ಮುಂಜಾನೆಯ ಪಕ್ಷಿಗಳ ಇಂಚರ ....
ನೋಡಿದರೆ ಮನಸ್ಸಿನಲ್ಲಿ ಮೂಡುವುದು ಸಡಗರ.
ಸೂರ್ಯನು ಉದಯಿಸುತ್ತಿರುವಾಗ,
ನೇಗಿಲ ಹಿಡಿದು ನಡೆದ ರೈತನಾಗ.
ಚಳಿ, ಮಳೆ, ಗಾಳಿ ಲೆಕ್ಕಿಸದೆ ಸವೆಯುವ....
ಶ್ರಮಿಸಿ, ನಮ್ಮೆಲ್ಲರ ಹಸಿವು ನೀಗಿಸುವ.
ಮುಂಜಾನೆಯಲ್ಲಿ ಸಸಿಗಳನ್ನು ನಾಟಿ ಮಾಡಿ
ಪ್ರಕೃತಿಯ ಜೊತೆಗೆ ಅವನ ಒಡನಾಟ ನೋಡಿ....
ಭೂತಾಯಿ ಮಡಿಲಲ್ಲಿ ನಲಿಯುವ ಕಂದ...
ಅವಳನ್ನು ಹಸಿರಿನಿಂದ ಸಿಂಗರಿಸುವ ರೀತಿ ಚೆಂದ....
ಕೋಟಿ-ಕೋಟಿ ಸಂಪತ್ತಿದ್ದರೂ ಅದು ಸಹಜ...
ನಿನ್ನ ಮೊರೆ ಹೋಗದೆ ಇರುವವನೇ ಮನುಜ.
ಕಷ್ಟದ ಜೀವನಕ್ಕೆ ಇವನೇ ಜೀವಂತ ಉದಾಹರಣೆ...
ಅವನೇ ಎಲ್ಲರ ಹಸಿವನ್ನೂ ನೀಗಿಸುವುದು ದೇವರಾಣೆ....
ಸುಡುವ ಸೂರ್ಯ ಈ ಜಗತ್ತಿನ ಕಣ್ಣು....
ಕೃಷಿ ಮಾಡುವ ಭೂಮಿ ರೈತನ ಹೊನ್ನು....
ನೆತ್ತಿಯಮೇಲೆ ಬಿಸಿಲು ಬಂದರು ದುಡಿಯುವ.... ಆಡಂಬರವಿಲ್ಲದ ಜೀವನಕ್ಕೆ ನಲಿದಾಡುವ....
ಹೊಲದಲ್ಲಿ ಅವನು ಹರಿಸುವನು ಬೆವರು ಅವನಿಂದಲೇ ಎಲ್ಲರಿಗೂ,...ಸಿಗುತ್ತದೆ ಅನ್ನ ನೀರು...
ಮೈಯೆಲ್ಲಾ ಕೆಸರಿನಲ್ಲಿ ದುಡಿವವನು....
ಭೂ ತಾಯಿಯ ಸೇವೆಯಲ್ಲೇ ಸವಿದನು...
ಹೆಂಗಸರು- ಗಂಡಸರು ಒಟ್ಟಾಗಿ ದುಡಿಯುತ್ತಾರೆ....
ಒಬ್ಬರಿಗೊಬ್ಬರು ಹೆಗಲು ಕೊಟ್ಟು ಬೇಸಾಯ ಮಾಡುತ್ತಾರೆ....
ಕೃಷಿ ಎಲ್ಲರ ಜೀವನದ ಹಸಿರು....
ಕೃಷಿ ಕರ್ತನೆ ಎಲ್ಲರ ಉಸಿರು....
ರೈತನು ನಿಷ್ಠಾವಂತ..... ಅವನೇ ಕಣ್ಣಿಗೆ ಕಾಣೋ ಭಗವಂತ.
ಭೂಮಿ ಫಲವತ್ತಾದರೆ ಮನಸ್ಸು ಹಸಿರಾಗಿರುತ್ತದೆ ಎಂಬುದನ್ನು ತಿಳಿಸಿದ್ದಾನೆ....
ಭಾರ್ಗವಿ ಪಿ.
ಬೆಂಗಳೂರು

0 Comments