Ticker

6/recent/ticker-posts

Ad Code

Responsive Advertisement

ಕನ್ನಡ ನಾಡಿನ ಕುಲ ಕೋಟಿ ಕಾವ್ಯ ಸಾರ್ವಭೌಮನಿಗೆ ನಮನ!

ಎಲ್ಲಾದರೂ ಇರು ಎಂತಾದರೂ ಇರು ಎಂದೆದಿಗೂ ನೀ ಕನ್ನಡಿಗನಾಗಿರು ಎಂಬ ನುಡಿ ಗೋಷವನ್ನು  ಎತ್ತಿ  ಇಡಿದ ಧೀಮಂತ ನಾಯಕ ಕುವೆಂಪು. ಅವರ ಜನ್ಮ ದಿನಾಚರಣೆಯನ್ನು  ಬೆಂಗಳೂರಿನ ಶಾಂತಿನಗರ  ನಂಜಪ್ಪ ಸರ್ಕಲ್ ಬಳಿ ಇರುವ ರಿಚ್ಮೆಂಟ್ ಟೌನ್ ಉದ್ಯಾನವನದಲ್ಲಿ ಜಾಗೃತಿ ಟ್ರಸ್ಟ್ (ರಿ) ವತಿಯಿಂದ ರಾಷ್ಟ್ರಕವಿ ಕುವೆಂಪುರವರ ಹುಟ್ಟು ಹಬ್ಬದ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಸಂಗೀತ, ಸಾಹಿತ್ಯ ಸಂಭ್ರಮ ಹಾಗೂ ಕವಿಗೋಷ್ಠಿ ,ಸಾಧಕರಿಗೆ ಸನ್ಮಾನ, ಸಮಾರಂಭ ಏರ್ಪಡಿಸಲಾಯಿತು.



 ಕಾರ್ಯಕ್ರಮಕ್ಕೆ ಶಾಂತಿನಗರ ಶಾಸಕರಾದ ಎನ್.ಎ ಹ್ಯಾರಿಸ್ ರವರು ಉದ್ಘಾಟಿಸಿ. 

ಇಂದಿನ ಕಾಲಘಟ್ಟದಲ್ಲಿ ಕಲೆಗಳು ನಶಿಸಿ ಹೋಗುತ್ತಿವೆ. ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಪರಂಪರೆಯನ್ನು ನಾವು ಉಳಿಸಬೇಕು ಮತ್ತು ಬೆಳೆಸಬೇಕು. ನಾವು ಅವರನ್ನು ಜನ್ಮದಿನದಂದೇ ಅಲ್ಲ ಪ್ರತಿದಿನವೂ ಅವರನ್ನು ಸ್ಮರಿಸಬೇಕು ಅವರ ಕವಿತೆ ಅವರ ತತ್ವ ಆಲಿಸಿದರೆ ಸಾಕು ನಮ್ಮ ಜೀವನ ಪ್ರಕಾಶಮಾನವಾಗಿರುತ್ತದೆ. ಸರ್ವರಿಗೂ ಸರ್ವ ರೋಗಗಳು ನಿವಾರಣೆಯಾಗುತ್ತದೆ. ಯಾವ ಕಾಯಿಲೆ ಸಹ ಬರುವುದಿಲ್ಲ. 

ಕನ್ನಡದ ಪದಗಳನ್ನು ಆನಂದಿಸಿದರೆ ಸಾಲದು ಅದು ಪ್ರತಿದಿನವೂ ನಮ್ಮ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಬೆಳಗಿ  ಬೇರೂರಬೇಕು.

ಜೀವನದಲ್ಲಿ ಸಿಗುವಂತ ಅವಕಾಶಗಳನ್ನು ಅವಶ್ಯಕವಾಗಿ ಬಳಸಿಕೊಂಡು ನಿರಂತರವಾಗಿ ಪರಿಶ್ರಮವಯಿಸಿದರೆ ಉತ್ತಮ ಸ್ಥಾನ ಮಾನಗಳಿಸುವುದು ಸುಲಭ. 

ಸಹಜವಾಗಿ ನಾವು ದುಡಿಯುವ ಒಂದು ಭಾವ ಸಮಾಜದ ಏಳಿಗೆಗಾಗಿ

ಕೈ ಚಾಚಿದರೋ ಮಾತ್ರ ಅರ್ಥ ಪೂರ್ಣವಾದ ಜೀವನ ನಮ್ಮದಾಗುತ್ತದೆ. 

