Ticker

6/recent/ticker-posts

Ad Code

Responsive Advertisement

ಬಿಜೆಪಿ ಮುಖಂಡ ವೆಂಕಟೇಶ್ ಅವರಿಗೆ ಉತ್ತಮ ಬೆಂಬಲ, ಹಳ್ಳಿ ಹಳ್ಳಿಯಲ್ಲಿಯೂ ವೆಂಕಟೇಶ್ ಪರ ಜೈಕಾರ,

 ಹನೂರು ಕ್ಷೇತ್ರದಲ್ಲಿ  ಬಿ. ವೆಂಕಟೇಶ್ ನೇತೃತ್ವದಲ್ಲಿ ಅಬ್ಬರದಿಂದ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಯಾತ್ರೆ  ಮನೆ ಮನೆಗೂ ಕರ ಪತ್ರ ಹಂಚಿಕೆ

ಬಿಜೆಪಿ ಸಂಘಟನೆಯ ಶಕ್ತಿ ಯುವಕರಿಗೆ ಸ್ಫೂರ್ತಿ ಬಿ. ವೆಂಕಟೇಶ್ ರವರು ಸರ್ಕಾರದ ಯೋಜನೆಗಳು ಹಾಗೂ ಜನರಿಗೆ ಒದಗಿಸಿರುವ ಸೇವೆಗಳನ್ನು ಜನರಿಗೆ ಮನವರಿಕೆ ಮಾಡುತ್ತಾ ಬಿಜೆಪಿ ಪಕ್ಷವನ್ನು ಬಲ ಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ, ಎನ್ನಲಾಗಿದೆ 

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೇಟ್ ಗಾಗಿ ಹಲವಾರು ವ್ಯಕ್ತಿಗಳ ಹಾವು ಏಣಿ ಆಟ ಪ್ರಾರಂಭವಾಗಿದ್ದು,  ಪಕ್ಷದ ಹಿರಿಯ ಮುಖಂಡರ  ಮನಸ್ಸನ್ನು ಸೆಳೆದು ಟಿಕೇಟ್ ಗಿಟ್ಟಿಸಿಕೊಳ್ಳಲು ಹಲವಾರು ವ್ಯಕ್ತಿಗಳು ನಾನಾ ವಿಧಗಳಲ್ಲಿ ಕಸರತ್ತು ನಡೆಸುತ್ತಿದ್ದಾರೆ,

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತು ಮನೆ ಸೇರಿದ ನಂತರ ಕ್ಷೇತ್ರದಲ್ಲಿ ಮತ್ತೆಲ್ಲಿಯೂ  ಕಾಣಿಸಿಕೊಂಡಿರಲಿಲ್ಲ, ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸುವುದಕ್ಕೂ ಹಾಗೂ ಪಕ್ಷದ ಮುಂದಿನ ನಡೆಯ ಬಗ್ಗೆ ಮಾರ್ಗದರ್ಶನ ಮಾಡುವುದಕ್ಕೂ ಸಹ ದಾವಿಸದೆ ಕಾರ್ಯಕರ್ತರಲ್ಲಿ ನಿರಾಶೆ ಉಂಟಾಗಿತ್ತು ಎನ್ನಲಾಗಿದೆ,  ಮತ್ತು ಇತ್ತೀಚಿಗೆ ಪಕ್ಷದ ಟಿಕೇಟ್ ಗಾಗಿ ಪೈಪೋಟಿ ನಡೆಸುತ್ತಿರುವ ಬೇರೆ ಯಾರು ಸಹ ಬಿಜೆಪಿ ಪಕ್ಷದ ಅಳಿವು ಉಳಿವಿನ ಬಗ್ಗೆ ಗಮನ ಹರಿಸಿರಲಿಲ್ಲ,

