Ticker

6/recent/ticker-posts

Ad Code

Responsive Advertisement

ಶ್ರೀ ರಾಘವೇಂದ್ರ ಸ್ವಾಮಿಗಳ 428ನೇ ಜನ್ಮದಿನೋತ್ಸವ - ಲೋಕ-ಕಲ್ಯಾಣಕ್ಕಾಗಿ ಶ್ರೀವಿಶ್ವಪ್ರಸನ್ನ ತೀರ್ಥರಿಂದ "ಲಕ್ಷ ಪುಷ್ಪಾರ್ಚನೆ" ರಾಯರ ಸನ್ನಿಧಿಗೆ ಭಕ್ತ ಜನಸಾಗರ

ಜಯನಗರ 5ನೇ ಬಡಾವಣೆಯಲ್ಲಿರುವ  ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ  ಆರ್. ಕೆ.   ವಾದೀಂದ್ರ   ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ಜನ್ಮದಿನೋತ್ಸವಕ್ಕಾಗಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪರಮಪೂಜ್ಯ  ಉಡುಪಿಯ ಪೇಜಾವರ ಮಠದ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ "ಲಕ್ಷ-  ಪುಷ್ಪಾರ್ಚನೆ" ಲೋಕ ಕಲ್ಯಾಣಕ್ಕಾಗಿ ತಮ್ಮ ಅಮೃತಹಸ್ತದಿಂದ ನೆರವೇರಿಸಿದರು. ತದನಂತರ ಭಕ್ತರಿಗೆ ಅನುಗ್ರಹ ಸಂದೇಶ  ನೀಡಿದರು.



 ಶ್ರೀ ಗುರುರಾಯರ  ಜನ್ಮದಿನದ ಅಂಗವಾಗಿ ರಾಯರ  ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ , ಪ್ರವಚನ, ಉತ್ಸವ,  ಸುಮಾರು 108  ಋತ್ವಿಜರಿಂದ  ಅಷ್ಟೋತ್ತರ ಪಾರಾಯಣ ವಿಶೇಷವಾಗಿ ನೆರವೇರಿತು. ಈ ಸಂದರ್ಭದಲ್ಲಿ  ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯು ನೆರವೇರಿತು.

 ಭಕ್ತರು ರಾಯರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ, ಶ್ರೀಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ      ಪಾತ್ರರಾಗಿ  ಶ್ರೀ ಮಠದ  ಅಚ್ಚುಕಟ್ಟಾದ  ವ್ಯವಸ್ಥೆಯನ್ನು ಕಂಡು ತುಂಬಾ ಸಂತೋಷ ವ್ಯಕ್ತಪಡಿಸಿದರು ಎಂದು ಶ್ರೀ ಮಠದ ಪ್ರಧಾನ ಅರ್ಚಕರಾದ ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದರು.

Post a Comment

0 Comments

Ad Code

Responsive Advertisement