Ticker

6/recent/ticker-posts

Ad Code

Responsive Advertisement

ನಾಯಕರ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎನ್. ಮಹೇಶ್,

 ಕೊಳ್ಳೇಗಾಲ ಸುದ್ದಿ : ಶಾಸಕರ ವಿಶೇಷ ಅನುದಾನ 50 ಲಕ್ಷ ವೆಚ್ಚದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ನಾಯಕರ ವಾಲ್ಮೀಕಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಾಸಕ ಎನ್. ಮಹೇಶ್ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು,

ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೆ ಕ್ರೈನ್ ಮೂಲಕ ಮೂಸಂಬಿ ಹಣ್ಣಿನ ಬೃಹತ್ ಹಾರವನ್ನು ಹಾಕಿಸಿ ಸ್ವಾಗತಿಸಲಾಯಿತು,

ನಂತರ ಸಮುದಾಯ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು,

ಗುದ್ದಲಿ ಪೂಜೆಯನ್ನು ನೆರವೇರಿಸಿ ಶಾಸಕರು ಮಾತನಾಡಿ,ಪಟ್ಟಣದ ನಾಯಕರ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಸ್ಥಗಿತಗೊಂಡಿತ್ತು, ಸಮುದಾಯ ಭವನವನ್ನು ಪೂರ್ಣಗೊಳಿಸಿ ಕೊಡಲು  ಸಮುದಾಯದ ಮುಖಂಡರಾದ ಚಿಕ್ಕಲಿಂಗ ನಾಯಕರು ನನಗೆ ಬೇಡಿಕೆ ಇಟ್ಟಿದ್ದರು, ನಾನು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಅಧಿಕಾರಗಳ ಜೊತೆ ಚರ್ಚಿಸಿದಾಗ ಭವನ ನಿರ್ಮಾಣಕ್ಕೆ ಸುಮಾರು 50 ಲಕ್ಷ ಬೇಕಾಗುತ್ತದೆ ಎಂದು ತಿಳಿಸಿದರು ಅದರಂತೆ ಸರ್ಕಾರದ ಶಾಸಕರ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ ಜೊತೆಗೆ ನನ್ನ ನೀಡಿಯಿಂದ 10 ಲಕ್ಷ ಕೊಟ್ಟಿದ್ದೇನೆ ಸುಮಾರು 65 - 70 ಲಕ್ಷ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುತ್ತದೆ,

ಜೊತೆಗೆ ಯಳಂದೂರು ಪಟ್ಟಣದಲ್ಲಿರುವ ಸಮುದಾಯ ಭವನವನ್ನು ಪೂರ್ಣಗೊಳಿಸಲಾಗುತ್ತದೆ,

ಹಾಗೂ ಪಟ್ಟಣದ ದೊಡ್ಡ ನಾಯಕರ ಬೀದಿಯಲ್ಲಿ ಹಾಗೂ ಚಿಕ್ಕನಾಯಕರ ಬೀದಿಯಲ್ಲಿ ಉಳಿಕೆ ಇರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಈ ಎಲ್ಲಾ ಕೆಲಸವನ್ನು ನೀತಿ ಸಮಿತಿ ಜಾರಿಯಾಗುವ ಮುಂಚೆಯೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿಸಲಾಗುವುದು ಎಂದರು,

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೊಪ್ಪಳಿ ಮಹಾದೇವ ನಾಯಕ, ಯಜಮಾನರಾದ,  ಮಹಾದೇವನಾಯಕ,

ಪಾಳ್ಯ ಕೃಷ್ಣ, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್, ಬಾಲರಾಜು,  ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement