ಕೊಳ್ಳೇಗಾಲ ಸುದ್ದಿ : ಪವಾಡ ಪುರುಷ ಘನ ನೀಲಿ ಸಿದ್ದಪ್ಪಾಜಿಯ ಪಾರಂಪರಿಕ ಚಿಕ್ಕಲ್ಲೂರು ಜಾತ್ರೆ ಮಹೋತ್ಸವ ಮೊದಲ ದಿಂದ ತುಂಬು ಹುಣ್ಣಿಮೆಯ ಚಂದಿರನ ಬೆಳಕಿನಲ್ಲಿ ಬೊಪ್ಪೆಗೌಡನ ಪುರದ ಪೀಠಾಧಿಕಾರಿಗಳಾದ ಶ್ರೀ ಜ್ಞಾನನಂದ ಚನ್ನರಾಜೇ ಅರಸ್ ರವರ ಅಗ್ನಿ ಸ್ಪರ್ಶದಿಂದ ಪ್ರಾರಂಭವಾಯಿತು,
ನೀಲಗಾರ ಪರಂಪರೆಯಂತೆ ಚಿಕ್ಕಲ್ಲೂರಿನ ಹಳೆ ಮಠದಿಂದ ಕುರುಬನ ಕಟ್ಟೆ ಕಂಡಾಯಗಳನ್ನು ಹೂ ಹೊಂಬಾಳೆಗಳಿಂದ ಅಲಂಕಾರ ಮಾಡಿಕೊಂಡು ಸಿದ್ದಪ್ಪಾಜಿ ಗದ್ದುಗೆ ಮಠಕ್ಕೆ ತಂದು ಮಠದಲ್ಲಿ ವಿಧಿ ವಿಧಾನಗಳಂತೆ ಪೀಠಾಧಿಕಾರಿ ಜ್ಞಾನನಂದ ಚನ್ನರಾಜೇ ಅರಸ್ ರವರು ಪೂಜಾ ಕೈಂಕಾರ್ಯಗಳನ್ನು ನಡೆಸಿ ಸುಮಾರು 10:45 ಸಮಯದಲ್ಲಿ ಚಂದ್ರ ಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಿದರು, ನಂತರ ಚಂದ್ರ ಮಂಡಲ ಹೊತ್ತಿ ಉರಿಯಿತು ಹಿರಿಯರ ನಂಬಿಕೆಯಂತೆ ಚಂದ್ರ ಮಂಡಲ ಹೆಚ್ಚಾಗಿ ಉರಿದರೆ ಈ ವರ್ಷ ಮಳೆ ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ಭಾವನೆಯಿಂದ ಚಂದ್ರಮಂಡಲಕ್ಕೆ ಭಕ್ತಿ ಪೂರ್ವಕವಾಗಿ ನಮಿಸಿ ಹರ್ಷೋದ್ಘಾರರದಿಂದ ಸಿದ್ದಪ್ಪಾಜಿ ಸ್ವಾಮಿಗೆ ಜೈಕಾರವನ್ನು ಕೂಗಿದರು,
ಮಠದ ಆಡಳಿತಧಿಕಾರಿ ಸನ್ಮತಿ ಚನ್ನರಾಜೇ ಅರಸ್ ರವರ ಉಸ್ತುವಾರಿಯಲ್ಲಿ ಪ್ರಾರಂಭವಾದ ಜಾತ್ರೆ ಜ್ಞಾನನಂದ ಚನ್ನರಾಜೇ ಅರಸ್ ರವರ ಅಗ್ನಿ ಸ್ಪರ್ಶದ ಚಂದ್ರ ಮಂಡಲೋತ್ಸವ ಮೂಲಕ ಐದು ದಿನಗಳು ನಡೆಯುವ ಐತಿಹಾಸಿಕ ಜಾತ್ರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು,
ಕೋವಿಡ್ 19 ನಿಂದ ಎರಡು ವರ್ಷಗಳ ನಂತರ, ನಡೆಯಿತ್ತಿರುವ ಚಿಕ್ಕಲ್ಲೂರು ಜಾತ್ರೆಗೆ ಮೊದಲ ದಿನವೇ ಲಕ್ಷಾಂತರ ಆಗಮಿಸಿದ್ದರು, ಪೊಲೀಸ್ ಬಿಗಿ ಭದ್ರತೆಯಲ್ಲಿ ಚಿಕ್ಕಲ್ಲೂರು ಜಾತ್ರೆಯ ಚಂದ್ರ ಮಂಡಲ ಲಕ್ಷಾಂತರ ಭಕ್ತರ ಜೈಕಾರದೊಡನೆ ವಿಜೃಂಭಣೆಯಿಂದ ನಡೆಯಿತು,
ಈ ಸಂದರ್ಭದಲ್ಲಿ ಮಠದ ಆಡಳಿತಧಿಕಾರಿ ಸನ್ಮತಿ ಚನ್ನರಾಜೇ ಅರಸ್, ಚಿಕ್ಕಲ್ಲೂರು ಬುದ್ದಿಯವರಾದ ಶಿವನಂಜಪ್ಪ ಕೊಳ್ಳೇಗಾಲ ಮಾಜಿ ಶಾಸಕ ಎ.ಆರ್. ಕೃಷ್ಣ ಮೂರ್ತಿ, ತಂಬಡಿಗಳಾದ ಶಿವಸ್ವಾಮಿ, ಶಿವಮೂರ್ತಿ, ಶಿವಣ್ಣ, ಹಾಗೂ ಇನ್ನಿತರರು ಇದ್ದರು .


0 Comments