Ticker

6/recent/ticker-posts

Ad Code

Responsive Advertisement

ತೆಳ್ಳನೂರು ಗ್ರಾಮದ ವಕೀಲನಿಂದ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿ,

 ಕೊಳ್ಳೇಗಾಲ ಸುದ್ದಿ : ಪಶು ಸಂಗೋಪನೆ ಇಲಾಖೆಯಿಂದ ತೆಳ್ಳನೂರು ಗ್ರಾಮದಲ್ಲಿ  ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದ್ದು ಗ್ರಾಮದಲ್ಲಿ ಈ ಹಿಂದೆ ಇದ್ದ ಹಳೆಯ ಆಸ್ಪತ್ರೆಯನ್ನು ಡೆಮೋನೆಷನ್ ಮಾಡಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ,

ಸುಮಾರು 1954 ಸಂದರ್ಭದಲ್ಲಿ ತೆಳ್ಳನೂರು ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಪಶು ವೈದ್ಯಕೀಯ ಆಸ್ಪತ್ರೆ ಯನ್ನು ಕಟ್ಟಿಸಲಾಗಿತ್ತು, ಅ ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದ ಕಾರಣ, ಹಳೆ ಆಸ್ಪತ್ರೆಯನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದೂ, ಇದೆ ಗ್ರಾಮದ ವಕೀಲರಾದ ಪುಟ್ಟಸಿದ್ದೇಗೌಡ ಎಂಬುವರು ಅವರ ಅಣ್ಣ ಮಕ್ಕಳು ಸುಕುಸುಮ್ಮನೆ ತಕರಾರು ತೆಗೆದು ಈ ಜಾಗ ನಮಗೆ ಸೇರಿದ್ದು ಎಂದು ಹೇಳಿಕೊಂಡು ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡಿಸುತ್ತಿದ್ದಾರೆ ಎನ್ನಲಾಗಿದೆ,

ಆಸ್ಪತ್ರೆಯ ಬಳಿ ಇವರ ಜಮೀನು ಇರುವುದರಿಂದ ಅದನ್ನೇ ನೆಪ ಮಾಡಿಕೊಂಡು ಆಸ್ಪತ್ರೆ ಜಾಗ ನಮಗೆ ಸೇರಿದ್ದು ತಕರಾರು ತೆಗೆದು ಕೆಲಸ ನಿಲ್ಲಿಸುವಂತೆ ಕಟ್ಟಡ ಕಾರ್ಮಿಕರ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ,

ಈ ಹಿಂದೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ರಾಜೀವ್ ಗಾಂಧಿ ಮಾಹಿತಿ ಕೇಂದ್ರದ ಕಟ್ಟಡದ ಕೆಲಸಕ್ಕು ಅಡ್ಡಿ ಪಡಿಸಿ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸಿ ದೌರ್ಜನ್ಯ ನಡೆಸುತ್ತ ಗ್ರಾಮಸ್ಥರು ಆಕ್ರೋಶಕ್ಕೆ ಕಾರಣರಾಗಿದ್ದಾರೆ,

ಸ್ವತಃ ತೆಳ್ಳನೂರು ಗ್ರಾಮದವರೇ ಆದ ಪುಟ್ಟಸಿದ್ದೇಗೌಡರು ಜವಾಬ್ದಾರಿಯುತ ವಕೀಲರಾಗಿದ್ದು ಗ್ರಾಮದಲ್ಲಿ ನಡೆಯುವ ಗ್ರಾಮೂಪಯೋಗಿ ಕೆಲಸಗಳಿಗೆ ಅಡ್ಡಿ ಪಡಿಸಿ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ,

ತೆಳ್ಳನೂರು ಹಾಗೂ ಪಕ್ಕದ ಮಾಸ್ತಿಗೌಡನ ದೊಡ್ಡಿ, ಬಾಳಗುಣುಸೆ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆ ಜಾನುವಾರುಗಳು ಆಡು ಕುರಿಗಳು ಇರುವುದರಿಂದ ತೆಳ್ಳನೂರು ಗ್ರಾಮದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಇರುವುದರಿಂದ ತುಂಬಾ ಅನುಕೂಲವಾಗುತ್ತಿತ್ತು,

ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣದಿಂದ ಮೊದಲಿನಂತೆ ತುಂಬಾ ಅನುಕೂಲವಾಗುತ್ತದೆ ಆದರೂ ಸಹ ಒಬ್ಬ ಜವಾಬ್ದಾರಿ ಇರುವ ವಕೀಲರಾಗಿರುವ ಪುಟ್ಟಸಿದ್ದೇಗೌಡರು ತಮಗೆ ಸಂಬಂಧವೆ ಇಲ್ಲದ ಜಾಗದ ಬಗ್ಗ ತಕರಾರು ತೆಗೆದು ಕಟ್ಟಡಗಳ ನಿರ್ಮಾಣಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಈ ಪ್ರಕರಣದ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು  ದಾಖಲಾಗಿದೆ ಎನ್ನಲಾಗಿದೆ,

ಪುಟ್ಟಸಿದ್ದೇಗೌಡರ ಜಮೀನಿನ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ 30 ಅಡಿ ರಸ್ತೆ ಇದ್ದು ರಸ್ತೆಯ ಬಲ ಭಾಗದಲ್ಲಿ ಆಸ್ಪತ್ರೆ ಕಟ್ಟಡ ಇತ್ತು ಹಾಗೂ ಕೆಲವು ಗ್ರಾಮಸ್ಥರ ಮನೆಗಳು ನಿರ್ಮಾಣವಾಗಿವೆ, ಆದರೂ ತಮ್ಮ ದುರಾಸೆಯಿಂದ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ನಿರ್ಮಾಣ ಮಾಡಿಕೊಂಡಿದ್ದು ಅಲ್ಲದೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೂ ಅಡ್ಡಿ ಪಡಿಸಿ ಗ್ರಾಮಕ್ಕೆ ಕೆಡಕು ಮಾಡುತ್ತಿದ್ದಾರೆ. ಅಧಿಕಾರಿಗಳು ಈ ಕೃತ್ಯದ ಬಗ್ಗೆ ಕ್ರಮ ಜರುಗಿಸಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರ ಅಗ್ರಹ ...

Post a Comment

0 Comments

Ad Code

Responsive Advertisement