ಕ್ಷೇತ್ರದವರೇ ಆಗಿದ್ದರು ಸಹ ಇವರು ಯಾರು ಎಂದು ಕ್ಷೇತ್ರದ ಜನತೆಗೆ ತಿಳಿದಿರಲಿಲ್ಲ ,

ಹನೂರು ಕ್ಷೇತ್ರದಲ್ಲಿ ಬಿಜೆಪಿ ಆತಂತ್ರ ಸ್ಥಿತಿಗೆ ತಲುಪಿದ್ದು  ಬಿಜೆಪಿಯ ಕಾರ್ಯಕರ್ತರು ನಾನಾ  ಪಕ್ಷಗಳಿಗೆ ಸೇರ್ಪಡೆಗೊಂಡು ಕ್ಷೇತ್ರದಲ್ಲಿ ಬಿಜೆಪಿ ಶೂನ್ಯ ಹಂತಕ್ಕೆ ತಲುಪಿ ಹನೂರು ಕ್ಷೇತ್ರದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತ ಸ್ಥಿತಿಗೆ ತಲುಪಿತ್ತು ಎನ್ನಲಾಗಿದೆ, ಇದೆ ಸಂದರ್ಭದಲ್ಲಿ ಹನೂರು ಕ್ಷೇತ್ರದಲ್ಲಿ ಜನಾಶ್ರಯ ಟ್ರಸ್ಟ್ ಮೂಲಕ ಕ್ಷೇತ್ರದಲ್ಲಿ ಸೇವೆಯನ್ನು ಮಾಡುತ್ತಿದ್ದ  ಜನಧ್ವನಿ ಬಿ. ವೆಂಕಟೇಶ್ ರವರು  ಕ್ಷೇತ್ರದ ಉದ್ದಗಲಕ್ಕೂ ಸಂಪರ್ಕವನ್ನಿಟ್ಟುಕೊಂಡು ಅರೋಗ್ಯ ಶಿಬಿರಗಳ ಮೂಲಕ, ಅನಾರೋಗ್ಯ ಪೀಡಿತ ವ್ಯಕ್ತಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತ, ಜೊತೆ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಎರಡು ಆಂಬುಲೆನ್ಸ್ ಗಳನ್ನು ವ್ಯವಸ್ಥೆ ಮಾಡಿ ಗಂಭೀರ ಸ್ಥಿತಿಗೆ ತಲುಪಿದವರನ್ನು ದೂರದ ಪಟ್ಟಣಗಳ ಆಸ್ಪತ್ರೆ ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ,   ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದ  ಅಗತ್ಯ ಸೇವೆಗಳನ್ನು ಮಾಡುತ್ತಾ,, ಒಂದೊಂದು ಗ್ರಾಮಗಳಿಗೂ ಹೋಗಿ ಬಡವರ,  ನಿರ್ಗತಿಕರ ಸಮಸ್ಯೆಗಳನ್ನು ಕೇಳಿ ಅವರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಮಾಡಿಸುತ್ತ, ನೊಂದವರಿಗೆ ಆಸರೆಯಾಗಿ ನಿಂತು ಬಡವರ ಮಕ್ಕಳ  ಶಿಕ್ಷಣಕ್ಕೆ ಸಹಾಯಧನವನ್ನು ಕೊಟ್ಟು ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವ ಮೂಲಕ ನಿಷ್ಕಲ್ಮಶ ಸೇವೆಗಳನ್ನು ಮಾಡುತ್ತಿದ್ದಾರೆ ಜೊತೆಗೆ ಗ್ರಾಮಗಳ ದೇವಾಲಯಗಳ ಅಭಿವೃದ್ಧಿಗೆ ಸಹಾಯ ಹಸ್ತವನ್ನು ನೀಡಿತ್ತ,  ಕುಡಿಯುವ ನೀರಿನ ಸಮಸ್ಯೆ ಇದ್ದಂತ ಗ್ರಾಮಗಳಿಗೆ ಸ್ವತಃ ತಮ್ಮ ಹಣದಿಂದಲೇ ಕೊಳವೆ ಬಾವಿಯನ್ನ ಕೊರೆಯಿಸಿ ನೀರಿನ ಸೌಲಭ್ಯಗಳನ್ನ ಮಾಡಿಸಿಕೊಟ್ಟಿದ್ದಾರೆ ಎನ್ನಲಾಗಿದೆ,

ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಾದ ಹಿಂಡಿನತ್ತ, ಪಡಸಲನತ್ತ, ದೊಡ್ಡಾರೇ, ಚಿಕ್ಕಾರೆ, ನಾಗಮಲೆ, ಹೊನ್ನ ಮೇಟಿ,