ಈ ದಿನದ ಕಾಲಘಟ್ಟಗಳಲ್ಲಿ ಒಂದು ಒಂದು ಕಾರ್ಯಕ್ರಮ ಮಾಡುವುದೇ ಕಷ್ಟಕರ ಅದರಲ್ಲೂ ಎಲ್ಲರ ಸಹಮತ ಪಡೆದು ಕೈ ಜೋಡಿಸಿ ಶಾಂತಿನಗರದಲ್ಲಿ ಕಾರ್ಯಕ್ರಮ ಮಾಡಿರುವ ಬಿ.ನಾಗೇಶ್ ರವರು

ಕನ್ನಡ ನಾಡು ನುಡಿ ಏಳಿಗೆಗಾಗಿ ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಬಡವರಿಗೆ ಉಚಿತ ಆರೋಗ್ಯ ತಪಾಸಣೆ ಬ್ಲಡ್ ಕ್ಯಾಂಪ್ ಮಧು ದೇಹ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಚಿಕಿತ್ಸೆಯನ್ನು ಹಾಗೂ ಬಡವರ ಕಷ್ಟಗಳನ್ನು ಆಲಿಸಿ ಬಡವರಿಗೆ ದವಸ ಧಾನ್ಯಗಳನ್ನು ದಿನಸಿ ಪದಾರ್ಥಗಳನ್ನು ವಿತರಣೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಜಾಗೃತಿ ಟ್ರಸ್ಟ್ ನ  ರಾಜ್ಯಾಧ್ಯಕ್ಷರಾದ

ಬಿ.ನಾಗೇಶ್ ರವರು ಇತ್ತೀಚಿಗೆ ನಾಲ್ಕು ಪುಸ್ತಕ ಪ್ರಕಾಶನ ಕಿರುಚಿತ್ರ ನಿರ್ಮಾಣ ಬಿಡುಗಡೆ ಶಶಿಧರ್ ಕೋಟೆ ರವರಿಂದ ಗೀತೆ ಆಲ್ಬಮ್ ಬಿಡುಗಡೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮಹಿಳೆಯರಿಗೆ ಕೆಂಪಮ್ಮ ಪುರಸ್ಕಾರ ಮಾಡುತ್ತಿರುವುದು ಅಸಾಧ್ಯದ ಮಾತಲ್ಲ ಇವರನ್ನ  ಕನ್ನಡದ ಕಟ್ಟಳು ಎಂದು ಕರೆದರೆ ತಪ್ಪಗಲಾರದು. 

ಇಂತಹ ಕಾರ್ಯಕ್ರಮಗಳು ನಾಗೇಶ್ ರವರು ಇನ್ನು ಹೆಚ್ಚು ಹೆಚ್ಚು ಮಾಡಬೇಕು. 

ಪ್ರಾಮಾಣಿಕ ಮನೋಭಾವ ಚಿಂತನೆಯನ್ನು ಸಮಾಜದ ಪ್ರತಿಯೊಬ್ಬ ಯುವಕ ಯುವತಿಯರು ಬೆಳೆಸಿಕೊಳ್ಳಬೇಕು. ಕನ್ನಡ ಪರ ಹೋರಾಟಕ್ಕೆ  ಮತ್ತಷ್ಟು ಕೈ ಜೋಡಿಸಲಿ ಕನ್ನಡದ ಕಟ್ಟಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ

 ಎಂದು ಒಂದೆರಡು ನುಡಿಮುತ್ತುಗಳನ್ನಾಡಿದರು. 

ಇನ್ನು ಕಾರ್ಯಕ್ರಮದಲ್ಲಿ ನಾಡ ಪ್ರಭು  ಕೆಂಪೇಗೌಡ ಅದ್ಯಕ್ಷರು. 

ಶ್ರೀ ಪಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು ಇನ್ನು  ಜಾಗೃತಿ ಟ್ರಸ್ಟ್  ವೇದಿಕೆಯ ರಾಜ್ಯಾದ್ಯಕ್ಷರಾದ ಶ್ರೀ ಬಿ.ನಾಗೇಶ್ ರವರು ಸ್ವಾಗತ ಭಾಷಣ ಮತ್ತು  ಶ್ರೀಮತಿ ಗೀತಾ ವಿ. ಆರ್ ಬೆಂಗಳೂರು ಇವರು ಕಾರ್ಯಕ್ರಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದು. 

ವೆಂಕಟೇಶ್, ಅಬ್ಬಾಸ್  ,ಮಿರ್ಜಾ. ಮೊಹಮದ್ ಇಸ್ಮಾಯಿಲ್

 ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ 

ಕವಿಗಳಾದ ಭಾರ್ಗವಿ.ಪಿ  ಸುಶ್ಮಿತಾ.ಕೆ ,ಸುಧಾ ಕಂದಕೂರ ಶಿವಮೊಗ್ಗ , ಕುಮಾರಿ. ಅಶ್ವಿನಿ ಚಂದ್ರಪ್ಪ ಆನೇಕಲ್,ಡಾಕ್ಟರ್ ದೀಪಾ ಹಿರೇಮಠ , ಗೀತಾ ರಂಗನಾಥ್ ,ಅನಿತಾ ಪಿ. ಕೆ ರಾಕೇಶ್.ಡಿ ವೀರಾಪುರ ಅವರುಗಳಿಗೆ  ನೆನಪಿನ ಕಾಣಿಕೆ ನಾಮಫಲಕ ಪ್ರಶಸ್ತಿ ಪತ್ರ ವಿತರಿಸಿ ಹೃತ್ಪೂರ್ವಕವಾಗಿ ಗೌರವಿಸಲಾಯಿತು.


ವರದಿ:

ನಿಶ್ಚಯ್ ಕುಮಾರ್.ಎ ಬೆಂಗಳೂರು

Post a Comment

0 Comments

Ad Code

Responsive Advertisement