜನಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಸಮಾಜವಾದಿ ಧುರೀಣರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಪ್ರಸಿದ್ಧ ರಾಜಕೀಯ ವಿಮರ್ಶಕರಾದ ಸುಧೀಂದ್ರ ಕುಲಕರಣಿಯವರು ದಿಕ್ಸೂಚಿ ಭಾಷಣ ಮಾಡಿರುತ್ತಾರೆ.
ಜನತಂತ್ರದ ‘ನೈಜ ಹಕ್ಕುದಾರರ’ ಧ್ವನಿ ಆಲಿಸಿರುವ ಈ ವರದಿಯ saft ಪ್ರತಿಯನ್ನು ತಮ್ಮ ಮುಂದಿಡಲಾಗುತ್ತಿದೆ.




0 Comments