Ticker

6/recent/ticker-posts

Ad Code

Responsive Advertisement

ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

    ದಿನಾಂಕ 3-1-2023  ಮಂಗಳವಾರದಂದು ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ ವೃತ್ತಿನಿರತ ಪತ್ರಕರ್ತರ ಸಂಘದ ವತಿಯಿಂದ ಸರ್ವ ಸದಸ್ಯರ ಅಭಿಲಾಷೆಯಂತೆ ಜಿ. ರಾಮಾಚಾರ ಅವರನ್ನು ನೇಮಕ ಮಾಡಲಾಯಿತು.

ಈ ಸಂಬಂಧ ಸಂಘದ  ಗೌರವಾಧ್ಯಕ್ಷರ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. 

 ಹಿರಿಯ ಪತ್ರಕರ್ತ,ಹಂಸಲೇಖ ಪತ್ರಿಕೆ ಸಂಪಾದಕ ಜಿ ರಾಮಾಚಾರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ  ಶ್ರೀಯುತ ರಾಮಾಚಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

ವೇದಿಕೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರನ್ನು ಉದ್ದೇಶಿಸಿ ಹಿರಿಯ ಪತ್ರಕರ್ತ ಸಚಿವ ಶ್ರೀಧರ್ ಮಾತನಾಡಿ ಸಲಹೆ ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸಿದರು.

 ವೇದಿಕೆಯಲ್ಲಿ  ಹಿರಿಯ ಪತ್ರಕರ್ತ   ಸಚಿವ ಶ್ರೀಧರ್,ವೃತ್ತಿನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎನ್.ನಾಗರಾಜಪ್ಪ, ಸಂಘದ ಕಾನೂನು ಸಲಹೆಗಾರ ಜಿ.ಸಿ.ಈರೇಗೌಡ, ವಿಶಾಲ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್ ಶಿವದೇವ್, ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾಧ್ಯಕ್ಷ, ಡಾ.ಕೆ.ಶ್ರೀನಿವಾಸ್(ಮಿಂಚು)

ವಾರ್ತಾ ಜಾಲ ಪತ್ರಿಕೆ ಸಂಪಾದಕ  ಬಿ.ಕೆ.ಪ್ರಸನ್ನ,ಹಾಗೂ ಲೋಕಾಯುಕ್ತದಾಳಿ ಪತ್ರಿಕೆ6ಯ  ಡಿ.ಮುನಿರಾಜು ಅವರುಗಳು ಉಪಸ್ಥಿತರಿದ್ದರು. 




ಸಂಘದ ಪದಾಧಿಕಾರಿಗಳಾದ ರಂಗನಾಥ್ ಬಾಬು,ಎನ್ ನಾಗರಾಜಪ್ಪ,ಸಾರಾಂಗಪಾಣಿ,ಎಮ್ ಸಿ ಪಿ ರಾಜು,ಪಿ.ಆರ್ ಶಾಮಸುಂದರ್, ಉಮೇಶ್, ಬಸವರಾಜ್, ರಾದಮ್ಮ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

 ಈ ಸಂದರ್ಭದಲ್ಲಿ ವಾರ್ತಾಜಾಲ ಮೀಡಿಯಾ ಆಂಡ್ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 2023r ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ವೃತ್ತಿನಿರತ ಹಿರಿಯ ಕಿರಿಯ ಪತ್ರಕರ್ತರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

Post a Comment

0 Comments

Ad Code

Responsive Advertisement