ಕೊಳ್ಳೇಗಾಲ ಸುದ್ದಿ: ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಅರ್. ಮಂಜುನಾಥ್ ರವರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ನಡೆಸಿದರು,
ಈ ಹಲವಾರು ಮುಖಂಡರು ಯುವಕರು ಆರ್. ಮಂಜುನಾಥ್ ರವರ ನೇತೃತ್ವದಲ್ಲಿ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರಿಗೆ ಮಂಜುನಾಥ್ ರವರು ಅಭಿನಂದನೆಗಳನ್ನು ತಿಳಿಸಿದರು,
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ರವರನ್ನು ಗೆಲ್ಲಿಸಲು ಅವಿರತ ಪ್ರಯತ್ನ ಮಾಡುತ್ತೇವೆ ಎಂದು ಮುಖಂಡರು ಪ್ರತಿಜ್ಞೆ ಮಾಡಿದರು,
ಇದೆ ವೇಳೆ ಚಿಕ್ಕಲ್ಲೂರು ಜಾತ್ರೆ ವಿಷಯವಾಗಿ ಕೇಳಿದ ಮಾಧ್ಯಮದವರ ಪ್ರಶ್ನೆಗೆ ಮಂಜುನಾಥ್ ರವರು ಮಾತನಾಡಿ ಚಿಕ್ಕಲ್ಲೂರು ಜಾತ್ರೆ ಪುರಾತನ ಕಾಲದಿಂದ ನೆಡೆದುಕೊಂಡು ಬಂದಿರುವ ಪಾರಂಪರಿಕ ಆಚರಣೆ ಹಬ್ಬವಾಗಿದೆ, ಚಂದ್ರ ಮಂಡಲೋತ್ಸವ ಮುಖಾಂತರ ಪ್ರಾರಂಭವಾಗಿ ಹಲವು ಉತ್ಸವಗಳ ಜೊತೆ ಐದು ದಿನಗಳ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ,
ಪೀಠಾಧಿಕಾರಿಗಳ ಉಸ್ತುವಾರಿಯಲ್ಲಿ ಜಾತ್ರೆಯ ವಿಶೇಷತೆಗಳು ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ,
ಇದು ಈ ಭಾಗದ ಜನರ ಮತ್ತು ನೀಲಗಾರರ, ದೇವರ ಮೇಲಿನ ಅಪಾರ ನಂಬಿಕೆಯೇ ಪ್ರತೀಕವಾಗಿದೆ,
ಜಾತ್ರೆಯಲ್ಲಿ ಪಂಕ್ತಿ ಸೇವೆ ಬಹಳ ವಿಶೇಷವಾಗಿದೆ
ಪಂಕ್ತಿ ಸೇವೆಗೆ ಹೆಚ್ಚಿನ ಮಹತ್ವ ಇದೆ, ಪಂಕ್ತಿ ಸೇವೆ ಹಲವಾರು ಸಮುದಾಯದ ಜನರು ಒಂದೆಡೆ ಸೇರಿ ಸಹ ಪಂಕ್ತಿಯಲ್ಲಿ ಒಟ್ಟಾಗಿ ಕುಳಿತು ಭೋಜನವನ್ನು ಸವಿಯುದು ಆಗಿದೆ, ಇದರಿಂದ ಯಾರಿಗೂ ಸಹ ತೊಂದರೆಯಾಗದ ರೀತಿಯಲ್ಲಿ ನಡೆಯುತ್ತಿದೆ,
ಆದ್ದರಿಂದ ಜಾತ್ರೆಯಲ್ಲಿ ನಡೆಯುವ ಪಂಕ್ತಿ ಸೇವೆಗೆ ಯಾವುದೇ ತೊಂದರೆಗಳು ಇಲ್ಲದೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ನಡೆಯಬೇಕು,
ಕೋವಿಡ್ ಕಾರಣದಿಂದ ಎರಡು ವರ್ಷಗಳು ಜಾತ್ರೆ ನಡೆದಿರುವುದಿಲ್ಲ, ಈ ವರ್ಷ ಎಲ್ಲಾ ಸರಿಯಾಗಿ ಇರುವುದರಿಂದ ಜಾತ್ರೆ ನಡೆಯುತ್ತಿದೆ, ಆದ್ದರಿಂದ ಅಧಿಕಾರಿಗಳು ಜಾತ್ರೆಯಲ್ಲಿ ನಡೆಯುವ ಉತ್ಸವ, ಸೇವೆ ಕಾರ್ಯಕ್ರಮಗಳಿಗೆ ಯಾವುದೇ ರೀತಿ ಅಡ್ಡಿಪಡಿಸದೆ ಸಹಕಾರ ನೀಡಬೇಕು, ಜಾತ್ರೆಗೆ ಬರುವ ಎಲ್ಲರಿಗೂ ದೇವರು ಒಳ್ಳೆಯದನ್ನ ಮಾಡಲು ಎಲ್ಲರಿಗೂ ಒಳ್ಳೆಯದಲ್ಲಿ ಎಂದು ತಿಳಿಸಿದರು,
ಈ ಪಾಳ್ಯ ಗ್ರಾಮದ ದೊಡ್ಡಸೀಗನಾಯಕ, ಗೋಪಾಲ್ ನಾಯಕ, ಶಿವಕುಮಾರ್, ಸುರೇಶ್, ಗೋವಿಂದ, ಶಿವಮೂರ್ತಿ, ಪರಶಿವ, ಮಂಜೇಶ್, ಶಿವಮಲ್ಲು ಹಾಗೂ ಇನ್ನಿತರರು ಇದ್ದರು

0 Comments