ಮೂಗವಾರೆ,  ಕೊಮ್ಮನಡಿಕ್ಕಿ, ತಪಾಸರೆ ಹಾಗೂ ಇನ್ನಿತರ ರಸ್ತೆ ಸಂಪರ್ಕ ಹಾಗೂ ವಾಹನ ಸಂಪರ್ಕ ಇಲ್ಲದ ಗ್ರಾಮಗಳಿಗೆ 15 ರಿಂದ 20 ಕಿ. ಮೀ ಗಳ ವರೆಗೂ ಕಾಲು ನಡಿಗೆಯಲ್ಲಿಯೇ ಹೋಗಿ ಅ ಗ್ರಾಮಗಳ ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ, ಆರೋಗ್ಯ ಸಮಸ್ಯೆಗಳನ್ನು ಬಗ್ಗೆ ಕಾಳಜಿ ಸಂಬಂಧ ಪಟ್ಟ ಸಚಿವರ ಜೊತೆ ಅಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮನವಿ ಪತ್ರಗಳನ್ನು ಕೊಟ್ಟು ಅಲ್ಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಬಹುದು,

 ಜೊತೆ ಬಿಜೆಪಿ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಹೋಗಿದ್ದ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಕರೆ ತಂದು ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ,

ಹಾಗೂ ಗ್ರಾಮಾಂತರ  ಜನರಿಗೆ ಹಲವಾರು ರೀತಿಯ ಸೌಲಭ್ಯ ದೊರಕಿಸಲು ಅವಿರತ ಪ್ರಯತ್ನ ಮಾಡುತ್ತಾ ಜನಾಶ್ರಯ ಟ್ರಸ್ಟ್ ಮೂಲಕ ನಿರಂತರ ಜನರ  ಸೇವೆಯಲ್ಲಿ ತೊಡಗಿರುವ ಬಿ. ವೆಂಕಟೇಶ್ ರವರು ಈ ಭಾಗದ ಜನರ ಒತ್ತಾಯದ ಮೇರೆಗೆ ರಾಜಕೀಯ ರಂಗ ಪ್ರವೇಶ ಮಾಡಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷವನ್ನ ಆರಿಸಿಕೊಂಡು ನಾಲ್ಕೈದು ವರ್ಷಗಳಿಂದ ಹನೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಕ್ಷೇತ್ರದಲ್ಲಿ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿದ್ದ ಬಿಜೆಪಿ ಪಕ್ಷವನ್ನ ತಳ ಮಟ್ಟದಿಂದ ಸಂಘಟನೆ ಮಾಡಿ, ಸ್ಥಳೀಯ ಚುನಾವಣೆಯಾದ ಗ್ರಾಮ ಪಂಚಾಯಿತಿಯಲ್ಲಿ ವೆಂಕಟೇಶ್ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳು ಅತ್ಯಾಧಿಕ ಸಂಖ್ಯೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಬಿಜೆಪಿ ರಾರಾಜಿಸುವಂತೆ ಮಾಡಿದ್ದಾರೆ,

ಸಂಘಟನೆಯ ಜೊತೆಗೆ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿ ಪಕ್ಷದ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತ ಕ್ಷೇತ್ರದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಬುನಾದಿ ಹಾಕಿ ಯುವಕರಿಗೆ ಸ್ಫೂರ್ತಿಯ ಶಕ್ತಿಯಾಗಿದ್ದಾರೆ,

ವೆಂಕಟೇಶ್, ಎನ್ನಲಾಗಿದೆ 

ಜನಾಶ್ರಯ ಟ್ರಸ್ಟ್ ಮೂಲಕ ಸೇವೆ ಆರಂಭಿಸಿದ ವೆಂಕಟೇಶ್ ರವರು ಕ್ಷೇತ್ರದ ಜನತೆಯ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಹಿರಿಯ ನಾಯಕರ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಹಳ್ಳಿ ಹಳ್ಳಿಯಲ್ಲಿಯೂ ಬಿಜೆಪಿ ಭಾವುಟ  ಹಾರಾಡುವಂತೆ ಮಾಡಿ  ಬಿಜೆಪಿ ಪಕ್ಷವನ್ನು ಹೆಮ್ಮರವಾಗಿ ಬೆಳೆಸಿದ್ದಾರೆ, 


ಹನೂರಿನಲ್ಲಿ ಬಿಜೆಪಿ ಪಕ್ಷ ಸಂಘಟನೆ ಪ್ರಭಲವಾಗುತ್ತಿದ್ದಂತೆ ರಾಜಕೀಯ ಸಹವಾಸವೆ ಬೇಡ ಎಂದು ಮನೆಯಲ್ಲಿ ಕುಳಿತಿದ್ದವರು ಹಾಗೂ ಯಾರ್ಯಾರೋ ಉದ್ಯಮಿಗಳು ಪಕ್ಷದ ಅಭ್ಯರ್ಥಿಯೆಂದು ಗುರುತಿಸಿಕೊಂಡು

ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ನಡುವೆ ಗೊಂದಲವನ್ನುಂಟ್ಟು ಮಾಡುತ್ತ, ಹಿರಿಯ ನಾಯಕರ ಮನವೊಲಿಸಿ ಟಿಕೇಟ್ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ,

ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ  ಕಿಂಚಿತ್ತೂ ಶ್ರಮ ವಹಿಸದ ಸಮಯ ಸಾಧಕರು ಇಂದು ಟಿಕೇಟ್ ಗಾಗಿ ನಾ. ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ, 

ಜನರ ಧ್ವನಿ ಎಂದೇ ಹೆಸರುವಾಸಿಯಾಗಿರುವ ಬಿ. ವೆಂಕಟೇಶ್ ರವರು ಯಾವುದೇ ಅಪೇಕ್ಷೆ ಇಲ್ಲದೆ ಅಧಿಕ ಶ್ರಮ ವಹಿಸಿ ಹಗಲು ರಾತ್ರಿ ಎನ್ನದೆ ದುಡಿದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಪ್ರಭಲವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಹನೂರು ಕ್ಷೇತ್ರದ ಉದ್ದಗಲಕ್ಕೂ ಬಿಜೆಪಿ ಸಂಘಟನೆ ಪ್ರಬಲವಾಗಿ ನಡೆಯುತ್ತಿದ್ದು  ಗ್ರಾಮೀಣ ಭಾಗಗಳಲ್ಲಿ ಬಿ. ವೆಂಕಟೇಶ್ ಪರವಾಗಿ ಅಮೋಘವಾದ ಬೆಂಬಲ  ವ್ಯಕ್ತವಾಗುತ್ತಿದ್ದೂ ಬಿಜೆಪಿ ಪಕ್ಷ ವೆಂಕಟೇಶ್ ರವರಿಗೆ ಟಿಕೇಟ್ ಕೊಟ್ಟರೆ ಹನೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ,

ಯಾಕೆಂದರೆ ಹನೂರು ಕ್ಷೇತ್ರದಲ್ಲಿ ನಾಲ್ಕೈದು ವರ್ಷಗಳಿಂದ ತಳ ಮಟ್ಟಕ್ಕೆ ಬಿದ್ದಿದ್ದ ಬಿಜೆಪಿ ಪಕ್ಷವನ್ನ ಅಧಿಕ ಶ್ರಮ ವಹಿಸಿ ಹಳ್ಳಿ ಹಳ್ಳಿಗೂ ಹೋಗಿ ಸಂಘಟನೆ ಮಾಡುವಲ್ಲಿ ವೆಂಕಟೇಶ್ ರವರ ಶ್ರಮ ಪ್ರಬಲವಾಗಿದೆ,

ಇವತ್ತಿಗೂ ಹನೂರು ಕ್ಷೇತ್ರದಲ್ಲಿ ಬಿಜೆಪಿ ಉಳಿದಿರುವುದು ವೆಂಕಟೇಶ್ ರವರಿಂದ ಒಂದೊಂದು ಹಳ್ಳಿಯಲ್ಲೂ ಸಹ ಇವರ ಬೆಂಬಲಿಗರು ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿದ್ದಾರೆ , ಆದ್ದರಿಂದ ಪಕ್ಷದ ವರಿಷ್ಟರು ಬೇರೆ ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳದೆ ಯಾವುದೇ ಉಹಾಪೋಹಗಳಿಗೆ ಗಮನ ಕೊಡದೆ ಪಕ್ಷಕ್ಕಾಗಿ ನಿಜವಾಗಿ ಶ್ರದ್ದೆಯಿಂದ ದುಡಿಯುತ್ತಿರುವ  ವೆಂಕಟೇಶ್ ರವರ ಪರಿಶ್ರಮ ವನ್ನು ಅರ್ಥ ಮಾಡಿಕೊಂಡು ಇವರಿಗೆ ಟಿಕೇಟ್ ಕೊಟ್ಟರೆ ಹನೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ದ ಎಂಬುದು ಈ ಭಾಗದ ಕಾರ್ಯಕರ್ತರ ಹಾಗೂ ಹಲವಾರು ಸ್ಥಳೀಯರ ಅಭಿಪ್ರಾಯವಾಗಿದೆ.

Post a Comment

0 Comments

Ad Code

Responsive Advertisement