ಬೆಂಗಳೂರು, 5 ಫೆ. : ಎಂ.ಎಲ್.ಆರ್.ಕನ್ವೆವಷನ್ ಹಾಲ್ ನಲ್ಲಿ ನಾಟ್ಯಭೈರವಿ ನೃತ್ಯಶಾಲೆಯ ಭರತನಾಟ್ಯ ವಿದ್ಯಾರ್ಥಿನಿ 10ವರ್ಷದ ಬಾಲಕಿ ಕುಮಾರಿ ತನಿಷ್ಕರವರ ಗೆಜ್ಜೆಪೂಜೆ ಕಾರ್ಯಕ್ರಮ. ನಾಟ್ಯಭೈರವಿ ಶಾಲೆಯ ನಿರ್ದೇಶಕಿ ವಿದುಷಿ ಡಾ||ಶೃತಿ ಎನ್ ಮೂರ್ತಿ, ಶ್ರೀಮತಿ ನೀತಾ ಅಲೋಕ್ ಕುಮಾರ್, ನಟಿಯರಾದ ಹೇಮಾಪ್ರಸಾದ್, ಶ್ರೀಮತಿ ಅಪರ್ಣ ವಾಸ್ತರೆ, ಗಾಯಕ ವಸುಕಿ ವೈಭವ್, ನಟ ಪವನ್ ಕುಮಾರ್ ಹಾಗೂ ಯುವ ಭರತನಾಟ್ಯ ಕಲಾವಿದೆ ತನಿಷ್ಕರವರು ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕುಮಾರಿ ತನಿಷ್ಕರವರು ಶಿವಪಾರ್ವತಿಯ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದು ಗೆಜ್ಜೆಪೂಜೆ ಕಾರ್ಯಕ್ರಮದಲ್ಲಿ 2-30ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ, ನೀಡಿದ ನೃತ್ಯವು ಆಗಮಿಸಿದವರ ಮನಸೂರೆಗೊಂಡಿತು. ಭರತನಾಟ್ಯ ಕಲಾವಿದೆ ಕುಮಾರಿ ತನಿಷ್ಕರವರು ಮಾತನಾಡಿ ನಮ್ಮ ತಾಯಿ ಶ್ರೀಮತಿ ಕಾವ್ಯ ಮತ್ತು ತಂದೆಯವರಾದ ಟಿ.ಟಿ. ವೆಂಕಟೇಶ್ ರವರ ಸಹಕಾರ ಮತ್ತು ವಿದುಷಿ ಡಾ||ಶೃತಿ ಎನ್.ಮೂರ್ತಿರವರ ಮಾರ್ಗದರ್ಶನದಲ್ಲಿ 6ವರ್ಷದ ಬಾಲಕಿಯಾದಗಿ ನಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದೇನೆ. ಭಾರತೀಯ ಇತಿಹಾಸ,ಸಂಸ್ಕೃತಿ, ಸಂಪ್ರಾದಯ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಲು ಭರತನಾಟ್ಯ ಸಹಕಾರಿಯಾಗಿದೆ. ನಮ್ಮ ಭಾರತ ದೇಶದ ಭರತನಾಟ್ಯ ಉಳಿಸಿ, ಬೆಳಸಬೇಕು ಮತ್ತು ಇಡಿ ವಿಶ್ವವೆ ನೋಡವಂತ ಮಾಡಬೇಕು ಎಂದು ನನ್ನ ಆಸೆ ಎಂದು ಹೇಳಿದರು.
ವಿದುಷಿ ಡಾ||ಶೃತಿ ಎನ್.ಮೂರ್ತಿರವರು ಮಾತನಾಡಿ ವಿದೇಶಿ ಸಂಸ್ಕೃತಿ ವ್ಯಾಮೋಹಕ್ಕೆ ಇಂದಿನ ಯುವ ಸಮೂಹ ಮಾರು ಹೋಗುತ್ತಿದ್ದಾರೆ. ಭಾರತೀಯರ ಪ್ರತಿ ಸಂಸ್ಕೃತಿ ಸಂಪ್ರಾದಯ ಮನುಷ್ಯನಿಗೆ ಬೇಕಾದ ಶಾಂತಿ, ನೆಮ್ಮದ್ದಿ ,ಆರೋಗ್ಯ ತಂದುಕೊಡುತ್ತದೆ. ಭರತನಾಟ್ಯ,ಕೂಚುಪುಡಿ, ಯೋಗ ವಿಶ್ವಕ್ಕೆ ಭಾರತ ನೀಡಿದ ಮಹಾನ್ ಕೊಡುಗೆ. ಭರತನಾಟ್ಯ ಕಲೆ ಉಳಿಯಬೇಕಾದರೆ ಸರ್ಕಾರ ಮತ್ತು ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು. ಸಂಗೀತ ಕಲಾವಿದರುಗಳು ಡಾ||ಶೃತಿ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ,ಮೃದಂಗ ವಿದ್ವಾನ್ ಭವಾನಿ ಶಂಕರ್, ಕೊಳಲು ವಿದ್ವಾನ್ ಜಯರಾಂರವರು ಪಾಲ್ಗೊಂಡಿದ್ದರು.






0 Comments