ಬೆಂಗಳೂರು: ಮಲ್ಲೇಶ್ವರ ಈಜುಕೊಳದ ಬಡಾವಣೆಯ (ಸುಧೀಂದ್ರನಗರ) ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ 428ನೇ ಜನ್ಮದಿನೋತ್ಸವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ಈ ಪ್ರಯುಕ್ತ ಫೆಬ್ರವರಿ 26, ಭಾನುವಾರ ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನಕ್ಕೆ ಫಲ-ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಲಕ್ಷಪುಷ್ಪಾರ್ಚನೆ, ವಿಶೇಷ ಅಲಂಕಾರ, ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಮಹಾಮಂಗಳಾರತಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ಆಚಾರ್ ಅವರು ತಿಳಿಸಿದರು.,

0 Comments