*ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಪ್ರಕಾಶನಗರ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಕಾಂಕ್ಷಿ ರಘುವೀರ್ ಗೌಡರವರು ಆಟೋ ಚಾಲಕರಿಗೆ ಉಚಿತವಾಗಿ ಟೈಯರ್ ಗಳನ್ನು ವಿತರಿಸಿದರು*.
*ರಘುವೀರ್ ಗೌಡರವರು* ಮಾತನಾಡಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪಕ್ಷ.
ಬಡವರ, ದೀನದಲಿತರ ಯೋಜನೆ ರೂಪಿಸಿದರು, ದೇಶದ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿ ತರಬೇಕು ಉದ್ದೇಶದಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಕೈಗಾಡಿ, ಬಿಸಿಲು, ಮಳೆ ರಕ್ಷಣೆಗೆ ಬೃಹತ್ ಛತ್ರಿಗಳನ್ನು ವಿತರಿಸಲಾಗಿದೆ.
ಆಟೋ ಚಾಲಕರು ಜನರ ಜೀವನಾಡಿಯಾಗಿ ಕೆಲಸ ಮಾಡುತ್ತಾರೆ, ಪ್ರತಿನಿತ್ಯ ಜನ ಸೇವೆಯ ಮೂಲಕ ನಿತ್ಯ ಕಾಯಕ ಮಾಡುವ ಆಟೋ ಚಾಲಕರಿಗೆ ಟೈಯರ್ ನೀಡಲಾಗಿದೆ.
ಆಟೋ ಚಾಲಕರಿಗೆ 15ತಾರೀಖು ಸಮವಸ್ತ್ರ ವಿತರಿಸಲಾಗುವುದು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಕಾಂಕ್ಷಿಯಾಗಿದ್ದೇನೆ.
ಜನ ಸೇವೆಯೆ ಮಾಡುತ್ತಾ, ಜನರ ಸಮಸ್ಯೆ ಅಲಿಸುತ್ತಾ ಬಂದಿರುವ ನನಗೆ ಕ್ಷೇತ್ರದ ಜನರ ಸಹಕಾರ,ಬೆಂಬಲ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
*ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು*




0 Comments