Ticker

6/recent/ticker-posts

Ad Code

Responsive Advertisement

ಗಂಧದಗುಡಿ ಉದ್ಯಾನವನ ಲೋಕಾರ್ಪಣೆ; ಜಯನಗರದಲ್ಲಿ ಪರಿಸರ ಜಾಗೃತಿ ಅಭಿಯಾನ ಅಂಗವಾಗಿ ಗಂಧದಗುಡಿ ಹಬ್ಬ ಆಯೋಜನೆ

ಬೆಂಗಳೂರು; 5 ಫೆ. ಜಯನಗರ 4t Blockನಲ್ಲಿ ಗಂಧದಗುಡಿ ಹಬ್ಬದ ಅಚರಣೆ ಪ್ರಯುಕ್ತ ಗಂಧಗುಡಿ ಉದ್ಯಾನವನ ಮತ್ತು ಪಾರ್ಕ್ ನಲ್ಲಿ 101ಸಸಿ ನೆಡುವ ಕಾರ್ಯಕ್ರಮ, ಹಸಿ ಕಸದ ಗೊಬ್ಬರ ತಯಾರಿಕೆ ಕೇಂದ್ರ, ಕಟ್ಲರಿ ಬ್ಯಾಂಕ್ ಉದ್ಘಾಟನೆ ಮತ್ತು ಪರಿಸರ ಕುರಿತು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕರಾದ ಸೌಮ್ಯ ರೆಡ್ಡಿ, ನಿರ್ಮಾಪಕರಾದ ಆಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ನಾಗರಾಜು ಲೋಕಾರ್ಪಣೆ ಮಾಡಿದರು.ಗಂಧದಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಹಾಗೂ ಗಂಧದಗುಡಿ ಚಲನಚಿತ್ರ ತಂಡದವರು ಸಹ ದೀಪಾ ಬೆಳಗಿಸಿ, ಗಂಧದಗುಡಿ ಹಬ್ಬಕ್ಕೆ ಚಾಲನೆ ನೀಡಿದರು.





ಸೌಮ್ಯ ರೆಡ್ಡಿ ಮಾತನಾಡಿ, ಪರಿಸರ ಉಳಿದರೆ ಮನುಷ್ಯ ಜೀವಿಸಲು ಸಾಧ್ಯ. ಅಭಿವೃದ್ದಿ ಹೆಸರಿನಲ್ಲಿ ಗಿಡ,ಮರಗಳನ್ನು ಕಡಿದು ಕಾಂಕ್ರೀಟ್ ನಾಡುಗಳಾಗಿ ನಿರ್ಮಾಣಮಾಡಲಾಗುತ್ತಿದೆ. ಮುಂದಿನ ಜನಾಂಗ ಅಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮನೆಯಿಂದಲೇ ಪರಿಸರ ಅಭಿಯಾನ ಆರಂಭವಾಗಬೇಕು .ಪ್ಲಾಸ್ಟಿಕ್ ಮುಕ್ತ, ಪರಿಸರಯುತ ವಾತವರಣ ನಿರ್ಮಿಸಲು ನಿತ್ಯ ಅಂದೋಲವಾಗಬೇಕು ಎಂದು ಹೇಳಿದರು.
ನಿರ್ಮಾಪಕರಾದ ಶ್ ಆಶ್ವಿನಿ ಪುನೀತ್ ರಾಜ್ ಕುಮರ್ ಮಾತನಾಡಿ ಕನ್ನಡಿಗರ ಮನಗೆದ್ದ ಮೇರುನಟ ಡಾ.ರಾಜ್ ಕುಮಾರ್ ರವರು ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಬಹುತೇಕ ಚಲನಚಿತ್ರಗಳಲ್ಲಿ ಪರಿಸರ ಕುರಿತು ಹೆಚ್ಚಿನ ವಿಷಯಗಳು ಅವರ ಚಲನಚಿತ್ರಗಳಲ್ಲಿ ಇರುತ್ತಿತು.ನಮ್ಮ ಮನೆ, ನನ್ನ ಕುಟುಂಬ ಎಂಬ ಅಭಿಮಾನದಂತೆ ನಮ್ಮ ತಾಯಿ ನಾಡು, ನಮ್ಮ ಮರ,ಗಿಡ ಪರಿಸರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು ಎಂದರು.ಪರಿಸರ ನಾಶವಾದರೆ ಹಣ ಕೊಟ್ಟರು ಬರುವುದಿಲ್ಲ ಅದರಿಂದ ಎಲ್ಲರು ಸಸಿ ನೆಟ್ಟು ಪರಿಸರ ಉಳಿಸಬೇಕು ಎಂದು ಮನವಿ ಮಾಡಿದರು.

Post a Comment

0 Comments

Ad Code

Responsive Advertisement